ಚೆಟ್ಟಳ್ಳಿ, ಜ. ೨೦: ಕಳೆದ ವರ್ಷದ ಮಹಾಮಳೆಗೆ ತುತ್ತಾಗಿ ,ಪೊನ್ನಂಪೇಟೆಯ ಮತ್ತೂರಿನ ನಿವಾಸಿ ಪುತ್ತಮನೆ ಸುಧಿ ಮತ್ತು ಕುಟುಂಬ ಮನೆಯನ್ನು ಕಳೆದುಕೊಂಡಿತ್ತು. ಅವರನ್ನು ಗೋಣಿಕೊಪ್ಪದ ಲಯನ್ಸ್ ಕ್ಲಬ್ಬಿನ ಅಧ್ಯಕ್ಷರು ಹಾಗೂ ಸದಸ್ಯರು ಗುರುತಿಸಿ, ಪುತ್ತಮನೆ ಕುಟುಂಬಸ್ಥರ ಸಹಾಯದಿಂದ ಸುಮಾರು ರೂ. ೪ ಲಕ್ಷದ ವೆಚ್ಚದಲ್ಲಿ ಮನೆಯನ್ನು ನಿರ್ಮಿಸಿಕೊಡಲಾಯಿತು.
ಹಾಗೆಯೆ ಕ್ರಮವಾಗಿ ಕಳೆದ ಸಾಲಿನ ಮಳೆಗೆ ಸಿಲುಕಿ ಮನೆ ಕಳೆದುಕೊಂಡಿದ್ದ ಕೊಟ್ಟಗೇರಿಯ ಎರಡು ಕುಟುಂಬಗಳಿಗೂ ಮನೆಯನ್ನು ನಿರ್ಮಿಸಿಕೊಡಲಾಯಿತು. ಮುಂದುವರಿದು ಕ್ಲಬ್ಬಿನ ಸದಸ್ಯರು ಪಾಲಿಬೆಟ್ಟದ ಚೆಷೈರ್ ಹೋಮ್ಸ್ ಸಂಸ್ಥೆಗೆ ಮಳೆಕೊಯ್ಲು ಘಟಕವನ್ನು ಉದಾರವಾಗಿ ಸ್ಥಾಪಿಸಿಕೊಟ್ಟಿದ್ದಾರೆ.
ನಾಲ್ಕೇರಿ ಗ್ರಾಮದಲ್ಲಿ ವಾಸವಾಗಿದ್ದ ಕಚ್ಚಾಪನೇರಾ ಬಡ ವೃದ್ಧ ದಂಪತಿಗಳಿಗೆ ,ಎಪ್ಪತೈದು ಸಾವಿರ ವೆಚ್ಚದಲ್ಲಿ ಶೌಚಗೃಹವನ್ನು ನಿರ್ಮಿಸಿಕೊಟ್ಟಿದ್ದಾರೆ. ನಂತರ ಕ್ರಮವಾಗಿ ಕುಡಿಯುವ ನೀರಿನ ಪರಿಶುದ್ಧ ಘಟಕವಾದ ಬ್ಲೂಸ್ಟಾರ್ ಯಂತ್ರವನ್ನು, ಶಾರದಾ ಪ್ರೌಢ ಶಾಲೆ ಬೆಕ್ಕೆಸೊಡ್ಲೂರು ಶ್ರೀಮಂಗಲ ಪದವಿ ಪೂರ್ವ ಕಾಲೇಜು, ಭಗವತಿ ದೇವಸ್ಥಾನ ಕೈಕೇರಿ ಇವರಿಗೆ ತಲಾ ನಲ್ವತ್ತು ಸಾವಿರ ವೆಚ್ಚದಲ್ಲಿ ಅಳವಡಿಸಿಕೊಟ್ಟಿದ್ದಾರೆ.
ಮನೆ ಹಸ್ತಾಂತರ ಸಂದರ್ಭ ಲಯನ್ಸ್ ಜಿಲ್ಲಾ ರಾಜ್ಯಪಾಲ ಡಾಕ್ಟರ್ ಗೀತಾಪ್ರಕಾಶ್ ಲಯನ್ಸ್ ಸಂಸ್ಥೆಯ ಅಧ್ಯಕ್ಷ ಕೊಂಗAಡ ಅಚ್ಚಯ್ಯ, ಕಾರ್ಯದರ್ಶಿಯಾದ ಪುತ್ಥಮನೆ ಸ್ಮರಾನ್ ಶುಭಾಷ್, ಖಜಾಂಚಿ ಕರ್ತಮಾಡ ಸೋಮಣ್ಣ, ಪುತ್ಥಮನೆ ಶ್ರೀನಿವಾಸ್, ಮಾಪಂಗಡ ಯಮುನಾ ಚೆಂಗಪ್ಪ ಮುಂತಾದವರು ಹಾಜರಿದ್ದರು.