ಕೂಡಿಗೆ, ಜ. ೧೯: ಹುದುಗೂರು ಗ್ರಾಮದ ಉಮಾಮಹೇಶ್ವರ ದೇವಾಲಯದಲ್ಲಿ ಶ್ರದ್ಧಾಭಕ್ತಿಯಿಂದ ಚಂಡಿಕಾ ಹೋಮ ನಡೆಯಿತು. ಗಣಪತಿ ಹೋಮ, ಶ್ರೀ ಸ್ವಾಮಿಗೆ ವಿಶೇಷ ಪೂಜೆ ಬಳಿಕ ಚಂಡಿಕಾ ಹೋಮ ನಡೆಯಿತು.
ಕುಶಾಲನಗರ, ಹುದುಗೂರು, ಮದಲಾಪುರ, ಕೂಡಿಗೆ, ಹಾರಂಗಿ ವ್ಯಾಪ್ತಿಯ ನೂರಾರು ಭಕ್ತಾದಿಗಳು ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡಿದ್ದರು. ಕೇರಳದ ತಂತ್ರಿಗಳಾದ ಸಜಿ ನೇತೃತ್ವದಲ್ಲಿ ಪೂಜೆ ನೆರವೇರಿತು. ದೇವಾಲಯ ಸಮಿತಿಯ ಅಧ್ಯಕ್ಷ ಚಾಮಿ, ಕಾರ್ಯದರ್ಶಿ ಸುರೇಶ್, ಸೇರಿದಂತೆ ಸಮಿತಿಯ ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.