ಕೂಡಿಗೆ, ಜ. ೧೯: ಕೊರೊನಾ ನಿರೋಧಕ ಲಸಿಕಾ ಅಭಿಯಾನ ಕಾರ್ಯಕ್ರಮಕ್ಕೆ ದೇಶಾದ್ಯಂತ ಚಾಲನೆ ದೊರೆತ್ತಿದ್ದು, ಇದರ ಅಂಗವಾಗಿ ಕೂಡಿಗೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಕೇಂದ್ರದ ವೈದ್ಯಾಧಿಕಾರಿ ಡಾ. ತುಂಗಾ ಜ್ಯೋತಿ ಬೆಳಗುವುದರ ಮೂಲಕ ಚಾಲನೆ ನೀಡಿದರು. ಕೂಡಿಗೆ-ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕರಿಗೆ ಆರೋಗ್ಯ ಸಹಾಯಕರಿಗೆ ಕೋವಿಡ್ ಲಸಿಕೆಯನ್ನು ನೀಡಲಾಯಿತು. ಪ್ರಥಮ ಹಂತವಾಗಿ ಈ ಕೇಂದ್ರದಲ್ಲಿ ೬೪ ಆರೋಗ್ಯ ಇಲಾಖೆಗೆ ಒಳಪಡುವವರಿಗೆ ನೀಡಲಾಯಿತು.