ಕರಿಕೆ, ಜ. ೧೯: ಅಯೋಧ್ಯೆಯಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಭವ್ಯ ಶ್ರೀ ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನಕ್ಕೆ ಕರಿಕೆ ಭಾಗದಲ್ಲಿ ಅಲ್ಲಿನ ಶ್ರೀ ವನಶಾಸ್ತಾವು ದೇವಲಾಯದ ಭಜನಾ ಮಂದಿರದಲ್ಲಿ ಪೂಜೆ ಸಲ್ಲಿಸುವುದರ ಮೂಲಕ ಚಾಲನೆ ನೀಡಲಾಯಿತು.
ಭಜನಾ ಮಂದಿರದ ಗುರುಸ್ವಾಮಿ ಚಂದ್ರನ್ ನಾಯರ್ ಪ್ರಥಮವಾಗಿ ದೇಣಿಗೆಗೆ ನಿಧಿ ನೀಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗ್ರಾಮದ ನಾಲ್ಕು ವಾರ್ಡ್ಗಳಲ್ಲಿ ಏಕಕಾಲಕ್ಕೆ ನಿಧಿ ಸಂಗ್ರಹಕ್ಕೆ ಕಾರ್ಯಕರ್ತರ ತಂಡವನ್ನು ರಚಿಸಲಾಯಿತು. ಈ ಸಂದರ್ಭದಲ್ಲಿ ಪ್ರಮುಖರಾದ ಹೊದ್ದೆಟ್ಟಿ ಸುಧೀರ್, ಅಜಯ್ ಕಟ್ಟೆಕೋಡಿ, ಕವಿತಾ ಪ್ರಭಾಕರ, ಹರೀಶ್ ಹೊಸಮನೆ, ಕೋಡಿ ಪೊನ್ನಪ್ಪ, ಬಿ.ಎ. ಗಣೇಶ, ಕೆ.ಎ. ನಾರಾಯಣ ಸೇರಿದಂತೆ ಅನೇಕ ರಾಮ ಭಕ್ತರು ಪಾಲ್ಗೊಂಡಿದ್ದರು.