ಗೋಣಿಕೊಪ್ಪಲು, ಜ. ೧೯: ವಾಣಿಜ್ಯ ಬೆಳೆಗಳಲ್ಲಿ ಪ್ರಮುಖ ಪಾತ್ರ ವಹಿಸಿರುವ ಕಾಫಿ ಬೆಳೆಯ ಮೇಲೆ ಜಿಲ್ಲೆಯ ಹಲವು ಬೆಳೆಗಾರರು, ರೈತರು ಅವಲಂಭಿತರಾಗಿದ್ದಾರೆ. ವಾರ್ಷಿಕವಾಗಿ ಬೆಳೆಯುವ ಈ ಬೆಳೆಗಳಿಂದಲೇ ಇವರ ಕುಟುಂಬಗಳ ನಿರ್ವಹಣೆ ನಡೆಯುತ್ತಿವೆ.

ಕೊಡಗು ಜಿಲ್ಲೆಯಲ್ಲಿ ಬೆಳೆಯುವ ಕಾಫಿಗೆ ದೇಶದ ವಿವಿಧೆಡೆ ಬೇಡಿಕೆ ಇದೆ. ಜಿಲ್ಲೆಯಲ್ಲಿ ಶೇ. ೫೦ ರಷ್ಟು ಮಂದಿ ಕಾಫಿ ಬೆಳೆಯುತ್ತಾರೆ. ಕೇಂದ್ರ ಸರ್ಕಾರವು ಒಂದು ಜಿಲ್ಲೆ ಒಂದು ಪ್ರಾಡೆಕ್ಟ್ ಯೋಜನೆಗೆ ಕೊಡಗಿನ ಕಾಫಿಯನ್ನು ಆಯ್ಕೆ ಮಾಡಿದೆ.

ಕಾಫಿಯನ್ನು ಉದ್ದಿಮೆಯ ರೀತಿಯಲ್ಲಿ ಪ್ರೋತ್ಸಾಹಿಸುವುದು ಹಾಗೂ ಕಾಫಿಗೆ ಸಂಬAಧಿಸಿ ಉದ್ದಿಮೆಯನ್ನು ಕೊಡಗಿನಲ್ಲಿ ಆರಂಭಿಸಲು ಜನರು ಇದರಲ್ಲಿ ತೊಡಗಿಸಿಕೊಳ್ಳುವುದು ಇದರ ಉದ್ದೇಶವಾಗಿದೆ. ಸರ್ಕಾರ ಕೂಡ ಹೋದ ಬೆಳೆಗಾರ ಇದಕ್ಕೆ ಸಹಾಯ ನೀಡಲಿದೆ. ಇದೀಗ ಬದಲಾದ ಹವಮಾನದಲ್ಲಿ ಜಿಲ್ಲೆಯ ವಿವಿಧೆಡೆ ಮಳೆ ಸುರಿದ ಹಿನ್ನೆಲೆ ರೈತನಿಗೆ ತನ್ನ ತೋಟದಲ್ಲಿ ಬೆಳೆದಿದ್ದ ಕಾಫಿ ಫಸಲನ್ನು ಕುಯ್ದು ಒಣಗಿಸುವುದು ಕಷ್ಟ ಸಾಧ್ಯವಾಗಿದೆ.

ಕಾರ್ಮಿಕರ ಸಮಸ್ಯೆ ನಡುವೆ ದುಪ್ಪಟ್ಟು ದರ ನೀಡಿ ಕಾಫಿ ಕುಯ್ದರೂ ಇದನ್ನು ಬಿಸಿಲಿನ ತಾಪವಿಲ್ಲದೆ ಒಣಗಿಸಲು ಸಾಧ್ಯವಾಗುತ್ತಿಲ್ಲ. ಕೆಲವು ರೈತರು ಕುಯ್ದ ಕಾಫಿಯನ್ನು ಕಾಫಿ ಒಣಗಿಸುವ ಯಂತ್ರವನ್ನು ಅಳವಡಿಸಿ ದ್ದಾರೆ. ರೂ. ೮ ರಿಂದ ೧೧ ಲಕ್ಷ ವೆಚ್ಚದ ಕಾಫಿ ಒಣಗಿಸುವ ಯಂತ್ರದಿAದ ಕಾಫಿ ಸೇರಿದಂತೆ ಕರಿಮೆಣಸು, ಭತ್ತ, ಏಲಕ್ಕಿ, ಅಡಿಕೆ ಫಸಲುಗಳನ್ನು ಒಣಗಿಸಬಹುದಾಗಿದೆ. ಓರ್ವ ಕಾರ್ಮಿಕನಿಂದ ಈ ಕೆಲಸ ನಿರ್ವಹಿಸ ಬಹುದಾಗಿದ್ದು ತೋಟದಿಂದ ನೇರವಾಗಿ ಕುಯ್ದ ಕಾಫಿಯನ್ನು ಈ ಯಂತ್ರದಲ್ಲಿ ಒಣಗಿಸಬಹುದಾಗಿದ್ದು ೧೦ ಗಂಟೆಯ ಸಮಯದಲ್ಲಿ ೧೫೦೦ ಕೆ.ಜಿ. ಕಾಫಿಯನ್ನು ಒಣಗಿಸ ಬಹುದಾಗಿದೆ. -ಹೆಚ್. ಕೆ. ಜಗದೀಶ್