ಮಡಿಕೇರಿ, ಜ. ೧೯: ತಾಳತ್ತಮನೆಯ ನೇತಾಜಿ ಯುವಕ ಯುವಕ ಮಂಡಲದ ೨೯ನೇ ವಾರ್ಷಿಕೋತ್ಸವ ಹಾಗೂ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ೧೨೪ ನೇ ಜನ್ಮದಿನೋತ್ಸವದ ಅಂಗವಾಗಿ ತಾ. ೨೩ ರಂದು ತಾಳತ್ತಮನೆಯ ಆಟದ ಮೈದಾನದಲ್ಲಿ ಜಿಲ್ಲಾಮಟ್ಟದ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ. ವಾಲಿಬಾಲ್, ಥ್ರೋಬಾಲ್, ಸಾರ್ವಜನಿಕ ಪುರುಷ ಮತ್ತು ಮಹಿಳೆಯರ ಮ್ಯಾರಥಾನ್ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಮ್ಯಾರಥಾನ್ ನಡೆಯಲಿದ್ದು, ಭಾಗವಹಿಸಲು ಇಚ್ಚಿಸುವ ತಂಡಗಳು ಅಂದು ಬೆಳಿಗ್ಗೆ ೯ ಗಂಟೆಗೆ ಸರಿಯಾಗಿ ಹಾಜರಿರುವಂತೆ ಕೋರಿದೆ. ಹೆಚ್ಚಿನ ಮಾಹಿತಿಗಾಗಿ ೯೪೪೯೬೩೪೬೭೯, ೯೪೮೦೭೦೫೫೮೦, ೮೨೭೭೨೩೬೫೪೯ ಸಂಖ್ಯೆಗಳನ್ನು ಸಂಪರ್ಕಿಸಬಹುದು.