ಮಡಿಕೇರಿ, ಜ. ೧೯: ಜಿಲ್ಲೆಯ ಎರಡು ನೂತನ ತಾಲೂಕುಗಳಿಗೆ ಇಬ್ಬರು ಗ್ರೇಡ್-೨ ತಹಶೀಲ್ದಾರ್‌ಗಳನ್ನು ನೇಮಿಸಿ ಸರಕಾರ ಆದೇಶ ಹೊರಡಿಸಿದೆ. ಪೊನ್ನಂಪೇಟೆ ತಾಲೂಕಿನ ಗ್ರೇಡ್-೨ ತಹಶೀಲ್ದಾರ್ ಆಗಿ ಹೆಚ್.ವಿ. ಪ್ರದೀಪ್‌ಕುಮಾರ್ ಎಂಬವರನ್ನು ನೇಮಿಸಲಾಗಿದೆ. ಪ್ರದೀಪ್‌ಕುಮಾರ್ ಈ ಹಿಂದೆ ಶಿರಸ್ತೆದಾರ್ ಆಗಿದ್ದರು. ಕುಶಾಲನಗರ ತಾಲೂಕಿನ ಗ್ರೇಡ್-೨ ತಹಶೀಲ್ದಾರ್ ಆಗಿ ಎ.ಎಂ. ರೇಖಾ ಅವರನ್ನು ನೇಮಕ ಮಾಡಲಾಗಿದೆ. ರೇಖಾ ಈ ಹಿಂದೆ ಮಂಡ್ಯದಲ್ಲಿ ಉಪತಹಶೀಲ್ದಾರ್ ಆಗಿದ್ದರು.