ನಾಪೋಕ್ಲು, ಜ. ೧೯: ಇಲ್ಲಿನ ಪ್ರಾಥಮಿಕ ಶಾಲಾ ಮೈದಾನದಲ್ಲಿ ಹೆಚ್.ಪಿ.ಎಲ್. ಕ್ಲಬ್ ವತಿಯಿಂದ ಆಯೋಜಿಸಿದ್ದ ೨ನೇ ವರ್ಷದ ಟೆನ್ನಿಸ್ ಬಾಲ್ ಕ್ರಿಕೆಟ್ ಲೀಗ್ ಪಂದ್ಯಾಟವನ್ನು ಗ್ರಾ.ಪಂ. ಸದಸ್ಯ ಟಿ.ಎ. ಮಹಮ್ಮದ್ ಉದ್ಘಾಟಿಸಿದರು. ಹೆಚ್.ಪಿ.ಎಲ್. ಕ್ಲಬ್ ಅಧ್ಯಕ್ಷ ಎಂ.ಎಸ್. ಇಬ್ರಾಹಿಂ, ಕಾರ್ಯದರ್ಶಿ ಸಲಮ್ ಸೇರಿದಂತೆ ಇನ್ನಿತರರು ಇದ್ದರು.