ಮಡಿಕೇರಿ, ಜ. ೧೮ : ಕೊರೊನಾ ಮಹಾಮಾರಿ ವಿರುದ್ಧ ಜಗತ್ತಿನ ಅತಿದೊಡ್ಡ ಲಸಿಕಾ ಕಾರ್ಯದ ೨ನೇ ಹಂತದಲ್ಲಿ ೧೨೫೪ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಯಿತು. ತಾ.೧೬ ರಂದು ಜಿಲ್ಲೆಯ ಮಡಿಕೇರಿ, ಕಾಕೋಟುಪರಂಬು, ವೀರಾಜಪೇಟೆ, ಸೋಮವಾರಪೇಟೆಯ ೪೭೪ ಆರೋಗ್ಯಕಾರ್ಯಕರ್ತರ ಪೈಕಿ ೩೯೬ ಮಂದಿಗೆ ಲಸಿಕೆ ನೀಡಲಾಗಿತ್ತು. ಇಂದು ಜಿಲ್ಲೆಯ ೨೮ ಕೇಂದ್ರಗಳಲ್ಲಿ ೨೦೫೦ ಆರೋಗ್ಯ ಕಾರ್ಯಕರ್ತರ ಪೈಕಿ ೧೨೫೪ ಮಂದಿಗೆ ಲಸಿಕೆ ನೀಡಲಾಗಿದೆ. ೪ ಸಾವಿರ ಲಸಿಕೆ ಪೂರೈಕೆಯಾಗಿದ್ದು, ಜಿಲ್ಲೆಯಲ್ಲಿ ೬,೫೫೦ ಆರೋಗ್ಯ ಕಾರ್ಯಕರ್ತರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇನ್ನೂ ನಾಲ್ಕೆöÊದು ದಿನಗಳಲ್ಲಿ ಉಳಿದ ಲಸಿಕೆಗಳು ಪೂರೈಕೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಲಸಿಕೆ ಕಾರ್ಯಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ರಾಜ್ಯದಲ್ಲಿ ಅಗ್ರಸ್ಥಾನದಲ್ಲಿದೆ. ಕೆಲವರಿಗೆ ಆರೋಗ್ಯ ಸಮಸ್ಯೆಯಿಂದ ಲಸಿಕೆ ನೀಡಲಾಗಿಲ್ಲ. ಉಳಿದಂತೆ ಬಹುತೇಕರಿಗೆ ಲಸಿಕೆ ನೀಡಲಾಗಿದೆ. ಲಸಿಕೆ ಪಡೆದವರು ಆರೋಗ್ಯ ಸ್ಥಿರವಾಗಿದ್ದು, ಓರ್ವ ಆರೋಗ್ಯ ಕಾರ್ಯಕರ್ತೆಗೆ ವಾಂತಿ, ಮತ್ತೋರ್ವರಿಗೆ ತಲೆಸುತ್ತು ಕಾಣಿಸಿಕೊಂಡಿದ್ದು, ಅವರ ಆರೋಗ್ಯ ಚೇತರಿಕೆಯಾಗಿದೆ ಎಂದು ತಿಳಿದು ಬಂದಿದೆ. ಮೆಡಿಕಲ್ ಕಾಲೇಜುವಿನ ಶೇ. ೩೦ ರಷ್ಟು ಸಿಬ್ಬಂದಿಗಳು ಲಸಿಕೆ ಸ್ವೀಕರಿಸಿಲ್ಲ, ಇಂದು ಅಂಗನವಾಡಿ (ಮೊದಲ ಪುಟದಿಂದ) ಕಾರ್ಯಕರ್ತೆಯರ ಪ್ರತಿಭಟನೆ ಹಿನ್ನೆಲೆ ಅಂದಾಜು ೫೦೦ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗಲಿಲ್ಲ. ಮುಂದಿನ ದಿನಗಳಲ್ಲಿ ಇವರಿಗೆ ಲಸಿಕೆ ನೀಡಲಾಗುತ್ತದೆ.

ಶನಿವಾರಸಂತೆ: ಶನಿವಾರಸಂತೆಯ ಸಾರ್ವಜನಿಕ ಸರಕಾರಿ ಆಸ್ಪತ್ರೆಯಲ್ಲಿ ೭೧ ಮಂದಿ ಕೊರೊನಾ ಸೇನಾನಿಗಳಿಗೆ ಕೊರೊನಾ ಲಸಿಕೆ ನೀಡಲಾಯಿತು.

ಶುಶ್ರೂಷಕಿ ಸುರಭಿ ಅವರು ಆಸ್ಪತ್ರೆಯ ದಂತ ವೈದ್ಯಾಧಿಕಾರಿ ಡಾ. ಬಿಪಿನ್ ಜೋಸ್ ಅವರಿಗೆ ಕೊರೊನಾ ಲಸಿಕೆ ನೀಡುವ ಮೂಲಕ ಶನಿವಾರಸಂತೆ ವ್ಯಾಪ್ತಿಯಲ್ಲಿ ಕೊರೊನಾ ವ್ಯಾಕ್ಸಿನ್ ನೀಡುವ ಕಾರ್ಯಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು. ಬೆಳ್ಳಿಗ್ಗೆ ೧೦.೩೦ ಗಂಟೆಯಿAದ ಸಂಜೆ ೫ ಗಂಟೆಯವರೆಗೆ ನಡೆದ ಲಸಿಕ ಅಭಿಯಾನದಲ್ಲಿ ಒಟ್ಟು ೭೧ ಮಂದಿಗೆ ಲಸಿಕೆ ನೀಡಲಾಯಿತು ಆಸ್ಪತ್ರೆಯ ವೈದ್ಯರು ದಾದಿಯರು ಸೇರಿದಂತೆ ಇತರ ಸಿಬ್ಬಂದಿಗಳಿಗೆ ಪ್ರಥಮವಾಗಿ ಲಸಿಕೆ ನೀಡಲಾಗಿದೆ ಎಂದು ವೈದ್ಯಾಧಿಕಾರಿ ಡಾ.ಇಂದೂಧರ್ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಸರೋಜಮ್ಮ, ತಾಲೂಕು ಪಂಚಾಯಿತಿ ಸದಸ್ಯ ಅನಂತ್ ಕುಮಾರ್, ವೈದ್ಯಾಧಿಕಾರಿ ಡಾ. ಇಂದೂಧರ್ ಸಹಾಯಕ ಠಾಣಾಧಿಕಾರಿ ಹೆಚ್.ಎಂ ಗೋವೀಂದ್ ವೈದ್ಯರುಗಳಾದ ಡಾ. ರಾಜೇಶ್ವರಿ, ಡಾ. ತನುಶ್ರೀ, ದಂತ ವೈದ್ಯಾಧಿಕಾರಿ ಡಾ. ಬಿಪಿನ್ ಜೋಸ್, ನಿರ್ವಾಣಾ ಘಟಕದ ಉಷಾ ಜೈಸ್, ಆರೋಗ್ಯ ಮೇಲ್ವಿಚಾರಕಿ ದುಬಿಂತ ಸೇರಿದಂತೆ ಇನ್ನಿತರರು ಇದ್ದರು.

ನಾಪೋಕ್ಲು: ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರದ ೩೦ ಆರೋಗ್ಯ ಕಾರ್ಯಕರ್ತರಿಗೆ ಮೊದಲ ಹಂತವಾಗಿ ಲಸಿಕೆ ನೀಡಲಾಯಿತು. ಸಮುದಾಯ ಆರೋಗ್ಯ ಕೇಂದ್ರದ ಅಧೀಕ್ಷಕ ಮಧು ಸೂದನ್ ಅವರಿಗೆ ಮೊದಲ ಲಸಿಕೆ ನೀಡಲಾಯಿತು. ಜಿಲ್ಲಾ ಪಂಚಾಯಿತಿ ಸದಸ್ಯಪಾಡಿಯಮ್ಮಂಡ ಮುರಳಿಕರುಂಬಮ್ಮಯ್ಯ, ವೈದ್ಯಾಧಿಕಾರಿ ಡಾ.ಪೂವಯ್ಯ, ವೈದ್ಯರಾದ ಡಾ. ಮದನ್ ಮೋಹನ್, ಡಾ. ಕುಶಾಲ್ ಮತ್ತು ಸಿಬ್ಬಂದಿ ಇದ್ದರು.ಕುಶಾಲನಗರ: ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೋವಿಡ್-೧೯ ಲಸಿಕೆ ನೀಡುವ ಕಾರ್ಯಕ್ಕೆ ಸೋಮವಾರ ಚಾಲನೆ ನೀಡಲಾಯಿತು. ತಾಲೂಕು ಆರೋಗ್ಯ ಅಧಿಕಾರಿ ಡಾ.ಶ್ರೀನಿವಾಸ್ ಸಮ್ಮುಖದಲ್ಲಿ ಆಸ್ಪತ್ರೆಯ ಲ್ಯಾಬ್ ತಂತ್ರಜ್ಞರಿಗೆ ಲಸಿಕೆ ನೀಡುವ ಮೂಲಕ ಕಾರ್ಯಕ್ರಮ ಆರಂಭಿಸಲಾಯಿತು. ೩೦ ಮಂದಿ ಕೊರೊನಾ ವಾರಿಯರ್ಸ್ಗೆ ಲಸಿಕೆ ನೀಡಲಾಗಿದೆ. ಈ ಸಂದರ್ಭ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಗೋಪಿನಾಥ್, ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮಧುಸೂದನ್ ಮತ್ತು ಸಿಬ್ಬಂದಿಗಳು ಇದ್ದರು.