ಕೂಡಿಗೆ, ಜ. ೧೮: ಹಾರಂಗಿ ಅಣೆಕಟ್ಟೆಯಿಂದ ಕಣಿವೆ ಸಮೀಪ ಭುವನಗಿರಿವರೆಗೆ ಹಾರಂಗಿ ಮುಖ್ಯ ನಾಲೆಯ ದುರಸ್ತಿ ಮತ್ತು ಮುಖ್ಯವಾಗಿ ಬೆಟ್ಟದ ಮಧ್ಯ ಭಾಗದಲ್ಲಿ ಹೋಗಿರುವ ನಾಲೆಯ ಎರಡೂ ಕಡೆಗಳಲ್ಲಿ ಕಟ್ ಎಡ್ ಕೌವರ್ ಮಾಡುವ ಉದ್ದೇಶ ದಿಂದ ಹಾರಂಗಿ ನೀರಾವರಿ ಇಲಾಖೆಯ ಅಧಿಕಾರಿಗಳ ಮೂಲಕ ರಾಜ್ಯ ಮಟ್ಟದ ಕಾವೇರಿ ನೀರಾವರಿ ನಿಗಮದ ಮೂಲಕ ಕಾಮಗಾರಿ ಯನ್ನು ನೆಡೆಸಲು ೧೪೫ ಕೋಟಿ ರೂ ವೆಚ್ಚದ ಕಾಮಗಾರಿಗೆ ಸರಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ.ಹಾರಂಗಿ ಮುಖ್ಯ ನಾಲೆ ಮದಲಾಪುರ (ಮೊದಲ ಪುಟದಿಂದ) ಸಮೀಪ ಮಲೇನಹಳ್ಳಿ ಹತ್ತಿರ ಬೆಟ್ಟದ ಮಧ್ಯ ಭಾಗದಲ್ಲಿ ನಾಲೆಯು ಹೋಗಿರುವುದರಿಂದ ಕಳೆದ ಮೂರು ವರ್ಷಗಳಿಂದ ಬೆಟ್ಟದ ಮಣ್ಣು ಮತ್ತು ಕಲ್ಲುಗಳ ಕುಸಿತದಿಂದಾಗಿ ಮುಖ್ಯ ನಾಲೆ ನೀರು ಹರಿಯಲು ಬಾರಿ ತೊಂದರೆಗಳು ಆಗುತ್ತಿದ್ದವು ಅಲ್ಲದೆ ಕಳೆದ ಸಾಲಿನಲ್ಲಿ ಬಿದ್ದ ಬಾರಿ ಮಳೆಗೆ ಬೆಟ್ಟದ ಮಣ್ಣು ಎರಡು ಕಡೆಗಳಲ್ಲಿ ನಾಲೆ ಬಿದ್ದಿರುವದನ್ನು ಶಾಸಕ ಅಪ್ಪಚ್ಚು ರಂಜನ್‌ನವರು ವಿಕ್ಷಣೆಯನ್ನು ಮಾಡಿ ರಾಜ್ಯದ ಬೇರೆ ಜಲಾನಯನ ಪ್ರದೇಶಗಳಲ್ಲಿ ಆಳವಾಗಿರುವ ಮುಖ್ಯ ನಾಲೆ ಗಳಿಗೆ ಕಟ್ ಎಡ್ ಕೌವರ್ ಮಾದರಿಯಲ್ಲಿ ಕಾಂಕ್ರಿಟ್ ಎರಡೂ ಕಡೆಗಳಿಗೆ ಹಾಕಿ ಕಾಲುವೆ ಮಾದರಿಯಲ್ಲಿ ಮೇಲ್ಭಾಗದಲ್ಲಿಯೂ ಸಂಪೂರ್ಣವಾಗಿ ಮುಚ್ಚುವ ಯೋಜನೆಯನ್ನು ಮಾಡುವಂತೆ ಸೂಚನೆ ನೀಡಿದರು.ಅದರ ಅನುಗುಣವಾಗಿ ನೀರಾವರಿ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಕಟ್ ಎಡ್ ಕೌವರ್ ಸ್ಥಳಗಳಾದ ಮಲ್ಲೇನಹಳ್ಳಿ ಮತ್ತು ಭುವನಗಿರಿ ಹತ್ತಿರ ಸ್ಥಳಗಳಲ್ಲಿ ಕಾಮಗಾರಿ ಯನ್ನು ನಡೆಸಲು ಕ್ರಿಯಾ ಯೋಜನೆಯನ್ನು ತಯಾರಿಸಲಾಗುತ್ತಿದೆ. ಕ್ರಿಯಾ ಯೋಜನೆ ಅನುಗುಣವಾಗಿ ೧೪೫ ಕೋಟಿ ರೂ ವೆಚ್ಚದಲ್ಲಿ ಕಾಮಗಾರಿಯನ್ನು ಕೈಗೊಳ್ಳಲು ಸರಕಾರಕ್ಕೆ ಪ್ರಸ್ತಾವನೆ ಯನ್ನು ಹಾರಂಗಿ ನೀರಾವರಿ ಇಲಾಖೆಯ ಮೂಲಕ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.