ಪರ್ಯಾಯ ಕ್ರಮಗಳನ್ನು ಪ್ರಸ್ತುತಪಡಿಸಿ: ಕೇಂದ್ರ ಕೃಷಿ ಸಚಿವ
ನವದೆಹಲಿ, ಜ. ೧೮: ಕೃಷಿ ಸುಧಾರಣಾ ಕಾಯ್ದೆ ಹಿಂಪಡೆಯುವುದನ್ನು ಹೊರತುಪಡಿಸಿ, ಪ್ರತಿಭಟನಾನಿರತ ರೈತರು ಪರ್ಯಾಯ ಕ್ರಮಗಳ ಕುರಿತು ಚಿಂತನೆ ನಡೆಸಬೇಕಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ. ರೈತ ಮುಖಂಡರು ಮತ್ತು ಸರ್ಕಾರದ ನಡುವಿನ ೧೦ನೇ ಸುತ್ತಿನ ಮಾತುಕತೆಯಲ್ಲಿ, ಕೃಷಿ ಸುಧಾರಣೆಯ ಕುರಿತು ಸಮಗ್ರ ಚರ್ಚೆ ನಡೆಸುವಂತೆ ಹಾಗೂ ಪರ್ಯಾಯ ಮಾರ್ಗಗಳನ್ನು ಪ್ರಸ್ತುತಪಡಿಸುವಂತೆ ಪ್ರತಿಭಟನಾನಿರತ ರೈತರಿಗೆ ಸಚಿವರು ಮನವಿ ಮಾಡಿದ್ದಾರೆ. ಸರ್ಕಾರ, ಈಗಾಗಲೇ ರೈತ ಸಂಘಟನೆಗಳಿಗೆ ಪ್ರಸ್ತಾವನೆ ಕಳುಹಿಸಿದ್ದು, ಮಂಡಿಗಳು, ವ್ಯಾಪಾರಿಗಳ ನೋಂದಣಿ ಮತ್ತು ಇತರ ಸಂದೇಹಗಳ ಕುರಿತು ಸ್ಪಷ್ಟೀಕರಣ ನೀಡಲು ಸಿದ್ಧವಿರುವುದಾಗಿ ತಿಳಿಸಿದ್ದಾರೆ. ಶುಕ್ರವಾರ ನಡೆದ ೯ನೇ ಸುತ್ತಿನ ಮಾತುಕತೆ ಕೂಡ ಯಾವುದೇ ನಿರ್ಣಾಯಕ ಹಂತ ತಲುಪಲು ವಿಫಲವಾಗಿತ್ತು. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ‘ಧೈರ್ಯಶಾಲಿ ಹೆಜ್ಜೆ’ ಹಲವು ವರ್ಷಗಳ ಚರ್ಚೆಗಳ ನಂತರ ಕೃಷಿ ಕ್ಷೇತ್ರವನ್ನು ಸುಧಾರಿಸುತ್ತದೆ ಮತ್ತು ರೈತರ ಜೀವನ ಮಟ್ಟವನ್ನು ಸುಧಾರಿಸುತ್ತದೆ ಎಂದು ಹೇಳಿದರು.
ಭಾರತದ ಗಡಿಯೊಳಗೆ ಹಳ್ಳಿಯನ್ನೇ ನಿರ್ಮಿಸಿದ ಚೀನಾ
ನವದೆಹಲಿ, ಜ. ೧೮: ಲಡಾಖ್ ಗಡಿಯಲ್ಲಿ ಸೇನೆ ಜಮಾವಣೆ ಮಾಡಿ ಭಾರತಕ್ಕೆ ಉಪಟಳ ನೀಡುತ್ತಿರುವ ಚೀನಾ ಇದೀಗ ಸದ್ದಿಲ್ಲದೆ ತ್ಸಾರಿ ಚು ನದಿ ಸಮೀಪ ಹಳ್ಳಿಯನ್ನೇ ನಿರ್ಮಿಸಿದೆ. ಬರೋಬ್ಬರಿ ೧೦೧ ಮನೆಗಳನ್ನು ಚೀನಾ ನಿರ್ಮಿಸಿದೆ. ೨೦೧೯ರ ಆಗಸ್ಟ್ ನಲ್ಲಿ ಖಾಲಿ ಇದ್ದ ಜಾಗದಲ್ಲಿ ೨೦೨೦ರ ನವೆಂಬರ್ ವೇಳೆ ಒಂದು ಗ್ರಾಮವೇ ನಿರ್ಮಾಣವಾಗಿದೆ. ಇಲ್ಲಿ ೧೦೧ ಮನೆಗಳನ್ನು ನಿರ್ಮಿಸಲಾಗಿದೆ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ. ವಿವಾದಿತ ಪ್ರದೇಶದಲ್ಲೇ ಚೀನಾ ಈ ಹಳ್ಳಿಯನ್ನು ನಿರ್ಮಿಸಿದೆ. ನಮ್ಮ ಗಡಿಯೊಳಗೆ ಸುಮಾರು ೪.೫ ಕಿ.ಮೀ ಒಳಬಂದಿದ್ದಾರೆ. ಗಡಿಭಾಗದಲ್ಲಿ ಚೀನಾ ಮೂಲಸೌಕರ್ಯ ಅಭಿವೃದ್ಧಿ ಮಾಡುವ ಕೆಲಸವನ್ನು ಮಾಡಿದೆ. ನಾವು ಸಹ ಗಡಿಭಾಗದಲ್ಲಿ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳುತ್ತಿದ್ದೇವೆ ಎಂದು ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ. ಗಡಿಯಲ್ಲಿ ಚೀನಾ ಈ ರೀತಿ ದುಸ್ಸಾಹಸ ನಡೆಸುತ್ತಿರುವುದು ಭಾರತದ ಪಾಲಿಗೆ ಬಹಳ ಗಂಭೀರ ವಿಚಾರವಾಗಿದೆ. ಈ ಜಾಗಕ್ಕಾಗಿ ಉಭಯ ರಾಷ್ಟçಗಳ ನಡುವೆ ದೀರ್ಘ ಕಾಲದಿಂದ ವಿವಾದ ನಡೆಯುತ್ತಿದೆ. ಈ ಜಾಗವನ್ನು ಸಶಸ್ತ್ರ ಹೋರಾಟದ ಸ್ಥಳವೆಂದು ಗುರುತಿಸಲಾಗಿದೆ.
ರಾಫೆಲ್ ಯುದ್ಧವಿಮಾನ ಹಾರಾಟ ಪ್ರದರ್ಶನ
ನವದೆಹಲಿ, ಜ. ೧೮: ಹೊಸದಾಗಿ ವಾಯುಪಡೆ ಸೇರ್ಪಡೆಗೊಂಡ ರಾಫೆಲ್ ಫೈಟರ್ ಜೆಟ್ ಏರ್ ಕ್ರಾಫ್ಟ್ ಜನವರಿ ೨೬ ರಂದು ನಡೆಯಲಿರುವ ಗಣರಾಜ್ಯೋತ್ಸವ ದಿನಾಚರಣೆ ಪರೇಡ್ ನಲ್ಲಿ ಭಾಗಿಯಾಗಲಿದೆ. ಗಣರಾಜ್ಯೋತ್ಸವದ ಅಂಗವಾಗಿ ನಡೆಯಲಿರುವ ಪ್ರದರ್ಶನದಲ್ಲಿ ಕಡಿಮೆ ಎತ್ತರದಲ್ಲಿ ಹಾರಾಟ ನಡೆಸಲಿದ್ದು ರಾಫೆಲ್ ನ ವರ್ಟಿಕಲ್ ಚಾರ್ಲಿ ಫಾರ್ಮೇಷನ್ನ್ನು ನೋಡಬಹುದಾಗಿದೆ ಎಂದು ಐಎಎಫ್ ಹೇಳಿದೆ. ವರ್ಟಿಕಲ್ ಚಾರ್ಲಿ ಫಾರ್ಮೇಷನ್ನಲ್ಲಿ ಕಡಿಮೆ ಎತ್ತರದಲ್ಲಿ ಹಾರಾಟ ನಡೆಸಲಿರುವ ಯುದ್ಧ ವಿಮಾನಗಳು ಹೆಚ್ಚಿನ ಎತ್ತರಕ್ಕೆ ಹಾರುವುದಕ್ಕೂ ಮುನ್ನ ಲಂಬವಾಗಿ ಹಾರಾಟ ನಡೆಸಲಿದ್ದು, ಒಂದೇ ರಾಫೆಲ್ ಯುದ್ಧವಿಮಾನ ಫ್ಲೆöÊಪಾಸ್ಟ್ನ್ನು ಮುಕ್ತಾಯಗೊಳಿಸಲಿದೆ ಎಂದು ವಿಂಗ್ ಕಮಾಂಡರ್ ಇಂದ್ರನೀಲ್ ನಂದಿ ತಿಳಿಸಿದ್ದಾರೆ. ಭಾರತೀಯ ವಾಯುಪಡೆಯ ೩೮ ಯುದ್ಧವಿಮಾನಗಳು ಹಾಗೂ ೪ ವಿಮಾನಗಳು ಸರಣಿ ಹಾರಾಟ (ಜಿಟಥಿಠಿಚಿsಣ)ನಲ್ಲಿ ಭಾಗಿಯಾಗಲಿವೆ.
ಮಹಾರಾಷ್ಟç ಸಿಎಂ ವಿರುದ್ಧ ಬಿಎಸ್ವೈ ಗರಂ
ಬೆAಗಳೂರು, ಜ. ೧೮: ‘ಮರಾಠಿ ಭಾಷೆ ಮತ್ತು ಸಂಸ್ಕೃತಿ ಪ್ರಧಾನ ಪ್ರದೇಶಗಳನ್ನು ಮಹಾರಾಷ್ಟçಕ್ಕೆ ಸೇರಿಸಿಕೊಳ್ಳುವ ಮಾತನಾಡಿರುವುದು ಮಹಾರಾಷ್ಟçದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಉದ್ಧಟತನದ ಪ್ರದರ್ಶನವಾಗಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಸರಣಿ ಟ್ವೀಟ್ ಮೂಲಕ ಮಹಾರಾಷ್ಟ್ರ ಸಿಎಂ ವಿರುದ್ಧ ಹರಿಹಾಯ್ದಿರುವ ಮುಖ್ಯಮಂತ್ರಿ ಯಡಿಯೂರಪ್ಪ ‘ಮಹಾ ಸಿಎಂ ಅವರದು ಭಾರತೀಯ ಒಕ್ಕೂಟ ತತ್ವದ ವಿರುದ್ಧವಾದ ನಿಲುವು. ಮಹಾಜನ್ ವರದಿಯೇ ಅಂತಿಮ ಎಂಬುದು ಎಲ್ಲರೂ ಬಲ್ಲ ಸತ್ಯ’ ಎಂದಿದ್ದಾರೆ. ಮುಂದುವರಿದು, ಪ್ರಾದೇಶಿಕತೆ ಪ್ರದರ್ಶನ ಮತ್ತು ಭಾಷಾಂಧತೆಯ ಮಾತುಗಳು ದೇಶದ ಏಕತೆಗೆ ಮಾರಕವಾಗಿವೆ. ಇದನ್ನು ನಾನು ಖಂಡಿಸುತ್ತೇನೆ. ಕರ್ನಾಟಕದಲ್ಲಿ ಮರಾಠಿಗರು ಕನ್ನಡಿಗರೊಂದಿಗೆ ಬೆರೆತಿದ್ದಾರೆ, ಅದೇ ರೀತಿ ಮಹಾರಾಷ್ಟ್ರದ ಗಡಿ ಜಿಲ್ಲೆಗಳಲ್ಲಿರುವ ಕನ್ನಡಿಗರು ಮರಾಠಿಗರೊಂದಿಗೆ ಬೆರೆತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ಮಲ್ಯ ಗಡಿಪಾರಿಗೆ ಪ್ರಯತ್ನ: ಸುಪ್ರೀಂಗೆ ಕೇಂದ್ರ ಮಾಹಿತಿ
ನವದೆಹಲಿ, ಜ. ೧೧: ೯ ಸಾವಿರ ಕೋಟಿ ರೂಪಾಯಿ ಸಾಲ ಮಾಡಿ ಮರುಪಾವತಿಸಿದೆ ಬ್ರಿಟನ್ನಲ್ಲಿ ತಲೆಮರೆಸಿಕೊಂಡಿರುವ ವಿಜಯ್ ಮಲ್ಯ ಗಡಿಪಾರಿಗೆ ಸಂಬAಧಿಸಿದAತೆ ಸರ್ಕಾರ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ. ಆದರೆ ಕೆಲವು ಕಾನೂನು ಸಮಸ್ಯೆಗಳಿಂದಾಗಿ ವಿಳಂಬವಾಗುತ್ತಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ಗೆ ತಿಳಿಸಿದೆ. ಮಲ್ಯ ಗಡಿಪಾರು ವಿಷಯ ಯಾವ ಹಂತದಲ್ಲಿದೆ ಎಂಬದರ ಬಗ್ಗೆ ವರದಿ ನೀಡಲು ಸಮಯ ನೀಡಬೇಕು ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ನ್ಯಾಯಮೂರ್ತಿ ಯು.ಯು. ಲಲಿತ್ ಮತ್ತು ಅಶೋಕ್ ಭೂಷಣ್ ಅವರಿದ್ದ ಪೀಠಕ್ಕೆ ಮನವಿ ಮಾಡಿದ್ದು, ವಿಚಾರಣೆಯನ್ನು ಮಾರ್ಚ್ ೧೫ಕ್ಕೆ ಮುಂದೂಡಲಾಗಿದೆ. ೨೦೨೧ರ ಜನವರಿಯಲ್ಲಿ ಬ್ರಿಟನ್ನ ಗೃಹ ಸಚಿವರ ಜತೆಯೂ ವಿಚಾರ ಪ್ರಸ್ತಾಪಿಸಲಾಗಿದೆ. ಈ ಪ್ರಕರಣ ಭಾರತಕ್ಕೆ ಎಷ್ಟು ಮಹತ್ವದ್ದು ಎಂಬದು ತಿಳಿದಿರುವುದಾಗಿ ಬ್ರಿಟನ್ ಸರ್ಕಾರವು ವಿದೇಶಾಂಗ ಸಚಿವಾಲಯಕ್ಕೆ ಸಂದೇಶವನ್ನೂ ಕಳುಹಿಸಿದೆ. ಆದರೂ, ಬ್ರಿಟನ್ನಲ್ಲಿರುವ ಕಾನೂನು ಸಂಕೀರ್ಣತೆಯಿAದಾಗಿ ಹಸ್ತಾಂತರ ಇಲ್ಲಿವರೆಗೆ ತಡೆಯಾಗಿದೆ ಎಂದು ಮೆಹ್ತಾ ತಿಳಿಸಿದ್ದಾರೆ. ಕಿಂಗ್ ಫಿಷರ್ ಏರ್ ಲೈನ್ಸ್ಗಾಗಿ ಭಾರತದಲ್ಲಿನ ಹಲವು ಬ್ಯಾಂಕ್ಗಳಿAದ ೯೦೦೦ ಕೋಟಿ ರೂಪಾಯಿ ಸಾಲ ಮಾಡಿದ್ದು, ಅದರ ಜತೆಗೆ ಅಕ್ರಮ ಹಣಕಾಸು ವರ್ಗಾವಣೆ, ವಂಚನೆ ಆರೋಪಕ್ಕೆ ಸಂಬAಧಪಟ್ಟAತೆ ವಿಜಯ್ ಮಲ್ಯ ಭಾರತಕ್ಕೆ ಬೇಕಾಗಿದ್ದಾರೆ.