ಕುಶಾಲನಗರ, ಜ. ೧೮: ಕುಶಾಲನಗರದ ನೆಹರೂ ಬಡಾವಣೆ ನಿವಾಸಿ ಇರ್ಫಾನ್ (೩೨) ಎಂಬಾತ ಕಳೆದ ಒಂದು ವರ್ಷದಿಂದ ನಾಪತ್ತೆಯಾಗಿರುವುದಾಗಿ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ೨೦೨೦ರ ಫೆಬ್ರವರಿ ೧೫ ರಿಂದ ಹೆಂಡತಿ ಮಕ್ಕಳನ್ನು ಬಿಟ್ಟು ಹೋದ ಇರ್ಫಾನ್ ಇದುವರೆಗೂ ಪತ್ತೆಯಾಗಿಲ್ಲ. ಆತನ ಇರುವಿಕೆ ಬಗ್ಗೆ ಸಂಶಯ ಇರುವುದಾಗಿ, ನಾಪತ್ತೆಯಾದ ತನ್ನ ಮಗನ ಬಗ್ಗೆ ತಂದೆ ತೌಸಿಫ್ ದೂರು ನೀಡಿದ್ದು ಪತ್ತೆ ಮಾಡಿಕೊಡುವಂತೆ ಕೋರಿದ್ದಾರೆ. ಈ ಬಗ್ಗೆ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈತನ ಪತ್ತೆಯಾದಲ್ಲಿ ತಕ್ಷಣ ಕುಶಾಲನಗರ ಪೊಲೀಸ್ ಠಾಣೆ ೦೮೨೭೬-೨೭೪೩೩೩ ಅಥವಾ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ. ಇರ್ಫಾನ್ ೧೬೫ ಸೆಮೀ ಎತ್ತರದ ವ್ಯಕ್ತಿಯಾಗಿದ್ದು, ಕಪ್ಪು ತಲೆಗೂದಲು, ದುಂಡುಮುಖ, ಸಾಧಾರಣ ಮೈಕಟ್ಟು ಹೊಂದಿದ್ದಾನೆ. ಹಿಂದಿ, ಇಂಗ್ಲೀಷ್, ಕನ್ನಡ, ಮಲಯಾಳ ಭಾಷೆ ಬಲ್ಲವನಾಗಿದ್ದು, ಈತನ ಪತ್ತೆಯಾದಲ್ಲಿ ಮಾಹಿತಿ ನೀಡುವಂತೆ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.