ಶ್ರೀಮಂಗಲ, ಜ. ೧೭: ನೂತನವಾಗಿ ಅಸ್ಥಿತ್ವಕ್ಕೆ ಬಂದ ಪೊನ್ನಂಪೇಟೆ ತಾಲೂಕು ರಚನೆಗೆ ನಡೆಸಿದ ಹೋರಾಟದ ವರದಿಗಳನ್ನು ನಿರಂತರವಾಗಿ ಸುದ್ದಿ ಮಾಡಿ ಸರಕಾರ ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತರುವಲ್ಲಿ ಸೇವೆ ಸಲ್ಲಿಸಿದ ಮೂವರು ಪತ್ರಕರ್ತರನ್ನು ಪೊನ್ನಂಪೇಟೆ ನಾಗರಿಕ ವೇದಿಕೆಯಿಂದ ಸನ್ಮಾನಿಸಿ ಗೌರವಿಸಲಾಯಿತು. ಪತ್ರಕರ್ತರಾದ ಬಾಳೆಲೆ ವಿಜಯಲಕ್ಷಿö್ಮ ಜೂನಿಯರ್ ಕಾಲೇಜಿನ ಪ್ರಾಂಶುಪಾಲ ಡಾ. ಜೆ. ಸೋಮಣ್ಣ, ಅಣ್ಣೀರ ಹರೀಶ್ ಮಾದಪ್ಪ, ಕೊಡಗು ಧ್ವನಿ ವಾರಪತ್ರಿಕೆಯ ಸಂಪಾದಕ ಹೆಚ್.ಕೆ. ಜಗದೀಶ್ ಅವರನ್ನು ನಾಗರಿಕ ವೇದಿಕೆಯ ಕಚೇರಿಯಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭ ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಜೆ. ಸೋಮಣ್ಣ, ಪತ್ರಕರ್ತ ಅಣ್ಣೀರ ಹರೀಶ್ ಮಾದಪ್ಪ, ಪತ್ರಕರ್ತ ಹೆಚ್.ಕೆ. ಜಗದೀಶ್ ಪತ್ರಕರ್ತನಾಗಿ ಜನಪರ ಹೋರಾಟದ ವರದಿ ಮಾಡಲು ಮತ್ತು ಮುಂದೆಯೂ ಈ ನಿಟ್ಟಿನಲ್ಲಿ ಸದಾ ತೊಡಗಿಸಿಕೊಳ್ಳುವ ಹೊಣೆಗಾರಿಕೆ ಇದ್ದು, ಜವಾಬ್ದಾರಿಯೂ ಹೆಚ್ಚಾಗಿದೆ ತರುವಲ್ಲಿ ಸೇವೆ ಸಲ್ಲಿಸಿದ ಮೂವರು ಪತ್ರಕರ್ತರನ್ನು ಪೊನ್ನಂಪೇಟೆ ನಾಗರಿಕ ವೇದಿಕೆಯಿಂದ ಸನ್ಮಾನಿಸಿ ಗೌರವಿಸಲಾಯಿತು. ಪತ್ರಕರ್ತರಾದ ಬಾಳೆಲೆ ವಿಜಯಲಕ್ಷಿö್ಮ ಜೂನಿಯರ್ ಕಾಲೇಜಿನ ಪ್ರಾಂಶುಪಾಲ ಡಾ. ಜೆ. ಸೋಮಣ್ಣ, ಅಣ್ಣೀರ ಹರೀಶ್ ಮಾದಪ್ಪ, ಕೊಡಗು ಧ್ವನಿ ವಾರಪತ್ರಿಕೆಯ ಸಂಪಾದಕ ಹೆಚ್.ಕೆ. ಜಗದೀಶ್ ಅವರನ್ನು ನಾಗರಿಕ ವೇದಿಕೆಯ ಕಚೇರಿಯಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭ ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಜೆ. ಸೋಮಣ್ಣ, ಪತ್ರಕರ್ತ ಅಣ್ಣೀರ ಹರೀಶ್ ಮಾದಪ್ಪ, ಪತ್ರಕರ್ತ ಹೆಚ್.ಕೆ. ಜಗದೀಶ್ ಪತ್ರಕರ್ತನಾಗಿ ಜನಪರ ಹೋರಾಟದ ವರದಿ ಮಾಡಲು ಮತ್ತು ಮುಂದೆಯೂ ಈ ನಿಟ್ಟಿನಲ್ಲಿ ಸದಾ ತೊಡಗಿಸಿಕೊಳ್ಳುವ ಹೊಣೆಗಾರಿಕೆ ಇದ್ದು, ಜವಾಬ್ದಾರಿಯೂ ಹೆಚ್ಚಾಗಿದೆ ಎಂದು ಹೇಳಿದರು. ಈ ಸಂದರ್ಭ ಮಾತನಾಡಿದ ವೇದಿಕೆಯ ಅಧ್ಯಕ್ಷ ಪೊಕ್ಕಳಿಚಂಡ ಪೂಣಚ್ಚ ಅವರು, ಪೊನ್ನಂಪೇಟೆ ತಾಲೂಕು ರಚನೆಗೆ ಸಹಕಾರ ನೀಡಿದ ಪ್ರತಿಯೊಬ್ಬರನ್ನು ಗೌರವಿಸುವುದು ನಮ್ಮ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಪತ್ರಕರ್ತರನ್ನು ಸನ್ಮಾನಿಸಲಾಗಿದ್ದು, ಮುಂದಿನ ಹಂತದಲ್ಲಿ ಇತರ ಪತ್ರಕರ್ತರನ್ನು ಹಾಗೂ ಬೆಂಬಲ ನೀಡಿದವರನ್ನು ಸನ್ಮಾನಿಸುವ ಕಾರ್ಯಕ್ರಮವಿದೆ ಎಂದÀÄ ಹೇಳಿದರು. ಈ ಸಂದರ್ಭ ನಾಗರಿಕ ವೇದಿಕೆಯ ಅಧ್ಯಕ್ಷ ಪೊಕ್ಕಳಿಚಂಡ ಪೂಣಚ್ಚ, ಉಪಾಧ್ಯಕ್ಷ ಚೆಪ್ಪುಡೀರ ಸೋಮಯ್ಯ, ಕಾರ್ಯದರ್ಶಿ ಚೆಲುವರಾಜು, ಕಾನೂನು ಸಲಹೆಗಾರ ಮತ್ರಂಡ ಅಪ್ಪಚ್ಚು, ಸದಸ್ಯರುಗಳಾದ ಎರ್ಮುಹಾಜಿ, ಮೂಕಳೇರ ಕುಶಾಲಪ್ಪ, ಐನಂಡ ಬೋಪಣ್ಣ, ರೇಖಾ ಶ್ರೀಧರ್ ನೆಲ್ಲಿತ್ತಾಯ ಹಾಜರಿದ್ದರು.