ಕೊರೊನಾ ನಿಗ್ರಹದಲ್ಲಿ ರಾಜ್ಯ ಸರ್ಕಾರ ಉತ್ತಮ ಕಾರ್ಯ
ಬೆಳಗಾವಿ, ಜ. ೧೭: ಸಚಿವ ಸಂಪುಟ ವಿಸ್ತರಣೆ ನಂತರ ಭುಗಿಲೆದ್ದಿರುವ ಅಸಮಾಧಾನ, ನಾಯಕತ್ವದ ಬಗೆಗಿನ ಅಪಸ್ವರದ ನಡುವೆ ಬಿಜೆಪಿ ರಾಷ್ಟಿçÃಯ ಅಧ್ಯಕ್ಷ ಅಮಿತ್ ಶಾ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸರ್ಕಾರವನ್ನು ಹಾಡಿ ಹೊಗಳಿದ್ದಾರೆ. ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಂತೆ ರಾಜ್ಯದಲ್ಲಿ ಯಡಿಯೂರಪ್ಪ ಆಡಳಿತ ಕೂಡ ಜನಪರವಾಗಿದೆ. ಕೋವಿಡ್-೧೯ ಸೋಂಕು ನಿಯಂತ್ರಿಸಲು ರಾಜ್ಯ ಸರ್ಕಾರ ಅತ್ಯುತ್ತಮವಾಗಿ ಕೆಲಸ ಮಾಡಿದೆ ಎಂದು ಹೇಳಿದರು. ಈ ಮೂಲಕ ನಾಯಕತ್ವದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದವರಿಗೆ ಅಮಿತ್ ಶಾ ಈ ಮೂಲಕ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಜನಸೇವಕ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಕೋವಿಡ್-೧೯ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದೆ. ಈ ಕಾರಣಕ್ಕೆ ಜಗತ್ತಿನ ಇತರ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಮರಣ ಪ್ರಮಾಣ ನಿಯಂತ್ರಣ ಸಾಧ್ಯವಾಗಿದೆ. ಯಡಿಯೂರಪ್ಪ ನೇತೃತ್ವದ ಸರ್ಕಾರ ಕೂಡ ಕೋವಿಡ್-೧೯ ವಿರುದ್ಧ ಸಮರ್ಥವಾಗಿ ಹೋರಾಟ ನಡೆಸುವ ಮೂಲಕ ಕೋವಿಡ್ ನಿಯಂತ್ರಣದಲ್ಲಿ ಯಶಸ್ವಿಯಾಗಿದೆ ಎಂದು ಎಂದರು. ಕೋವಿಡ್ ಲಸಿಕೆ ವಿಚಾರದಲ್ಲಿ ಜನತೆ ಅಪಪ್ರಚಾರಕ್ಕೆ ಕಿವಿಗೊಡಬಾರದು. ಎಲ್ಲರೂ ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕು. ಯಾವುದೇ ಅಪಪ್ರಚಾರಕ್ಕೆ ಕಿವಿಗೊಡದೇ ಎಲ್ಲರೂ ಕೋವಿಡ್ ಲಸಿಕೆ ಹಾಕಿಸಿಕೊಂಡು ಕೊರೊನಾಮುಕ್ತ ಭಾರತಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿಕೊಂಡರು. ದಿ. ಸುರೇಶ್ ಅಂಗಡಿ ಅವರ ಅಕಾಲಿಕ ಸಾವಿನಿಂದಾಗಿ ಪಕ್ಷ ಮತ್ತು ರಾಜ್ಯಕ್ಕೆ ತುಂಬಲಾರದ ಹಾನಿಯಾಗಿದೆ ಎಂದು ಅಮಿತ್ ಶಾ ಬೇಸರ ವ್ಯಕ್ತಪಡಿಸಿದರು. ಕನ್ನಡ-ಮರಾಠಿ ಸಮ್ಮಿಳಿತ ಸಂಸ್ಕೃತಿಯ ಮುಂಬೈ-ಕರ್ನಾಟಕ ಪ್ರದೇಶವು ಭಾರತದ ವೈವಿಧ್ಯತೆಗೆ ಸಾಕ್ಷಿಯಾಗಿದೆ ಎಂದರು.
೨೦೨೪ರ ತನಕ ಪ್ರತಿಭಟನೆ ಮಾಡಲು ಸಿದ್ಧ
ನಾಗ್ಪುರ, ಜ. ೧೭: ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದು ರೈತರು ೨೦೨೪ ರವರೆಗೂ ಪ್ರತಿಭಟನೆ ನಡೆಸಲು ಸಿದ್ಧರಿದ್ದಾರೆ ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಮುಖಂಡ ರಾಕೇಶ್ ಟಿಕೈಟ್ ಹೇಳಿದ್ದಾರೆ. ದೆಹಲಿ ಗಡಿಯಲ್ಲಿ ರೈತರು ನಡೆಸುತ್ತಿರುವ ಆಂದೋಲನ 'ಸೈದ್ಧಾಂತಿಕ ಕ್ರಾಂತಿ'. ನಾವು ಕನಿಷ್ಟ ಬೆಂಬಲ ಬೆಲೆ (ಎಂಎಸ್‌ಪಿ) ಕುರಿತ ಕಾನೂನು ಖಾತರಿ ಬಗ್ಗೆ ಬಯಸುತ್ತೇವೆ ಎಂದರು. ಕೇಂದ್ರವು ಜಾರಿಗೆ ತಂದಿರುವ ಮೂರು ಹೊಸ ಕೃಷಿ ಕಾಯ್ದೆಗಳಿಂದ ಮಧ್ಯವರ್ತಿಗಳು ಇರುವುದಿಲ್ಲ. ಅಲ್ಲದೆ ರೈತರು ದೇಶದಲ್ಲಿ ಎಲ್ಲಿ ಬೇಕಾದರೂ ಮಾರಾಟ ಮಾಡಲು ಅವಕಾಶ ಸಿಗುತ್ತದೆ. ಇದು ಕೃಷಿ ಕ್ಷೇತ್ರದ ಪ್ರಮುಖ ಸುಧಾರಣೆ ಎಂದು ಹೇಳುತ್ತಿದೆ ಎಂದರು. ಆದಾಗ್ಯೂ, ಪ್ರತಿಭಟನಾ ನಿರತ ರೈತರು ಹೊಸ ಕೃಷಿ ಕಾಯ್ದೆಗಳು ಎಂಎಸ್ಪಿಯ ಸುರಕ್ಷತೆಯನ್ನು ತೊಡೆದು ಹಾಕುತ್ತದೆ. ಮಂಡಿ ವ್ಯವಸ್ಥೆಯನ್ನು ತೊಡೆದು ಹಾಕಲು ದಾರಿ ಮಾಡಿಕೊಡುತ್ತವೆ. ಅಲ್ಲದೆ ಇವು ದೊಡ್ಡ ಕಾರ್ಪೊರೇಟ್ ಸಂಸ್ಥೆಗಳಿಗೆ ಅನುಕೂಲ ಮಾಡಿಕೊಡುತ್ತದೆ ಎಂಬ ಆತಂಕವನ್ನು ರೈತ ಸಂಘಟನೆಗಳು ವ್ಯಕ್ತಪಡಿಸಿವೆ. ದೇಶದ ಮುಂದಿನ ಲೋಕಸಭಾ ಚುನಾವಣೆ ೨೦೨೪ರ ಏಪ್ರಿಲ್-ಮೇನಲ್ಲಿ ನಡೆಯಲಿದೆ. ಇನ್ನು ಪ್ರತಿಭಟನೆಯನ್ನು "ಶ್ರೀಮಂತ ರೈತರು" ಉತ್ತೇಜಿಸುತ್ತಿದ್ದಾರೆ ಎಂಬ ಆರೋಪವನ್ನು ತಳ್ಳಿಹಾಕಿದ ಅವರು ಹಲವು ಗ್ರಾಮಗಳು, ಹಳ್ಳಿಗಳು ಮತ್ತು ವಿವಿಧ ಸಂಘಟನೆಗಳ ರೈತರು ಪ್ರತಿಭಟನೆಯಲ್ಲಿ ಸೇರಿದ್ದಾರೆ ಎಂದು ಟಿಕೈಟ್ ಹೇಳಿದರು.
ಬ್ರಿಟನ್ ಜಿ-೭ ಶೃಂಗಸಭೆಗೆ ಪ್ರಧಾನಿ ಮೋದಿ ಭಾಗವಹಿಸುವ ಸಾಧ್ಯತೆ
ನವದೆಹಲಿ, ಜ. ೧೭: ನೈಋತ್ಯ ಇಂಗ್ಲೆAಡ್‌ನ ಸಣ್ಣ ಕಡಲತೀರದ ರೆಸಾರ್ಟ್ ಕಾರ್ನ್ವಾಲ್‌ನಲ್ಲಿ ಜೂನ್ ೧೧ ರಿಂದ ೧೩ ರವರೆಗೆ ನಡೆಯಲಿರುವ ಜಿ೭ರ ೪೭ನೇ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಜಿ೭ ಶೃಂಗಸಭೆ ಸಭೆಯಲ್ಲಿ ಭಾಗವಹಿಸಲು ಬ್ರಿಟನ್ ಡಿ. ೧೫ ರಂದು ಅಧಿಕೃತವಾಗಿ ಭಾರತವನ್ನು ಆಹ್ವಾನಿಸಿತ್ತು. ಮುಂದಿನ ವರ್ಷ ಬ್ರಿಟನ್ ಆತಿಥೇಯ ಜಿ೭ ಶೃಂಗಸಭೆಗೆ ಸೇರಲು ಪ್ರಧಾನಿ ಬೋರಿಸ್ ಜಾನ್ಸನ್ ಅವರು ಸಹ ಪ್ರಧಾನಿ ಮೋದಿಯನ್ನು ಆಹ್ವಾನಿಸಿದ್ದಾರೆ. ೨೦೨೧ರಲ್ಲಿ ಜಿ೭ ಅಧ್ಯಕ್ಷತೆ ಮತ್ತು ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮ್ಮೇಳನದ ಅಧ್ಯಕ್ಷತೆಯ ಸ್ಥಾನ ಪಡೆಯಲು ನಾವು ಎದುರು ನೋಡುತ್ತಿದ್ದೇವೆ. ವಿಶ್ವಸಂಸ್ಥೆಯ ಭದ್ರತಾ ಪರಿಷತ್‌ಗೆ ಭಾರತ ಮರಳಿದ್ದನ್ನು ನಾವು ಸ್ವಾಗತಿಸುತ್ತೇವೆ ಎಂದರು.
ದಾಖಲೆ ಧೂಳಿಪಟ ಮಾಡಿದ ಸುಂದರ್-ಶಾರ್ದೂಲ್ ಅಬ್ಬರ!
ಬ್ರಿಸ್ಬೆನ್, ಜ. ೧೭: ಆಸ್ಟೆçÃಲಿಯಾ ವಿರುದ್ಧದ ನಾಲ್ಕನೇ ಹಾಗೂ ನಿರ್ಣಾಯಕ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಬ್ಯಾಟ್ಸ್ಮನ್‌ಗಳು ವಿಫಲರಾಗಿದ್ದು ಬೌಲರ್‌ಗಳಾದ ವಾಷಿಂಗ್ಟನ್ ಸುಂದರ್ ಹಾಗೂ ಶಾರ್ದೂಲ್ ಠಾಕೂರ್ ತಂಡಕ್ಕೆ ಆಸರೆಯಾಗಿದ್ದರು. ಈ ಜೋಡಿ ಹಲವು ದಾಖಲೆಗಳನ್ನು ಮಾಡಿದೆ. ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ್ದ ಆಸ್ಟೆçÃಲಿಯಾ ಮೊದಲ ಇನ್ನಿಂಗ್ಸ್ನಲ್ಲಿ ೩೬೯ ರನ್ ಬಾರಿಸಿ ಆಲೌಟ್ ಆಗಿತ್ತು. ನಂತರ ಇನ್ನಿಂಗ್ಸ್ ಆರಂಭಿಸಿದ್ದ ಟೀಂ ಇಂಡಿಯಾ ಪರ ಬ್ಯಾಟ್ಸ್ಮನ್‌ಗಳು ಗರಿಷ್ಠ ರನ್ ಬಾರಿಸುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ತಂಡ ತೀವ್ರ ಹಿನ್ನಡೆಗೆ ಸಿಲುಕಬೇಕಿತ್ತು. ಆದರೆ ಕೊನೆಯಲ್ಲಿ ತಂಡಕ್ಕೆ ಆಸರೆಯಾಗಿದ್ದು ವಾಷಿಂಗ್ಟನ್ ಸುಂದರ್ ಮತ್ತು ಶಾರ್ದೂಲ್ ಠಾಕೂರ್. ೬೨ ರನ್ ಬಾರಿಸುವ ಮೂಲಕ ಪಾದಾರ್ಪಣೆ ಪಂದ್ಯದಲ್ಲೇ ೭ನೇ ಕ್ರಮಾಂಕದಲ್ಲಿ ೬೨ ರನ್ ಪೇರಿಸಿದ ಮೊದಲ ಆಟಗಾರ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. ಈ ಹಿಂದೆ ೧೯೧೧ರ ಡಿಸೆಂಬರ್‌ನಲ್ಲಿ ಸಿಡ್ನಿಯಲ್ಲಿ ಇಂಗ್ಲೆAಡ್ ತಂಡದ ಬೌಲರ್ ಫ್ರಾಂಕ್ ಪೋಸ್ಟರ್ ಪಾದಾರ್ಪಣೆ ಪಂದ್ಯದಲ್ಲಿ ೫೬ ರನ್ ಪೇರಿಸಿದ್ದರು. ಈ ಜೋಡಿ ಬರೋಬ್ಬರಿ ೧೨೩ ರನ್ ಜೊತೆಯಾಟವಾಡಿದ್ದಾರೆ. ಈ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ೭ನೇ ವಿಕೆಟ್ ಜೊತೆಯಾಟದಲ್ಲಿ ಭಾರತ ಪರ ಅತೀ ಹೆಚ್ಚು ರನ್ ಜೊತೆಯಾಟ ಇದಾಗಿದೆ. ಸುಂದರ್ ೬೨ ರನ್ ಬಾರಿಸಿದ್ದರೆ ಶಾರ್ದೂಲ್ ಠಾಕೂರ್ ೬೭ ರನ್ ಪೇರಿಸಿದ್ದಾರೆ. ಇದರೊಂದಿಗೆ ಟೀಂ ಇಂಡಿಯಾ ಗೌರವ ಮೊತ್ತ ಪೇರಿಸಲು ಸಾಧ್ಯವಾಗಿದೆ. ಭಾರತ ಮೊದಲ ಇನ್ನಿಂಗ್ಸ್ ೩೩೬ ರನ್‌ಗಳಿಗೆ ಸರ್ವಪತನ ಕಂಡಿದೆ. ಸದ್ಯ ಆಸ್ಟೆçÃಲಿಯಾ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದು ೨೧ ಪೇರಿಸಿದ್ದು ೫೪ ರನ್ ಮುನ್ನಡೆ ಸಾಧಿಸಿದೆ