ವೀರಾಜಪೇಟೆ, ಜ. ೧೭: ನೆನೆಗುದಿಗೆ ಬಿದ್ದಿರುವ ಕೊಡಗು-ಕೇರಳ ಸಂಪರ್ಕ ಕಲ್ಪಿಸುವ ಕೂಟುಹೊಳೆಗೆ ನೂತನ ಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡುವ ಹಿನ್ನೆಲೆಯಲ್ಲಿ ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಹಾಗೂ ಕೇರಳದ ಪೆರಾವೂರ್‌ನ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಆರ್. ಸುರೇಶ್ ಸೇತುವೆ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

ಕೇರಳ ಸರಕಾರ ರಸ್ತೆ ಸಾರಿಗೆ ನಿಗಮದ ಯೋಜನೆಯಿಂದ ರೂ. ೩೬೬ ಕೋಟಿ ವೆಚ್ಚದಲ್ಲಿ ಕೇರಳದ ತಲಚೇರಿಯಿಂದ ಕೊಡಗಿನ ಮಾಕುಟ್ಟದ ತನಕ ಸುಮಾರು ೫೩ ಕಿ.ಮೀ. ರಸ್ತೆ ಅಭಿವೃದ್ಧಿ ಕಾಮಗಾರಿ

ನಡೆಸಲು ಉದ್ದೇಶಿಸಲಾಗಿತ್ತು. ಕೂಟುಹೊಳೆ ಸೇತುವೆ ನಿರ್ಮಾಣಕ್ಕೆ ಒಟ್ಟು ೫ ಪಿಲ್ಲರ್‌ಗಳ ಪೈಕಿ ಕೇರಳ ಭಾಗಕ್ಕೆ ೨, ಕರ್ನಾಟಕ ವ್ಯಾಪ್ತಿಗೆ ೩ ಪಿಲ್ಲರ್‌ಗಳು ನಿರ್ಮಿಸಲಾಗಬೇಕಿತ್ತು. ಆದರೆ, ರಾಜ್ಯ ಅರಣ್ಯ ಇಲಾಖೆ ಮಾಕುಟ್ಟ ಪ್ರದೇಶವನ್ನು ಬ್ರಹ್ಮಗಿರಿ ನಡೆಸಲು ಉದ್ದೇಶಿಸಲಾಗಿತ್ತು. ಕೂಟುಹೊಳೆ ಸೇತುವೆ ನಿರ್ಮಾಣಕ್ಕೆ ಒಟ್ಟು ೫ ಪಿಲ್ಲರ್‌ಗಳ ಪೈಕಿ ಕೇರಳ ಭಾಗಕ್ಕೆ ೨, ಕರ್ನಾಟಕ ವ್ಯಾಪ್ತಿಗೆ ೩ ಪಿಲ್ಲರ್‌ಗಳು ನಿರ್ಮಿಸಲಾಗಬೇಕಿತ್ತು. ಆದರೆ, ರಾಜ್ಯ ಅರಣ್ಯ ಇಲಾಖೆ ಮಾಕುಟ್ಟ ಪ್ರದೇಶವನ್ನು ಬ್ರಹ್ಮಗಿರಿ ಅವರಿಗೆ ಪ್ರಸ್ತಾವನೆ ಸಲ್ಲಿಸಿ ಕೇರಳ-ಕರ್ನಾಟಕ ಸಂಪರ್ಕಕ್ಕೆ ಪ್ರಮುಖ ಬದಲಿ ಸೇತುವೆಯಾಗಿದ್ದು. ಕೇರಳದ ಅಂತರÀರಾಷ್ಟಿçಯ ವಿಮಾನ ನಿಲ್ದಾಣಕ್ಕೆ ವೀರಾಜಪೇಟೆಯಿಂದ ಹತ್ತಿರವಾದ ಮಾರ್ಗವಾಗಿರುವುದರಿಂದ ಕೊಣನೂರು-ಮಾಕುಟ್ಟ ರಸ್ತೆ ಅಭಿವೃದ್ಧಿ ಬಗ್ಗೆ ವಿವರವಾಗಿ ಮುಖ್ಯಮಂತ್ರಿ ಅವರಿಗೆ ತಿಳಿಸಿದ್ದ ಹಿನ್ನೆಲೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿತ್ತು. ಕೇಂದ್ರ ಸರ್ಕಾರ ಪ್ರಸ್ತಾವನೆಯನ್ನು ಪರಿಶೀಲಿಸಿ ಅರಣ್ಯ ಇಲಾಖೆಯ ವನ್ಯಜೀವಿ ಮಂಡಳಿಗೆ ಆದೇಶಿಸಿ ಇದನ್ನು ಪರಿಶೀಲಿಸಿ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಸೇತುವೆ ನಿರ್ಮಾಣ ಕಾರ್ಯವನ್ನು ಮುಂದುವರಿಸುವAತೆ ಸೂಚನೆ ನೀಡಲಾಗಿದೆ ಎಂದು ಬೋಪಯ್ಯ ಮಾಹಿತಿ ನೀಡಿದರು. ಸೇತುವೆ ಕಾಮಗಾರಿಗೆ ಶೀಘ್ರ ಚಾಲನೆ ನೀಡಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಅಚ್ಚಪಂಡ ಮಹೇಶ್ ಗಣಪತಿ, ಶಶಿ ಸುಬ್ರಮಣಿ, ತಾ.ಪಂ. ಸದಸ್ಯ ಬಿ.ಎಂ. ಗಣೇಶ್, ಆರ್.ಎಂ.ಸಿ. ಸದಸ್ಯ ಕೆ. ಗಣೇಶ್, ಬಿಜೆಪಿ ಮುಖಂಡರಾದ ಪಿ. ರಘು ನಾಣಯ್ಯ, ಚುಪ್ಪ ನಾಗರಾಜ್, ಎಂ. ಮಧುದೇವಯ್ಯ, ಜೊಕೀಂ ರಾಡ್ರೀಗಾಸ್, ಎ. ಹರೀಶ್, ವಿವೇಕ್ ಪೂಜಾರಿ ಹಾಗೂ ಕೇರಳ ಪೆರಾವೂರ್ ಪಂಚಾಯಿತಿಯ ಪಿಡಿಒ ಪ್ರಿಜೇಶ್, ಬಿಜೆಪಿ ಮುಖಂಡರಾದ ವಿ.ವಿ. ಚಂದ್ರನ್, ಶಾಜಿ ಮತ್ತಿತರರು ಇದ್ದರು.