ಕೂಡಿಗೆ, ಜ. ೧೮: ಸಂಕ್ರಾAತಿ ಅಂಗವಾಗಿ ಬೈಚನಹಳ್ಳಿಯ ಗೆಳೆಯರ ಬಳಗದ ಆಶ್ರಯದಲ್ಲಿ ೫ನೇ ವರ್ಷದ ಕ್ರಿಕೆಟ್ ಪಂದ್ಯಾಟ ಮತ್ತು ಹಗ್ಗಜಗ್ಗಾಟ ಸ್ಪರ್ಧೆ ನಡೆಯಿತು. ಕ್ರಿಕೆಟ್ ಪಂದ್ಯಾಟದಲ್ಲಿ ಬೈಚನಹಳ್ಳಿಯ ಸಮ್ಮದ್ ಫ್ರೆಂಡ್ಸ್ ಪ್ರಥಮ, ವಿನಾಯಕ ಡ್ರೀಂ ಇಲೆವೆನ್ ತಂಡ ದ್ವಿತೀಯ ಬಹುಮಾನ ಪಡೆದುಕೊಂಡಿತು. ಹಗ್ಗಜಗ್ಗಾಟದಲ್ಲಿ ಬಿ.ಎಲ್.ಶಿವಕುಮಾರ್ ತಂಡ ಪ್ರಥಮ, ಸಮ್ಮದ್ ಫ್ರೆಂಡ್ಸ್ ತಂಡ ದ್ವಿತೀಯ ಸ್ಥಾನ ಗಳಿಸಿತು. ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಪ.ಪಂ ಸದಸ್ಯ ಬಿ.ಎಲ್.ಜಗದೀಶ್ ವಿಜೇತ ತಂಡಗಳಿಗೆ ಬಹುಮಾನ ವಿತರಣೆ ಮಾಡಿದರು. ಈ ಸಂದರ್ಭ ಗೆಳೆಯರ ಬಳಗದ ಪ್ರಮುಖರಾದ ಶ್ರೀಕಾಂತ್, ಜಗದೀಶ್, ಕೆ.ಟಿ.ಶ್ರೀಕಾಂತ್, ರವೀಶ್, ವಿನು, ಶಿವಕುಮಾರ್ ಇದ್ದರು.