ಪೊನ್ನಂಪೇಟೆ, ಜ. ೧೭: ಸ್ಥಳೀಯ ಗ್ರಾಮ ಪಂಚಾಯಿತಿಯ ನಿಧಿಯಿಂದ ಮಂಜೂರಾಗಿರುವ ರೂ. ೨.೫ ಲಕ್ಷ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಯಿತು.
ಇಲ್ಲಿನ ನ್ಯಾಯಾಲಯ ಸಂಕೀರ್ಣದ ಬಳಿ ನಡೆದ ಕಾಮಗಾ ರಿಯ ಭೂಮಿಪೂಜೆ ಕಾರ್ಯಕ್ರಮದಲ್ಲಿ, ನ್ಯಾಯಾಲಯ ಕಟ್ಟಡದ ಹಿಂಭಾಗದಿAದ ಹಾದು ಹೋಗುವ ರಸ್ತೆ ಡಾಂಬರೀಕರಣ ಕಾಮಗಾರಿಗೆ ಗ್ರಾ. ಪಂ. ಅಧ್ಯಕ್ಷೆ ಮೂಕಳೆರ ಸುಮಿತಾ ಮತ್ತು ಸದಸ್ಯರು, ಸ್ಥಳೀಯ ಜಿ. ಪಂ. ಮತ್ತು ತಾ. ಪಂ. ಸದಸ್ಯರ ಸಮ್ಮುಖದಲ್ಲಿ ವಿಶೇಷ ಪೂಜೆ ನೆರವೇರಿಸಿ ವಿದ್ಯುಕ್ತವಾಗಿ ಚಾಲನೆ ನೀಡಿದರು. ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಇಲ್ಲಿನ ಗ್ರಾ.ಪಂ.ನ ಸ್ಥಳೀಯ ವಾರ್ಡ್ ಸದಸ್ಯ ಆಲೀರ ಎಂ. ರಶೀದ್, ಪೊನ್ನಂಪೇಟೆ ನ್ಯಾಯಾಲಯ ಕಟ್ಟಡ, ನಿರೀಕ್ಷಣಾ ಮಂದಿರ ಸೇರಿದಂತೆ ಸಾಕಷ್ಟು ಸರಕಾರಿ ಕಚೇರಿಗಳಿಂದ ನಿಸರ್ಗ ನಗರದ ಮೂಲಕ ಮಹಾತ್ಮ ಗಾಂಧಿ ನಗರಕ್ಕೆ ಸಂಪರ್ಕ ಕಲ್ಪಿಸುವ ಈ ಪ್ರಮುಖ ರಸ್ತೆಯು ಕಳೆದ ಕೆಲವು ತಿಂಗಳುಗಳಿAದ ತೀವ್ರ ದುಸ್ಥಿತಿಯಲ್ಲಿತ್ತು. ಇದರಿಂದ ಜನರಿಗೆ ಮತ್ತು ವಾಹನ ಚಾಲಕರಿಗೆ ತೀವ್ರ ಸಮಸ್ಯೆಯಾಗುತ್ತಿತ್ತು. ಇದನ್ನು ಮನಗಂಡು ಗ್ರಾಮ ಪಂಚಾಯಿತಿಯ ನಿಧಿಯಿಂದ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ವಿವರಿಸಿದರು. ಪೊನ್ನಂಪೇಟೆ ಗ್ರಾ.ಪಂ. ಅಧ್ಯಕ್ಷೆÀ ಮೂಕಳೇರ ಸುಮಿತಾ ಅವರು ಮಾತನಾಡಿ, ತಮ್ಮ ಆಡಳಿತಾವಧಿಯಲ್ಲಿ ಗ್ರಾ.ಪಂ. ವ್ಯಾಪ್ತಿಯ ನಿರೀಕ್ಷಣಾ ಮಂದಿರ ಸೇರಿದಂತೆ ಸಾಕಷ್ಟು ಸರಕಾರಿ ಕಚೇರಿಗಳಿಂದ ನಿಸರ್ಗ ನಗರದ ಮೂಲಕ ಮಹಾತ್ಮ ಗಾಂಧಿ ನಗರಕ್ಕೆ ಸಂಪರ್ಕ ಕಲ್ಪಿಸುವ ಈ ಪ್ರಮುಖ ರಸ್ತೆಯು ಕಳೆದ ಕೆಲವು ತಿಂಗಳುಗಳಿAದ ತೀವ್ರ ದುಸ್ಥಿತಿಯಲ್ಲಿತ್ತು. ಇದರಿಂದ ಜನರಿಗೆ ಮತ್ತು ವಾಹನ ಚಾಲಕರಿಗೆ ತೀವ್ರ ಸಮಸ್ಯೆಯಾಗುತ್ತಿತ್ತು. ಇದನ್ನು ಮನಗಂಡು ಗ್ರಾಮ ಪಂಚಾಯಿತಿಯ ನಿಧಿಯಿಂದ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ವಿವರಿಸಿದರು. ಪೊನ್ನಂಪೇಟೆ ಗ್ರಾ.ಪಂ. ಅಧ್ಯಕ್ಷೆÀ ಮೂಕಳೇರ ಸುಮಿತಾ ಅವರು ಮಾತನಾಡಿ, ತಮ್ಮ ಆಡಳಿತಾವಧಿಯಲ್ಲಿ ಗ್ರಾ.ಪಂ. ವ್ಯಾಪ್ತಿಯ ಸಾರ್ವಜನಿಕ ರಸ್ತೆ ಅಭಿವೃದ್ಧಿಗಾಗಿ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಪೊನ್ನಂಪೇಟೆ ಕ್ಷೇತ್ರದ ಜಿ.ಪಂ. ಸದಸ್ಯೆ ಶ್ರೀಜಾ ಶಾಜಿ, ತಾ.ಪಂ. ಸದಸ್ಯೆ ಮೂಕಳೇರ ಆಶಾ ಪೂಣಚ್ಚ, ಸ್ಥಳೀಯ ಗ್ರಾ.ಪಂ. ಸದಸ್ಯೆ ಯಶೋಧ, ಕೊಡಗು ಜಿಲ್ಲಾ ವಕ್ಫ್ ಸಲಹಾ ಸಮಿತಿ ಉಪಾಧ್ಯಕ್ಷರು ಮತ್ತು ಅಲ್ಪಸಂಖ್ಯಾತ ಮುಖಂಡ ಕೆ.ಎಂ. ಅಬ್ದುಲ್ ರಹಿಮಾನ್, ವೀರಾಜಪೇಟೆ ತಾ.ಪಂ. ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡರಾದ ಶಾಜಿ ಅಚ್ಚುತ್ತನ್, ಸ್ಥಳೀಯರಾದ ಮೂಕಳ ಮಾಡ ಶಾರದ ಮೊದಲಾದವರು ಹಾಜರಿದ್ದರು.