ಕುಶಾಲನಗರ, ಜ. ೧೮: ಮಹಾಜನ್ ಆಯೋಗದ ವರದಿ ಪ್ರಕಾರ ನ್ಯಾಯಯುತವಾಗಿ ಬೆಳಗಾವಿ ಕರ್ನಾಟಕಕ್ಕೆ ಸೇರಿದೆ. ಇದನ್ನು ಬದಲಾಯಿಸಲು ಪ್ರಪಂಚದ ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ ಎಂದು ಸಂಸದ ಪ್ರತಾಪ್‌ಸಿಂಹ ಹೇಳಿದರು. ಕುಶಾಲನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಮಹಾರಾಷ್ಟç ಮುಖ್ಯಮಂತ್ರಿ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುವ ಅವಶ್ಯಕತೆಯಿಲ್ಲ. ಆ ರಾಜ್ಯದಲ್ಲಿ ದಿನೇದಿನೇ ಕೊರೊನಾ ಹೆಚ್ಚಾಗಿದ್ದು, ಅದನ್ನು ನಿಯಂತ್ರಿಸಲು ಸರಕಾರ ಸಂಪೂರ್ಣ ವಿಫಲವಾಗಿದೆ. ಆ ಸರಕಾರದ ಮೇಲೆ ಇಡಿ ದಾಳಿ, ಭ್ರಷ್ಟಾಚಾರದ ಆರೋಪಗಳಿವೆ. ಜನರ ಗಮನ ಬೇರೆಡೆ ಹರಿಸಲು ಕ್ಷÄಲ್ಲಕ ರಾಜಕಾರಣ ಮಾಡುತ್ತಿದ್ದಾರೆ ಎಂದ ಪ್ರತಾಪ್‌ಸಿಂಹ, ಉದ್ಧವ್ ಠಾಕ್ರೆ ಕುರ್ಚಿ ಯಾವಾಗ ಉದುರುತ್ತೋ ಎಂಬದು ಅವರಿಗೆ ತಿಳಿದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.