ಮಡಿಕೇರಿ, ಜ. ೧೭: ರೆಸಾರ್ಟ್ನಲ್ಲಿ ಜೂಜಾಡುತ್ತಿದ್ದ ೨೩ ಪ್ರವಾಸಿಗರನ್ನು ಬಂಧಿಸುವಲ್ಲಿ ಜಿಲ್ಲಾ ಡಿಸಿಐಬಿ ಘಟಕ ಯಶಸ್ವಿಯಾಗಿದೆ. ಸುಂಟಿಕೊಪ್ಪ ಸಮೀಪದ ೭ನೇ ಹೊಸಕೋಟೆಯಲ್ಲಿರುವ ಕೂರ್ಗ್ ಕೌಂಟಿ ರೆಸಾರ್ಟ್ನ ಪ್ರತ್ಯೇಕ ಕೋಣೆಯಲ್ಲಿ ಹಣವನ್ನು ಪಣಕ್ಕಿಟ್ಟು ಜೂಜಾಡುತ್ತಿದ್ದ ಮೈಸೂರು ಹಾಗೂ ಮಂಡ್ಯ ಮೂಲದ ಬಸವರಾಜು, ಎಂ.ಆರ್ ಆನಂದ್, ವಿನಯ್ ಕುಮಾರ್, ದೀಕ್ಷಿತ್, ಲೋಕೇಶ್, ಕೃಷ್ಣೇಗೌಡ, ಎಸ್. ಕುಮಾರ್, ಆನಂದ, ರವಿ, ವಿಜೇಂದ್ರ, ಸತೀಶ್, ಟಿ. ಕುಮಾರ್, ಮಹೇಶ್, ಟಿ.ಸಿ. ವಿನಯ್, ನವೀನ್, ಮಂಜು, ನಾಗರಾಜು, ಮಂಜುನಾಥ, ಚಂದ್ರ, ಸಂತೋಷ್, ರವಿಕುಮಾರ್, ಮಂಜು ಮತ್ತು ಕುಮಾರ್ ಎಂಬುವವರು ಬಂಧಿತರು. ಬಂಧಿತರಿAದ ರೂ ೬,೫೭,೮೪೦ ನಗದು ಸೇರಿದಂತೆ ೨೩ ಮೊಬೈಲ್ ಫೋನ್, ಬ್ರೀಜಾ, ಬುಲೆರೋ, ಸ್ವಿಫ್ಟ್ ಮತ್ತು ಕ್ರೆಟಾ ಕಾರನ್ನು ವಶಪಡಿಸಿಕೊಳ್ಳ ಲಾಗಿದೆ. ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲಿ ಡಿಸಿಐಬಿ ಇನ್ಸ್ಪೆಕ್ಟರ್ ಎನ್. ಕುಮಾರ್ ಆರಾಧ್ಯ, ಸಿಬ್ಬಂದಿಗಳಾದ ಬಿ.ಎಲ್. ಯೋಗೇಶ್ ಕುಮಾರ್, ಎಂ.ಎನ್. ನಿರಂಜನ್, ಕೆ.ಆರ್ ವಸಂತ, ವಿ.ಜಿ. ವೆಂಕಟೇಶ್, ಕೆ.ಎಸ್. ಅನಿಲ್ ಕುಮಾರ್, ಯು.ಎ. ಮಹೇಶ್, ಬಿ.ಜೆ. ಶರತ್ ರೈ, ಚಾಲಕ ಶಶಿಕುಮಾರ್, ಸುಂಟಿಕೊಪ್ಪ ಪೊಲೀಸ್ ಠಾಣೆಯ ಪಿಎಸ್‌ಐ ಕಾವೇರಪ್ಪ, ಸಿಬ್ಬಂದಿಗಳಾದ ಸತೀಶ್, ಪುನೀತ್ ಹಾಗೂ ಸಂಪತ್ ಇದ್ದರು.