ಕಣಿವೆ, ಜ. ೧೮: ಬಡಾವಣೆ ದ್ವಾರದಲ್ಲಿ ಸಮಸ್ಯೆಗಳ ತೋರಣ...! ಎಂದು ಭಾನುವಾರ ಶಕ್ತಿ ಪತ್ರಿಕೆಯಲ್ಲಿ ಪ್ರಕಟವಾದ ಕುಶಾಲನಗರದ ಮುಳ್ಳುಸೋಗೆ ಕುವೆಂಪು ಬಡಾವಣೆಯ ಸಮಸ್ಯೆಗಳ ವರದಿಗೆ ಕೇಂದ್ರದ ಮಂತ್ರಿಗಳಾದ ಸದಾನಂದಗೌಡ ಸ್ಪಂದನ ನೀಡಿದ್ದಾರೆ.

ಖಾಸಗಿ ಭೇಟಿಗಾಗಿ ಕುಶಾಲನಗರದ ತಮ್ಮ ಬೀಗರ ಮನೆಗೆ ಧಾವಿಸಿದ್ದ ಸದಾನಂದ ಗೌಡ ದಂಪತಿಗಳು ಕುವೆಂಪು ಬಡಾವಣೆಯ ತಮ್ಮ ಸಂಬAಧಿ ಡಾ. ರವಿಚಂದ್ರ ಎಂಬವರ ಮನೆಗೆ ತೆರಳಿದ್ದಾಗ ಅವರನ್ನು ಭೇಟಿ ಮಾಡಲು ತೆರಳಿದ್ದ ಕುವೆಂಪು ಬಡಾವಣೆ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳು ತಾವು ಕಳೆದ ಹಲವು ವರ್ಷಗಳಿಂದ ಅನುಭವಿಸುತ್ತಿ ರುವ ಸಮಸ್ಯೆಗಳ ಬಗ್ಗೆ ಸಚಿವರ ಗಮನ ಸೆಳೆದÀರು.

ಇದೆ ಸಂದರ್ಭ ಶಕ್ತಿ ಪತ್ರಿಕೆಯಲ್ಲಿ ಅದೇ ದಿನದಂದು ಪ್ರಕಟವಾಗಿದ್ದ ಲೇಖನವನ್ನೇ ಮನವಿ ಪತ್ರದ ರೂಪದಲ್ಲಿ ವಾಚಿಸಿದರು. ಬಳಿಕ ಆ ನಿವಾಸಿಗಳ ಅಹವಾಲು ಪತ್ರದ ಜೊತೆಗೆ ಪತ್ರಿಕೆಯಲ್ಲಿನ ಲೇಖನವನ್ನು ಸ್ವೀಕರಿಸಿದ ಸದಾನಂದಗೌಡ ಅವರು, ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಒಂದಷ್ಟು ವಿಶೇಷ ಅನುದಾನ ವನ್ನು ಬಿಡುಗಡೆ ಮಾಡಿಸಲು ಪ್ರಯತ್ನಿಸುವುದಾಗಿ ಭರವಸೆಯಿತ್ತÀರು.

ಅಲ್ಲದೇ ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ಅಪ್ಪಚ್ಚು ರಂಜನ್ ಅವರ ಗಮನಕ್ಕೂ ತರಲು ಹೇಳಿದರು ಎಂದು ಬಡಾವಣೆ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳು ‘ಶಕ್ತಿ’ಗೆ ಮಾಹಿತಿ ನೀಡಿದರು.

ದೇಶ ಸೇವೆ ಮಾಡಿ ಬಂದು ಇಲ್ಲಿ ನೆಲೆಸಿರುವ ಕುಟುಂಬಗಳು ಹಾಗೂ ಹಾಲಿ ದೇಶ ಸೇವೆಗೈಯುತ್ತಿರುವ ಕುಟುಂಬಗಳಿಗೆ ಸ್ಥಳೀಯ ಆಡಳಿತ ಸೂಕ್ತವಾಗಿ ಸ್ಪಂದಿಸಬೇಕಿದೆ. ಈ ಬಗ್ಗೆ ಸಂಬAಧಿಸಿದವರ ಗಮನಕ್ಕೆ ತಂದು ಬಡಾವಣೆಯ ಸಮಸ್ಯೆಗಳ ನಿವಾರಣೆಗೆ ವಿಶೇಷ ಒತ್ತು ನೀಡುವುದಾಗಿ ಸದಾನಂದಗೌಡರು ತಿಳಿಸಿದರೆಂದು ಬಡಾವಣೆಯ ನಿವಾಸಿ ಹವಾಲ್ದಾರ್ (ನಿವೃತ್ತ) ಅಮೆ ಜನಾರ್ಧನ್ ಮಾಹಿತಿ ನೀಡಿದರು.