ವೀರಾಜಪೇಟೆ, ಜ.೧೭: ಸಮೀಪದ ಒಂಟಿಯAಗಡಿ ಗ್ರಾಮದ ಮೀನಾ ಎಂಬ ಮಹಿಳೆಯ ಮನೆ ಮೇಲೆ ದಾಳಿ ನಡೆಸಿ ಸಂಗ್ರಹಿಸಿಟ್ಟಿದ್ದ ೧೦ಲೀಟರ್ ಕಳ್ಳಭಟ್ಟಿಯನ್ನು ವಶಪಡಿಸಿಕೊಳ್ಳಲಾಗಿದೆ. ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ ಮೇರೆ ಆರೋಪಿಯನ್ನು ೧೫ ದಿನಗಳ ನ್ಯಾಯಾಂಗ ಬಂಧನದಲ್ಲಿಡುವAತೆ ಆದೇಶಿಸಿದ್ದಾರೆ.

ಗ್ರಾಮಾಂತರ ಪೊಲೀಸ್ ಠಾಣೆಯ ಸಬ್‌ಇನ್ಸ್ಪೆಕ್ಟರ್ ಸಿದ್ದಲಿಂಗಪ್ಪ, ಮುಖ್ಯಪೇದೆ ಅನುಪಮ, ಸಿಬ್ಬಂದಿ ಕೀರ್ತಿ ಕುಮಾರ್, ನೆಹರೂ, ಹಾಗೂ ಪ್ರದೀಪ್ ಕಾರ್ಯಾಚರಣೆಯಲ್ಲಿದ್ದರು.