ನಾಪೋಕ್ಲು, ಜ. ೧೭: ರೈತರು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡರೆ ಆರ್ಥಿಕವಾಗಿ ಲಾಭಗಳಿಸಬಹುದು ಎಂದು ತಾಲೂಕು ಪಂಚಾಯಿತಿ ಸದಸ್ಯೆ ಉಮಾಪ್ರಭು ಹೇಳಿದರು.
ನಾಪೋಕ್ಲು ಸಮೀಪದ ಪಾರಾಣೆ-ಬಲಮುರಿ ಗ್ರಾಮದಲ್ಲಿ ಪಶು ಸಂಗೋಪನಾ ಇಲಾಖೆ ವತಿಯಿಂದ ಏರ್ಪಡಿಸಲಾಗಿದ್ದ ಉಚಿತ ಪಶು ಆರೋಗ್ಯ ಮತ್ತು ಗೊಡ್ಡು ರಾಸುಗಳ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು. ಹೈನುಗಾರಿಕೆಯಿಂದ ರೈತರಿಗೆ ಹಲವು ಪ್ರಯೋಜನಗಳಿವೆ. ಇಲಾಖೆಯಿಂದ ದೊರಕುವ ಸವಲತ್ತುಗಳನ್ನು ಬಳಸಿಕೊಂಡು ರೈತರು ಆರ್ಥಿಕವಾಗಿ ಸದೃಢರಾಗಬೇಕು ಎಂದರು. ಕಾರ್ಯಕ್ರಮವನ್ನು ಪಂಚಾಯಿತಿ ನೂತನ ಸದಸ್ಯ ಬೊಳ್ಳಚೆಟ್ಟೀರ ಪ್ರಕಾಶ್ ನೆರವೇರಿಸಿದರು. ಹಿರಿಯರಾದ ಬೆಳ್ಯಪ್ಪ ಪಾಪಯ್ಯ, ಇಲಾಖಾಧಿಕಾರಿಗಳು ಇದ್ದರು.