ಮಡಿಕೇರಿ, ಜ. ೧೬ : ಕೊರೊನಾ ಮಹಾಮಾರಿ ವಿರುದ್ಧ ಜಗತ್ತಿನ ಅತಿದೊಡ್ಡ ಲಸಿಕಾ ಕಾರ್ಯಕ್ಕೆ ಭಾರತ ಸಜ್ಜಾಗಿದ್ದು, ಇದರ ಅಂಗವಾಗಿ ಮೊದಲ ಹಂತದಲ್ಲಿ ಕೊಡಗು ಜಿಲ್ಲೆಯ ೫ ಕೇಂದ್ರಗಳಲ್ಲಿ ನೋಂದಣಿಗೊAಡಿದ್ದ ೪೭೪ ಆರೋಗ್ಯ ಕಾರ್ಯಕರ್ತರ ಪೈಕಿ ೩೯೬ ಮಂದಿಗೆ ಲಸಿಕೆ ನೀಡಲಾಯಿತು.

ಜಿಲ್ಲೆಗೆ ೪ ಸಾವಿರ ಕೋವಿಡ್ ಲಸಿಕೆ (ಕೋವಿಶೀಲ್ಡ್) ಪೂರೈಕೆಯಾಗಿದ್ದು, ಇಂದು ಮೊದಲ ಹಂತವಾಗಿ ಮಡಿಕೇರಿಯ ೨ ಕಡೆ ಸೇರಿದಂತೆ, ವೀರಾಜಪೇಟೆ, ಸೋಮವಾರಪೇಟೆ, ಕಾಕೋಟುಪರಂಬು ಕೇಂದ್ರಗಳಲ್ಲಿ ಕೊರೊನಾ ಲಸಿಕೆ ನೀಡಲಾಗಿದೆ. ಕಾಕೋಟುಪರಂಬು ೬೧, ಸೋಮವಾರಪೇಟೆ ೭೭, ವೀರಾಜಪೇಟೆ ೯೬, ಮಡಿಕೇರಿ ಜಿಲ್ಲಾಸ್ಪತ್ರೆ ೮೦, ಮಡಿಕೇರಿ ನಗರ ಕೇಂದ್ರದ ೮೨ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗಿದ್ದು, ಯಾವುದೇ ವ್ಯತಿರಿಕ್ತ ಪರಿಣಾಮ ಇಲ್ಲದೆ ಲಸಿಕಾ ಕಾರ್ಯ ಯಶಸ್ವಿಯಾಗಿದೆ.

ವ್ಯಾಕ್ಸಿನ್ ಪಡೆಯುವ ಮುನ್ನ ವಿವಿಧ ಹಂತಗಳ ಪ್ರಕ್ರಿಯೆ ಪೂರೈಸಬೇಕು. ಮೊದಲು ಸಿಬ್ಬಂದಿಗಳ ಮೂಲಕ ಬಳಿಕ ಸರ್ಕಾರದ ಆ್ಯಪ್ ಮೂಲಕ ನೋಂದಣಿ ಮಾಡಿಸಿಕೊಂಡು, ವ್ಯಾಕ್ಸಿನೇಟರ್ (ಲಸಿಕೆ ಹಾಕುವವರು) ಮೂಲಕ ಲಸಿಕೆ ಪಡೆದುಕೊಂಡು, ಅಧÀð ಗಂಟೆಗಳ ಕಾಲ ವಿಶ್ರಾಂತಿ ಪಡೆದು ಆರೋಗ್ಯ ವೀಕ್ಷಕರು ತಪಾಸಣೆ ನಡೆಸಿದ ಬಳಿಕ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಪ್ರಥಮ ಹಂತದಲ್ಲಿ ೪ ಸಾವಿರ ಲಸಿಕೆ ಪೂರೈಕೆಯಾಗಿದ್ದು, ಉಳಿದ ೨ ಸಾವಿರ ಆರೋಗ್ಯ ಕಾರ್ಯಕರ್ತರಿಗೆ ಒಂದು ವಾರದೊಳಗೆ ವ್ಯಾಕ್ಸಿನ್ ನೀಡಲಾಗುತ್ತದೆ. ಸಧ್ಯಕ್ಕೆ ೧ ಕೇಂದ್ರಕ್ಕೆ ಓರ್ವ ಅಧೀಕ್ಷಕರನ್ನು ನೇಮಿಸಲಾಗಿದೆ. ಮುಂದಿನ ದಿನಗಳಲ್ಲಿ ಮೂರು ಕೇಂದ್ರಕ್ಕೆ ಓರ್ವ ಅಧಿಕಾರಿಯನ್ನು ನಿಯೋಜಿಸಲಾಗುತ್ತದೆ. ಕೇಂದ್ರಗಳಿಗೆ ಲಸಿಕೆ ಸರಬರಾಜು ಮಾಡಲು ‘ವ್ಯಾಕ್ಸಿನ್ ಕ್ಯಾರಿಯರ್ ವ್ಯಾನ್’ ವ್ಯವಸ್ಥೆ ಮಾಡಲಾಗಿದೆ. ಲಸಿಕೆ ಪಡೆದು ವ್ಯತಿರಿಕ್ತ ಪರಿಣಾಮ ಉಂಟಾದರೆ ಕೋವಿಡ್ ಆಸ್ಪತ್ರೆಯಲ್ಲಿ ಐಸಿಯು ಕೇಂದ್ರ ಸ್ಥಾಪಿಸಲಾಗಿದೆ. ಇದರೊಂದಿಗೆ ಸಮಿತಿ ರಚಿಸಿ ಪರಿಣಾಮದ ಕಾರಣವನ್ನು ವಿಶ್ಲೇಷಣೆ ಮಾಡಲಾಗುತ್ತದೆ. ಮೊದಲು ಲಸಿಕೆ ಪಡೆದುಕೊಂಡವರು, ಕೆಲ ದಿನಗಳ ಬಳಿಕ ಮತ್ತೊಂದು ‘ಡೋಸ್’ ಲಸಿಕೆ ಪಡೆದುಕೊಳ್ಳುವುದು ಕಡ್ಡಾಯವಾಗಿದೆ ಎಂದು

(ಮೊದಲ ಪುಟದಿಂದ) ಮೆಡಿಕಲ್ ಕಾಲೇಜು ಅಧೀಕ್ಷಕ ಡಾ.ಲೋಕೇಶ್ ತಿಳಿಸಿದ್ದಾರೆ.

ಕೋವಿಡ್ ಆಸ್ಪತ್ರೆಯಾಗಿ ಪರಿವರ್ತನೆಯಾಗಿರುವ ನಗರದ ಜಿಲ್ಲಾಸ್ಪತ್ರೆಯಲ್ಲಿ ಮೊದಲ ಹಂತವಾಗಿ ೨೦೦ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಯಿತು. ಲಸಿಕೆ ನೀಡುವ ಮುನ್ನ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣವನ್ನು ಟಿವಿ ಪರದೆ ಮೂಲಕ ವೀಕ್ಷಿಸಲಾಯಿತು. ಶಾಸಕ ಅಪ್ಪಚ್ಚು ರಂಜನ್, ಪ್ರಭಾರ ಜಿಲ್ಲಾಧಿಕಾರಿ ಭಂವರ್ ಸಿಂಗ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮೋಹನ್, ಮೆಡಿಕಲ್ ಕಾಲೇಜು ಮುಖ್ಯಸ್ಥ ಡಾ.ಕಾರ್ಯಪ್ಪ, ಜಿ.ಪಂ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಸೇರಿದಂತೆ ಇನ್ನಿತರರು ಇದ್ದರು.

ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಅಪ್ಪಚ್ಚು ರಂಜನ್, ಪ್ರಥಮ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುತ್ತದೆ. ಭಯ ಇಲ್ಲದೆ ಲಸಿಕೆ ಹಾಕಿಸಿಕೊಳ್ಳಿ, ಹಲವು ವರ್ಷಗಳ ಬಳಿಕ ಮಾರಕ ಕಾಯಿಲೆ ಮಲೇರಿಯಾ ರೋಗಕ್ಕೆ ಲಸಿಕೆ ಕಂಡುಹಿಡಿಯಲಾಯಿತು. ಪ್ರಧಾನಿ ನರೇಂದ್ರ ಮೋದಿ ಅವರು ಉತ್ತಮ ಹೆಜ್ಜೆ ಇಟ್ಟು ತ್ವರಿತವಾಗಿ ಲಸಿಕೆ ಪೂರೈಸುವಲ್ಲಿ ಯಶಸ್ವಿಯಾಗಿದ್ದಾರೆ. ದೇಶದಲ್ಲಿ ಮೊದಲ ಬಾರಿಗೆ ಶೀಘ್ರವಾಗಿ ವ್ಯಾಕ್ಸಿನ್ ದೊರೆತಿರುವುದು ಮೆಚ್ಚುವ ವಿಚಾರವಾಗಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.

ವೀರಾಜಪೇಟೆಯಲ್ಲಿ ಯಶಸ್ವಿ

ವೀರಾಜಪೇಟೆ : ಕೊರೊನಾ ಲಸಿಕೆ ನೀಡುವಿಕೆ ಇಂದು ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಾಲನೆ ನೀಡಲಾಯಿತು.

ಡಿ ಗ್ರೂಪ್ ಸಿಬ್ಬಂದಿ ಚಿತ್ರ ಚೋಂದಮ್ಮ ಮೊದಲು ಲಸಿಕೆ ಹಾಕಿಸಿಕೊಂಡರು. ಕಳೆದ ಮಾರ್ಚ್ ತಿಂಗಳಿನಿAದ ಸಾರ್ವಜನಿಕ ಆಸ್ಪತೆೆ್ರಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಆಸ್ಪತ್ರೆಯ ಶುಚಿತ್ವದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಕೆಲಸ ಮಾಡುತ್ತಿರುವುದಾಗಿ ಅವರು ತಿಳಿಸಿದರು.

ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ವಿಶ್ವನಾಥ್ ಸಿಂಪಿ ಅವರಿಗೂ ಲಸಿಕೆ ಹಾಕಲಾಯಿತು.

ಡಾ.ವಿಶ್ವನಾಥ್ ಸಿಂಪಿ ಅವರು ಎರಡೂವರೆ ವರ್ಷಗಳಿಂದ ಇಲ್ಲಿನ ಆಸ್ಪತ್ರೆಯಲ್ಲಿ ಸರ್ಜನ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೊರೊನಾ ಹರಡುತ್ತಿದ್ದ ರೀನಾ ಲೋಬೋ, ಸೂಪರಿಂಟೆAಡೆAಟ್ ಮಂಗಳಗೌರಮ್ಮ, ಕಮಲ ಅವರುಗಳು ಉಪಸ್ಥಿತರಿದ್ದು, ಅಭಿಯಾನಕ್ಕೆ ಚಾಲನೆ ನೀಡಿದರು.

ಆಸ್ಪತ್ರೆಯ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಅನಿತ ಅವರು, ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಶಿವಪ್ರಸಾದ್ ಅವರಿಗೆ ಕೊರೊನಾ ಲಸಿಕೆ ನೀಡುವ ಮೂಲಕ ಸೋಮವಾರಪೇಟೆ ವ್ಯಾಪ್ತಿಯಲ್ಲಿ ಕೊರೊನಾ ವ್ಯಾಕ್ಸಿನ್ ನೀಡುವ ಅಭಿಯಾನಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು.

ಬೆಳಿಗ್ಗೆ ೧೧ ಗಂಟೆಯಿAದ ಸಂಜೆ ೫ ಗಂಟೆಯವರೆಗೆ ನಡೆದ ಲಸಿಕೆ ಅಭಿಯಾನದಲ್ಲಿ ಒಟ್ಟು ೭೧ ಮಂದಿಗೆ ಲಸಿಕೆ ನೀಡಲಾಯಿತು. ಆಸ್ಪತ್ರೆಗೆ ಈಗಾಗಲೇ ೧೦೦ ಲಸಿಕೆ ಆಗಮಿಸಿದ್ದು, ನೋಂದಣಿಯಾಗಿರುವ ಫ್ರಂಟ್ ಲೈನ್ ಸಿಬ್ಬಂದಿಗಳಿಗೆ ಲಸಿಕೆ ನೀಡಲಾಗುತ್ತಿದೆ. ಆಸ್ಪತ್ರೆಯ ವೈದ್ಯರು, ದಾದಿಯರು ಸೇರಿದಂತೆ ಇತರ ಸಿಬ್ಬಂದಿಗಳಿಗೆ ಪ್ರಥಮವಾಗಿ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಶಿಕ್ಷಣಾಧಿಕಾರಿ ಹೆಚ್.ಕೆ. ಶಾಂತಿ ತಿಳಿಸಿದರು.