ನದಿಯಲ್ಲಿ ಪ್ರವಾಸೋದ್ಯಮದ ಹೆಸರಿನಲ್ಲಿ ಯಾಂತ್ರೀಕೃತ ಬೋಟ್ ಚಲಾಯಿಸುವುದರೊಂದಿಗೆ ನದಿ ದಡ ಸಂಪೂರ್ಣ ಕೊರೆತಕ್ಕೆ ಈಡಾಗಿರುವುದು ಒಂದೆಡೆಯಾದರೆ ಬೋಟ್‌ಗಳಿಂದ ಹೊರಸೂಸುವ ಇಂಧನಗಳು ಅಪಾಯಕಾರಿಯಾಗಿ ನದಿ ಒಡಲು ಸೇರುತ್ತಿವೆ. ನದಿ ತಟಗಳಲ್ಲಿರುವ ಗ್ರಾಮ ಮತ್ತು ಪಟ್ಟಣ ಪಂಚಾಯ್ತಿ ವ್ಯಾಪ್ತಿಗಳಲ್ಲಿರುವ ವಾಹನಗಳ ಸರ್ವೀಸ್ ಸ್ಟೇಷನ್‌ಗಳಿಂದ ಹೊರಸೂಸುವ ಗ್ರೀಸ್ ಮುಂತಾದ ವಸ್ತುಗಳು ನೇರವಾಗಿ ನದಿಗೆ ಸೇರ್ಪಡೆಗೊಂಡು ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ನೀರಿನಲ್ಲಿ ಇಂತಹ ಇಂಧನಗಳು ಮಿಶ್ರಣಗೊಳ್ಳದೆ ತೇಲಾಡುತ್ತ ಇದು ನೇರವಾಗಿ ಮನುಷ್ಯನ ಒಡಲಿಗೆ ಸೇರುವ ಮೂಲಕ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವುದು ನದಿ ತಟದ ಜನರ ಆತಂಕಕಾರಿ ಸಂಗತಿಯಾಗಿದೆ.

ಕಾವೇರಿ ನದಿ ತಟಗಳಲ್ಲಿ ವಲಸೆ ಬಂದು ವಾಸ್ತವ್ಯ ಹೂಡಿ ರುವ ನೂರಾರು ಮನೆಗಳಿಂದ ಕಾವೇರಿ ನದಿಯ ಮೂಲ ಅಸ್ತಿತ್ವಕ್ಕೆ ಕಂಟಕ ಉಂಟಾಗಿರುವುದು ಕೂಡ ಇನ್ನೊಂದು ಸಮಸ್ಯೆಯಾಗಿದೆ. ಕಾಕೋಟುಪರಂಬು, ಬೇತ್ರಿ, ಹಾಲುಗುಂದ, ಕಣ್ಣಂಗಾಲ, ನೆಲ್ಲಿಹುದಿಕೇರಿ, ನಾಪೋಕ್ಲು, ಭಾಗಮಂಡಲ ವ್ಯಾಪ್ತಿಯಲ್ಲಿರುವ ನದಿ ತಟದ ಸುಮಾರು ಸಾವಿರಕ್ಕೂ ಅಧಿಕ ಮನೆ, ಕಟ್ಟಡಗಳನ್ನು ಹಾಗೂ ನದಿ ತಟಗಳ ಒತ್ತುವರಿಯನ್ನು ತೆರವುಗೊಳಿಸಿ ಅಭಿವೃದ್ಧಿಪಡಿಸಲು ಮುಂದಾದಲ್ಲಿ ಇದರಿಂದ ಉಂಟಾಗಲಿರುವ ಸಮಸ್ಯೆಯನ್ನು ಪರಿಹರಿಸುವ ಪ್ರಯತ್ನ ಸುಲಲಿತವಾಗಲಿದೆ ಎನ್ನುವುದು ಬಹುತೇಕ ಜನರ ಅಭಿಪ್ರಾಯವಾಗಿದೆ. ನದಿ ತಟದ ಜನರಿಗೆ ಪುನರ್ವಸತಿ ಕಲ್ಪಿಸುವುದು ರಾಜ್ಯ ಹಾಗೂ ಕೇಂದ್ರ ಸರಕಾರದ ಆದ್ಯ ಕರ್ತವ್ಯವಾಗಿದೆ.

ಇತ್ತೀಚಿನ ದಿನಗಳಲ್ಲಿ ಕೆಲವೆಡೆ ಶುಂಠಿ ತೊಳೆಯುವ ಕಾರ್ಖಾನೆಗಳಿಂದ ಕೂಡ ಹೊರಬರುವ ಅಪಾಯಕಾರಿ ರಾಸಾಯನಿಕಗಳು ಭಾರೀ ಅನಾಹುತಕ್ಕೆ ಎಡೆಮಾಡಿಕೊಡುವುದು ನಿಶ್ಚಿತ.

ಕಾವೇರಿಗೆ ಹಲವು ಕಂಟಕ

ಇವೆಲ್ಲಾ ಕೊಡಗು ಜಿಲ್ಲಾ ವ್ಯಾಪ್ತಿಯ ಕಾವೇರಿಯ ಸಮಸ್ಯೆಯಾದರೆ ಮುಂದೆ ಕಾವೇರಿಗೆ ಇನ್ನೂ ಹಲವು ಕಂಟಕಗಳು ಎದುರಾಗುತ್ತಿವೆ. ನದಿ ತಟಗಳಲ್ಲಿ ನಿರ್ಮಾಣಗೊಂಡಿರುವ ಕಾರ್ಖಾನೆಗಳಿಂದ ಹೊರಸೂಸುವ ವಿಷಪೂರಿತ ತ್ಯಾಜ್ಯಗಳು ಕೂಡ ಜೀವನದಿಗೆ ಸೇರ್ಪಡೆಗೊಳ್ಳುವುದರೊಂದಿಗೆ ನದಿ ನೀರಿನ ಗುಣಮಟ್ಟ ಕ್ಷೀಣಿಸತೊಡಗುತ್ತಿದೆ. ಕಾರ್ಖಾನೆಗಳ ರಾಸಾಯನಿಕಗಳು ಅಲ್ಲಲ್ಲಿ ನದಿ ಒಡಲು ಸೇರುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ಅಕ್ರಮ ಮರಳು ಗಣಿಗಾರಿಕೆ ಮಾತ್ರ ಎಲ್ಲೆಡೆ ಅವ್ಯಾಹತವಾಗಿ ಕಂಡುಬರುತ್ತಿವೆ. ಮರಳಿನ ಅಭಾವ ಸೃಷ್ಟಿಸಿ ದಿನದ ೨೪ ಗಂಟೆ ಅಕ್ರಮವಾಗಿ ಮರಳೆತ್ತಿ ಸಾಗಾಟ ಮಾಡುವ ದಂಧೆ ಕಾವೇರಿ ನದಿಯುದ್ದಕ್ಕೂ ಕಾಣಬಹುದು. ಈ ಮೂಲಕ ನದಿಯ ಮಾಲಿನ್ಯಕ್ಕೆ ಇದು ಪ್ರಮುಖ ಕಾರಣ ಎಂದರೆ ತಪ್ಪಾಗಲಾರದು. ಅಕ್ರಮ ಮರಳು ಗಣಿಗಾರಿಕೆ ದಂಧೆಯನ್ನು ತಕ್ಷಣ ನಿಲ್ಲಿಸದಿದ್ದರೆ ಕಾವೇರಿ ಮುಂದೊAದು ದಿನ ಸಂಪೂರ್ಣ ಬರಡಾಗಿ ಇಡೀ ವ್ಯವಸ್ಥೆಗೆ ಕಂಟಕ ಉಂಟಾಗುವುದು ನಿಶ್ಚಿತ ಎನ್ನುವುದು ತಜ್ಞರ ಅಭಿಪ್ರಾಯ.

ಪ್ರವಾಸೋದ್ಯಮದ ಹೆಸರಿನಲ್ಲಿ ಕೂಡ ತಮ್ಮ ಬಯಕೆಗಳನ್ನು ಈಡೇರಿಸಿಕೊಳ್ಳುವ ಸಂಪನ್ಮೂಲ ಎನ್ನುವಷ್ಟಕ್ಕೆ ಹಲವೆಡೆ ಕಾವೇರಿ ನದಿಯನ್ನು ಸೀಮಿತವಾಗಿರಿಸಿಕೊಂಡು ಹಣ ಗಳಿಸುವ ದಂಧೆಗೆ ಮುಂದಾಗಿರುವುದು ನದಿ ತಟಗಳಲ್ಲಿ ಸಾಗಿದಂತೆ ಕಂಡುಬರುವ ಕಟು ವಾಸ್ತವಾಂಶವಾಗಿದೆ.

`ದಕ್ಷಿಣ ಭಾರತದ ರಾಜ್ಯಗಳ ಜೀವನಾಡಿಯಾಗಿರುವ ಕಾವೇರಿಗೆ ಈ ಮೂಲಕ ಕಂಟಕಗಳು ಎದುರಾಗುತ್ತಿದ್ದು ಇದೇ ರೀತಿ ಮುಂದುವರೆದಲ್ಲಿ ಇಡೀ ದಕ್ಷಿಣ ಭಾರತಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ’ ಎನ್ನುವುದು ಕಾವೇರಿ ನದಿ ಬಚಾವೋ ಪಾದಯಾತ್ರೆ ತಂಡದ ನೇತೃತ್ವ ವಹಿಸಿರುವ ತಮಿಳುನಾಡಿನ ಶ್ರೀ ರಮಾನಂದ ಸ್ವಾಮೀಜಿ ಅವರ ಅಭಿಪ್ರಾಯವಾಗಿದೆ. ಈ ನಿಟ್ಟಿನಲ್ಲಿ ಜೀವನದಿ ಕಾವೇರಿಯ ಉಗಮ ಸ್ಥಾನವಾದ ಕೊಡಗು ಜಿಲ್ಲೆಯನ್ನು ವನಪ್ರಾಂತವಾಗಿ ಉಳಿಸಿಕೊಳ್ಳುವುದರೊಂದಿಗೆ ಅದರ ಅಭಿವೃದ್ಧಿ ಹಾಗೂ ನದಿ ತಟಗಳ ಜನರ ಸಮಸ್ಯೆ ನಿವಾರಣೆ ಹಾಗೂ ಬೆಳವಣಿಗೆಗೆ ರಾಜ್ಯ ಹಾಗೂ ಕೇಂದ್ರ ಸರಕಾರದ ಮೂಲಕ ಸಾವಿರಾರು ಕೋಟಿಗಳ ಯೋಜನೆ ರೂಪುಗೊಳ್ಳಬೇಕಾಗಿದೆ. ಇದರೊಂದಿಗೆ ನದಿಯಿಂದ ಯಥೇಚ್ಚವಾಗಿ ಹರಿಯುವ ನೀರು ಸಮುದ್ರ ಸೇರಿ ಪೋಲಾಗುವುದನ್ನು ತಪ್ಪಿಸಲು ಕರ್ನಾಟಕ ಹಾಗೂ ತಮಿಳುನಾಡು ಭಾಗಗಳಲ್ಲಿ ಕಾವೇರಿ ನದಿಗೆ ಅವಶ್ಯವಿದ್ದಲ್ಲಿ ಚೆಕ್‌ಡ್ಯಾಂಗಳನ್ನು ನಿರ್ಮಿಸಿ ನೀರಿನ ಸಂಗ್ರಹ ಮಾಡಬೇಕಾಗಿದೆ ಎನ್ನುತ್ತಾರೆ.

ರಾಷ್ಟçದ ಪ್ರಮುಖ ನದಿಗಳನ್ನು ರಾಷ್ಟಿçÃಕರಣ ಮಾಡುವುದರೊಂದಿಗೆ ನದಿಗಳ ಸಂರಕ್ಷಣೆ ಸಾಧ್ಯ ಎನ್ನುವುದು ಶ್ರೀರಂಗಪಟ್ಟಣದ ಶಾಶ್ವತಿ ಧಾರ್ಮಿಕ ಕ್ರಿಯಾಕೇಂದ್ರದ ಮುಖ್ಯಸ್ಥರು ಹಾಗೂ ಕಾವೇರಿ ನದಿ ಸ್ವಚ್ಛತಾ ಆಂದೋಲನದ ಕರ್ನಾಟಕ-ತಮಿಳುನಾಡು ಪ್ರಾಂತ್ಯದ ಸಂಚಾಲಕರಾದ ವೇದಬ್ರಹ್ಮ ಡಾ.ಭಾನುಪ್ರಕಾಶ್ ಶರ್ಮ ಅವರ ಅಭಿಪ್ರಾಯವಾಗಿದೆ'.

ಭಾಗಮಂಡಲದಿAದ ಶಿರಂಗಾಲತನಕ ಇರುವ ೨೪ ಗ್ರಾಮಗಳ ಪೈಕಿ ೨೦೧೬ ರ ಅಂಕಿಅAಶಗಳ ಪ್ರಕಾರ ನೆಲ್ಲಿಹುದಿಕೇರಿಯಲ್ಲಿ ನದಿ ತಟದಲ್ಲಿ ಅಂದಾಜು ೧೦೦ ಮನೆಗಳು, ಕೊಟ್ಟಮುಡಿ ನದಿ ತಟದಲ್ಲಿ ೫೦೦ ಕ್ಕೂ ಅಧಿಕ ಅಕ್ರಮ ಮನೆಗಳು ಕಂಡುಬAದಿದೆ. ಹಾಲುಗುಂದ ಗ್ರಾಮದಲ್ಲಿ ೭೮, ಕನ್ನಂಗಾಲದಲ್ಲಿ ೨೬ ಮನೆ ಗಳು, ನೆಲ್ಲಿಹುದಿಕೇರಿ ಬಳಿ ೨೦೦ಕ್ಕೂ ಅಧಿಕ ಮನೆಗಳು ನದಿ ತಟದಲ್ಲಿದ್ದು ಇದರ ತ್ಯಾಜ್ಯಗಳು ನೇರವಾಗಿ ನದಿ ಸೇರುತ್ತಿದೆ. ಕಾಕೋಟುಪರಂಬು ಮತ್ತು ಬೇತ್ರಿ ವ್ಯಾಪ್ತಿಯಲ್ಲಿ ೬೮ ಕ್ಕೂ ಅಧಿಕ ಮನೆಗಳು ನದಿ ತಟದಲ್ಲಿ ನಿರ್ಮಾಣಗೊಂಡಿರುವುದು ನಿಜಕ್ಕೂ ಆತಂಕದ ವಿಷಯ ವಾಗಿದೆ. ಮಳೆಗಾಲದಲ್ಲಿ ಕಾವೇರಿ ನದಿ ತುಂಬಿ ಹರಿಯುವ ಸಂದರ್ಭ ಜಿಲ್ಲಾಡಳಿತ ಗಂಜಿ ಕೇಂದ್ರಗಳನ್ನು ತಾತ್ಕಾಲಿಕವಾಗಿ ಕಲ್ಪಿಸುತ್ತಿದೆ. ಮಳೆಗಾಲದಲ್ಲಿ ಈ ಜನರು ಗಂಜಿ ಕೇಂದ್ರಗಳಲ್ಲಿದ್ದು ಬಳಿಕ ಎಂದಿನAತೆ ನದಿ ತಟಗಳಿಗೆ ಮರಳಿ ಮತ್ತೆ ಅಲ್ಲಿಯೇ ವಾಸಿಸು ತ್ತಾರೆ. ಆದರೆ, ಈ ಎಲ್ಲ ಕುಟುಂಬ ಗಳಿಗೆ ಬೇರೆ ಸೂಕ್ತ ಪ್ರದೇಶದಲ್ಲಿ ಶಾಶ್ವತ ಸೂರು ನಿರ್ಮಿಸಿಕೊಡುವದು ಇಂದಿನ ಅತ್ಯಗತ್ಯ ಹಾಗೂ ಅನಿವಾರ್ಯ ಕ್ರಮವಾಗಬೇಕಿದೆ. ಇಂತಹ ಸಮರ್ಪಕ ಪರಿಹಾರ ಕಂಡುಹಿಡಿಯುವಲ್ಲಿ ಮಾತ್ರ ಜಿಲ್ಲಾಡಳಿತ ಎಡವಿದೆ ಎನ್ನಬಹುದು. ಈ ಬಗ್ಗೆ ಆದ್ಯ ಗಮನ ಹರಿಸಬೇಕಾಗಿದೆ. (ಮುಗೀಯಿತು)

-ಎಂ. ಎನ್. ಚಂದ್ರಮೋಹನ್