ಸೋಮವಾರಪೇಟೆ : ಪೋಷಕರು ನೀಡಿದ ಚಿಲ್ಲರೆ ಹಣವನ್ನು ಎರಡನೇ ತರಗತಿಯಿಂದಲೂ ಕೂಡಿಟ್ಟಿದ್ದ ಬಾಲಕನೋರ್ವ, ತನ್ನ ಹುಟ್ಟುಹಬ್ಬದಂದು ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿ ಗಮನ ಸೆಳೆದಿದ್ದಾನೆ.
ಸಮೀಪದ ಐಗೂರು ಗ್ರಾ.ಪಂ. ವ್ಯಾಪ್ತಿಯ ಕಾಜೂರು ಗ್ರಾಮ ನಿವಾಸಿ ಗೋಪಾಲಕೃಷ್ಣ ಹಾಗೂ ಚೈತ್ರ ದಂಪತಿ ಪುತ್ರ, ಕುಶಾಲನಗರದ ಯೂನಿಕ್ ಅಕಾಡೆಮಿಯ ನಾಲ್ಕನೇ ತರಗತಿ ಬಾಲಕ ಜಿ.ಪುನೀಶ್, ತಾನು ೨ನೇ ತರಗತಿಯಿಂದ ಕೂಡಿಟ್ಟಿದ್ದ ರೂ. ೧,೦೫೮ ಹಣವನ್ನು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ನೀಡಿದ್ದಾನೆ.
ಮನೆಯಲ್ಲಿ ಕುಟುಂಬಸ್ಥರೊAದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ಸಂದರ್ಭ ನಿಧಿ ಸಮರ್ಪಣಾ ಅಭಿಯಾನದ ಕಾರ್ಯಕರ್ತರು ಮನೆಗೆ ಆಗಮಿಸಿದ್ದನ್ನು ಗಮನಿಸಿದ ಪುನೀಶ್, ಸ್ವಇಚ್ಚೆಯಿಂದ ತಾನು ಕೂಡಿಟ್ಟಿದ್ದ ಹಣವನ್ನು ಕಾರ್ಯಕರ್ತರಿಗೆ ನೀಡುವ ಮೂಲಕ ಗಮನ ಸೆಳೆದಿದ್ದಾನೆ.