ವೀರಾಜಪೇಟೆ, ಜ. ೧೬: ವೀರಾಜಪೇಟೆ ಬಳಿಯ ಕೋಟೆಕೊಪ್ಪ ವಿವೈಸಿ ಫುಟ್ಬಾಲ್ ಕ್ಲಬ್ ವತಿಯಿಂದ ತಾ. ೨೨ ರಿಂದ ೨೪ ರವರೆಗೆ ದೇವಣಗೇರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ರಾಜ್ಯಮಟ್ಟದ ಹೊನಲು ಬೆಳಕಿನ ಫೈವ್‌ಸೈರ‍್ಸ್ ನಾಕೌಟ್ ಫುಟ್‌ಬಾಲ್ ಪಂದ್ಯಾಟವನ್ನು ಆಯೋಜಿಸಲಾಗಿದೆ ಎಂದು ಕ್ಲಬಿನ ಅಧ್ಯಕ್ಷ ಗೋಪಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವೈಸಿ ಫುಟ್ಬಾಲ್ ಕ್ಲಬ್ ವತಿಯಂದ ಪ್ರಥಮ ಬಾರಿಗೆ ರಾಜ್ಯಮಟ್ಟದ ಹೊನಲು ಬೆಳಕಿನ ಪಂದ್ಯಾಟವನ್ನು ನಡೆಸುತ್ತಿದ್ದು ಉತ್ತಮ ಸ್ಪಂದನ ದೊರೆತಿದೆ. ಈ ಫುಟ್‌ಬಾಲ್ ಪಂದ್ಯಾಟದಲ್ಲಿ ಜಿಲ್ಲಾ ಹಾಗೂ ರಾಜ್ಯಮಟ್ಟದ ೪೦ ತಂಡಗಳು ಭಾಗವಹಿಸುವ ನಿರೀಕ್ಷೆಯಲ್ಲಿದ್ದು, ಪಂದ್ಯಾಟ ಸಂಜೆ ೬ ಗಂಟೆಯಿAದ ಬೆÀಳಿಗ್ಗೆ ೭ ಗಂಟೆಯವರೆಗೆ ನಡೆಯಲಿದೆ. ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳಿದ್ದು ನಗದು ಹಾಗೂ ಆಕರ್ಷಕ ಟ್ರೋಫಿ ಹಾಗೂ ಪಂದ್ಯಾಟದಲ್ಲಿ ಸರಣಿ ಆಟಗಾರ, ಹೆಚ್ಚು ಗೋಲು ಗಳಿಸಿದ ಆಟಗಾರ, ಉತ್ತಮ ಗೋಲ್‌ಕೀಪರ್ ಪ್ರಶಸ್ತಿಯನ್ನು ನೀಡಲಾಗುವುದು. ಹೆಸರು ನೋಂದಾಯಿಸಿಕೊಳ್ಳಲು ತಾ. ೨೦ ಕೊನೆಯ ದಿನವಾಗಿದೆ. ಹೆಚ್ಚಿನ ವಿವರಗಳಿಗೆ ೯೪೮೩೬೮೮೯೩೮ ಹಾಗೂ ೯೯೦೧೨೭೫೧೭೪ ಮೊಬೈಲ್‌ನ್ನು ಸಂಪರ್ಕಿಬಹುದಾಗಿದೆ ಎಂದು ಹೇಳಿದರು. ಗೋಷ್ಠಿಯಲ್ಲಿ ಕಾರ್ಯದರ್ಶಿ ಶಿವರಾಜ್, ಸದಸ್ಯರಾದ ವಿಕಾಸ್, ರಂಜಿತ್, ನರು ಉಪಸ್ಥಿತರಿದ್ದರು.