ವೀರಾಜಪೇಟೆ, ಜ.೧೬: ಇಲ್ಲಿನ ದೇವಾಲಯಕ್ಕೆ ತೆರಳುವ ರಸ್ತೆಯು ದುರಸ್ತಿಗೊಂಡಿದ್ದು, ವೀರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಗ್ರಾಮಸ್ಥರ ಸಮ್ಮುಖದಲ್ಲಿ ಉದ್ಘಾಟಿಸಿದರು.

ಆರ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶ್ರೀ ಭಗವತಿ ಭದ್ರಕಾಳಿ ದೇವಾಲಯಕ್ಕೆ ತೆರಳುವ ರಸ್ತೆಯು ಶಾಸಕರ ೩ ಲಕ್ಷ ವಿಶೇಷ ಅನುದಾನದಲ್ಲಿ ಡಾಂಬರೀಕರಣಗೊAಡಿದೆ.

ಸತತ ಮೂರು ವರ್ಷಗಳಿಂದ ಜಲಪ್ರಳಯ ವಿಕೋಪಗಳಿಂದ ತತ್ತರಿಸಿದೆ. ದೇಶಕ್ಕೆ ಬಂದೊದಗಿರುವ ಮಾರಕ ಕೋವಿಡ್ ಸೋಂಕಿನಿAದ ಅನುದಾನಗಳ ಕೊರತೆ ಕಾಡುತ್ತಿದೆ. ಬಂದಿರುವ ಅನುದಾನಗಳಲ್ಲಿ ರಸ್ತೆ ಮತ್ತು ಅಭಿವೃದ್ಧಿಯೇತರ ಕಾರ್ಯಕ್ರಮಗಳಿಗೆ ಬಳಕೆಯಾಗಿದೆ ಎಂದು ಶಾಸಕರು ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಅಚ್ಚಪಂಡ ಮಹೇಶ್ ಗಣಪತಿ ಮಾತನಾಡಿ ಗ್ರಾಮಗಳ ರಸ್ತೆಗಳು ಮಳೆಯಿಂದಾಗಿ ದುಃಸ್ಥಿತಿಗೆ ತಲುಪಿದೆ. ಶಾಸಕರು ಗ್ರಾಮಗಳ ರಸ್ತೆ ದುರಸ್ತಿಗಾಗಿ ವಿಶೇಷ ಅನುದಾನಗಳನ್ನು ಕಲ್ಪಿಸಿ ಗ್ರಾಮಗಳ ಪ್ರಮುಖ ರಸ್ತೆಗಳು ಇಂದು ಸಂಚಾರಕ್ಕೆ ಯೋಗ್ಯವನ್ನಾಗಿಸಿದ್ದಾರೆ. ಗ್ರಾಮಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ ರಸ್ತೆ ಸೇರಿದಂತೆ ಅಭಿವೃದ್ದಿ ಕಾರ್ಯಕ್ರಮಕ್ಕೆ ಅನುದಾನಗಳನ್ನು ನೀಡಿದ್ದಾರೆ ಎಂದರು.

ಪ್ರಮುಖರಾದ ಮಲ್ಲಂಡ ಮಧು ದೇವಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯ ಶಶಿ ಸುಬ್ರಮಣಿ, ತಾಲೂಕು ಪಂಚಾಯಿತಿ ಸದಸ್ಯ ಬಿ.ಎಂ.ಗಣೇಶ್, ಪಟ್ರಪಂಡ ರಘು ನಾಣಯ್ಯ, ಆರ್ಜಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಣಿ, ಗ್ರಾಮ ಪಂಚಾಯಿತಿ ಸದಸ್ಯ ಕಬ್ಬಚೀರ ಬೋಪಣ್ಣ ಹಾಗೂ ಆರ್ಜಿ ಶ್ರೀ ಭಗವತಿ ಭದ್ರಕಾಳಿ ದೇಗುಲದ ಆಡಳಿತ ಮಂಡಳಿಯ ಸದಸ್ಯರು ಆರ್ಜಿ ಗ್ರಾಮದ ಪ್ರಮುಖರು ಗ್ರಾಮಸ್ಥರು ಹಾಜರಿದ್ದರು.