ಮಡಿಕೇರಿ, ಜ. ೧೬: ದೇಶದ ಭೂಪಟದಲ್ಲಿ ರಕ್ಷಣಾ ಪಡೆಯ ವಿಚಾರಕ್ಕೆ ಸಂಬAಧಿಸಿದAತೆ ವಿಶೇಷವಾಗಿ ಗುರುತಿಸಿಕೊಂಡಿರುವ ಕರ್ನಾಟಕದ ಪುಟ್ಟ ಜಿಲ್ಲೆಯಾದ ಕೊಡಗು ಇದೀಗ ದೇಶದಲ್ಲಿ ಮತ್ತೊಮ್ಮೆ ಗಮನ ಸೆಳೆಯಲಿದೆ. ಅಪ್ರತಿಮ ಸೇನಾನಿ ಪದ್ಮಭೂಷಣ ಖ್ಯಾತಿಯ ಜನರಲ್ ಕೆ.ಎಸ್. ತಿಮ್ಮಯ್ಯ ಅವರ ತವರಿನಲ್ಲಿ ಅವರು ಜನ್ಮತಳೆದ ನಿವಾಸ ವಾದ ಮಡಿಕೇರಿಯ ‘ಸನ್ನಿಸೈಡ್’ ಇದೀಗ ಜನರಲ್ ತಿಮ್ಮಯ್ಯ ಸ್ಮಾರಕ ಭವನವಾಗಿ ಆಕರ್ಷಣೀಯವಾಗಿ ರೂಪುಗೊಂಡಿದ್ದು, ಇದರ ಉದ್ಘಾಟನೆಗೆ ಕಾಲಕೂಡಿ ಬಂದಿದೆ.
ತಿಮ್ಮಯ್ಯ ಅವರ ಸೇನಾ ಬದುಕಿನ ಐತಿಹ್ಯ ಅವರ ಸಾಧನೆ ಗಳನ್ನು ಪರಿಚಯಿಸುವಂತಹ ಪ್ರಯತ್ನವಾಗಿ ೨೦೦೬ನೇ ಇಸವಿಯಲ್ಲಿ ಪ್ರಕಟಿಸಲಾಗಿದ್ದ ಈ ವಿಶೇಷ ಯೋಜನೆ ಕೈಗೂಡಲು ಸುಮಾರು ೧೫ ತಿಮ್ಮಯ್ಯ ಅವರ ಸೇನಾ ಬದುಕಿನ ಐತಿಹ್ಯ ಅವರ ಸಾಧನೆ ಗಳನ್ನು ಪರಿಚಯಿಸುವಂತಹ ಪ್ರಯತ್ನವಾಗಿ ೨೦೦೬ನೇ ಇಸವಿಯಲ್ಲಿ ಪ್ರಕಟಿಸಲಾಗಿದ್ದ ಈ ವಿಶೇಷ ಯೋಜನೆ ಕೈಗೂಡಲು ಸುಮಾರು ೧೫ (ಮೊದಲ ಪುಟದಿಂದ) ತಿಮ್ಮಯ್ಯ ಅವರ ರೋಚಕ ಬದುಕಿನ ಚಿತ್ರಣವನ್ನು ಪ್ರತಿಬಿಂಬಿಸುವ ಈ ‘ಮ್ಯೂಸಿಯಂ’ನ ಉದ್ಘಾಟನೆಗಾಗಿ ದೇಶದ ರಕ್ಷಣಾ ಪಡೆಗಳ ಮುಖ್ಯಸ್ಥರಾಗಿರುವ ರಾಷ್ಟçಪತಿಗಳಾದ ರಾಮನಾಥ್ ಕೋವಿಂದ್ ಅವರೇ ಖುದ್ದಾಗಿ ಆಗಮಿಸುತ್ತಿರುವುದು ವಿಶೇಷವಾಗಿದೆ.
ಈ ನಿಟ್ಟಿನಲ್ಲಿ ನಡೆದಿದ್ದ ಪ್ರಯತ್ನಗಳಿಗೆ ರಾಷ್ಟçಪತಿಗಳಿಂದ ಸ್ಪಂದನ ದೊರಕಿದ್ದು, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ದಿನಾಂಕದ ಬಗ್ಗೆ ರಾಷ್ಟçಪತಿಗಳ ಭವನದ ಪ್ರಕಟಣೆ ಖಚಿತಪಡಿಸಿದೆ.
ಫೆ. ೬ ರಂದು ಐತಿಹಾಸಿಕ ಕ್ಷಣ
ರಾಷ್ಟçಪತಿ ರಾಮನಾಥ್ ಕೋವಿಂದ್ ಅವರು ಇದೇ ಫೆಬ್ರವರಿ ೬ ರಂದು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಒಪ್ಪಿಗೆ ಸೂಚಿಸಿದ್ದು, ಇದಕ್ಕಾಗಿನ ಪ್ರಯತ್ನದಲ್ಲಿದ್ದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ-ಜನರಲ್ ತಿಮ್ಮಯ್ಯ ಫೋರಂನ ಪ್ರಮುಖರಿಗೆ ಈ ಅಧಿಕೃತ ವಿಚಾರವನ್ನು ರಾಷ್ಟçಪತಿಗಳ ಖಾಸಗಿ ಕಾರ್ಯದರ್ಶಿ ಪಿ. ಪ್ರವೀಣ್ ಸಿದ್ಧಾರ್ಥ್ ಅವರು ತಿಳಿಯಪಡಿಸಿದ್ದಾರೆ. ಫೆಬ್ರವರಿ ೬ ರಂದು ಅಪರಾಹ್ನ ೩.೧೫ ರಿಂದ ೪ ಗಂಟೆಯವರೆಗೆ ರಾಷ್ಟçಪತಿಗಳ ಕಾರ್ಯಕ್ರಮ ನಿಗದಿಯಾಗಿದೆ.
ಮುಕ್ತಾಯಕ್ಕೆ ಸುದೀರ್ಘ ಅವಧಿ
೨೦೦೬ರಲ್ಲೇ ಕರ್ನಾಟಕ ಸರಕಾರ ಆ ವರ್ಷದ ಬಜೆಟ್ನಲ್ಲಿ ‘ಸನ್ನಿಸೈಡ್’ ನಿವಾಸವನ್ನು ತಿಮ್ಮಯ್ಯ ಸ್ಮಾರಕ ಭವನವನ್ನಾಗಿ ಪರಿವರ್ತಿಸುವ ಯೋಜನೆಯನ್ನು ಪ್ರಕಟಿಸಿತ್ತು. ಆದರೆ ಆ ಸಂದರ್ಭ ಈ ಜಾಗ ಪ್ರಾದೇಶಿಕ ಸಾರಿಗೆ ಇಲಾಖೆಯ ಅಧೀನದಲ್ಲಿತ್ತು. ಈ ಇಲಾಖೆಯಿಂದ ಇದನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ವಾಪಾಸ್ಸು ಪಡೆಯುವುದೂ ಸೇರಿದಂತೆ ಅನುದಾನ ಬಿಡುಗಡೆಯಲ್ಲಿ ವಿಳಂಬ, ಆಡಳಿತಾತ್ಮಕ ವಿಚಾರ ನಂತರದಲ್ಲಿ ರಾಜಕೀಯ ಇಚ್ಚಾಶಕ್ತಿಯ ಕೊರತೆ ಮತ್ತಿತರ ಕಾರಣಗಳಿಂದಾಗಿ ಈ ಯೋಜನೆ ಕಾರ್ಯಗತವಾಗಲು ಹದಿನೈದು ವರ್ಷಗಳೇ ಹಿಡಿದಿವೆ.
ಈ ನಡುವೆ ಫೀ.ಮಾ. ಕಾರ್ಯಪ್ಪ-ಜನರಲ್ ತಿಮ್ಮಯ್ಯ ಫೋರಂನ ಪ್ರಮುಖರು ಸಾಕಷ್ಟು ಪ್ರಯತ್ನವನ್ನೂ ಈ ನಿಟ್ಟಿನಲ್ಲಿ ನಡೆಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೊಡಗು ಜಿಲ್ಲಾಡಳಿತ, ಜನಪ್ರತಿನಿಧಿಗಳ ಪ್ರಯತ್ನವೂ ಇದರಲ್ಲಿದ್ದು, ಇದೀಗ ತಿಮ್ಮಯ್ಯ ಅವರು ಜನಿಸಿದ ಮನೆ ಆಕರ್ಷಣೀಯ ತಾಣವಾಗಿ ರೂಪುಗೊಳ್ಳಲಿದೆ.
ವಿಶೇಷ ಆಕರ್ಷಣೆಗಳು :ಹಳೆಯ ಮನೆಯನ್ನೇ ವ್ಯವಸ್ಥಿತವಾಗಿ ಯಥಾಸ್ಥಿತಿಯಲ್ಲಿ ಕಾಪಾಡಿಕೊಳ್ಳಲಾಗಿದ್ದು, ತಿಮ್ಮಯ್ಯ ಅವರ ಹುಟ್ಟಿನಿಂದ ಅವರ ಬದುಕು-ಸಾಹಸ ಸಾಧನೆಗಳ ಯಶೋಗಾಥೆೆಯನ್ನು ಬಿಂಬಿಸುವ ಪ್ರಯತ್ನ ಇಲ್ಲಿ ನಡೆದಿದೆ. ಮನೆ ಒಳಭಾಗದ ವಿನ್ಯಾಸ ವಿವಿಧ ಬಗೆಯ ಆಯುಧಗಳು, ಭಾವಚಿತ್ರಗಳು ಗಮನ ಸೆಳೆಯಲಿದೆ. ಕೇಂದ್ರದ ಹೊರ ಆವಣರದಲ್ಲಿ ಯುದ್ಧ ಸ್ಮಾರಕ, ಯುದ್ಧ ವಿಮಾನ, ಟ್ಯಾಂಕರ್, ಬೃಹತ್ ಗಾತ್ರದ ಸೇನಾ ಬೂಟ್ಗಳು ನೋಡುಗರಲ್ಲಿ ಸೈನ್ಯದ-ತಿಮ್ಮಯ್ಯ ಅವರ ರಾಷ್ಟçಪತಿಗಳ ಭೇಟಿ ಹಿನ್ನೆಲೆಯಲ್ಲಿ ನಿನ್ನೆ ದಕ್ಷಿಣ ವಲಯ ಪೊಲೀಸ್ ಮಹಾನಿರ್ದೇಶಕರಾದ ಪ್ರವೀಣ್ ಮಧುಕರ್ ಪವಾರ್ ಅವರು ಜಿಲ್ಲೆಗೆ ಭೇಟಿ ನೀಡಿ ಜಿಲ್ಲಾ ಪೊಲೀಸ್ ಇಲಾಖೆಯೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಇತ್ತೀಚೆಗಷ್ಟೆ ದಕ್ಷಿಣ ವಲಯ ಐಜಿಪಿಯಾಗಿ ಅಧಿಕಾರ ವಹಿಸಿಕೊಂಡಿರುವ ಇವರು ನಿನ್ನೆ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಹಾಗೂ ಅಧಿಕಾರಿಗಳೊಂದಿಗೆ ಇಲಾಖೆಯ ಕಾರ್ಯವೈಖರಿ ಕುರಿತು ಚರ್ಚಿಸಿದ್ದು, ಬಳಿಕ ಜನರಲ್ ತಿಮ್ಮಯ್ಯ ಮ್ಯೂಸಿಯಂ ಸ್ಥಳ, ಹೆಲಿಪ್ಯಾಡ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಬದುಕನ್ನು ನೆನಪಿಸುತ್ತವೆ. ಆಡಿಯೋ-ವೀಡಿಯೋ ಮೂಲಕದ ಮಾಹಿತಿಗಳೂ ಇಲ್ಲಿ ಲಭ್ಯವಾಗಲಿವೆ. ಈ ಮೂಲಕ ರಾಜ್ಯದಲ್ಲೇ ಇದೊಂದು ಉತ್ತಮ ಕೇಂದ್ರವಾಗುವುದರಲ್ಲಿ ಸಂಶಯವಿಲ್ಲ.ಬದುಕನ್ನು ನೆನಪಿಸುತ್ತವೆ. ಆಡಿಯೋ-ವೀಡಿಯೋ ಮೂಲಕದ ಮಾಹಿತಿಗಳೂ ಇಲ್ಲಿ ಲಭ್ಯವಾಗಲಿವೆ. ಈ ಮೂಲಕ ರಾಜ್ಯದಲ್ಲೇ ಇದೊಂದು ಉತ್ತಮ ಕೇಂದ್ರವಾಗುವುದರಲ್ಲಿ ಸಂಶಯವಿಲ್ಲ.