ಮಡಿಕೇರಿ, ಜ ೧೫: ದೇಶದ ಪ್ರತಿಷ್ಠಿತ ಹಣಕಾಸು ಸಂಸ್ಥೆಗಳ ಲ್ಲೊಂದಾದ ಶ್ರೀರಾಮ್ ಟ್ರಾನ್ಸ್ ಪೋರ್ಟ್ ಫೈನಾನ್ಸ್ ಕಂಪೆನಿಯು ಸಾಮಾಜಿಕ ಕಾರ್ಯ ಕ್ರಮದ ಅಡಿಯಲ್ಲಿ ಪ್ರಸಕ್ತ ಸಾಲಿನ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ಸಂಸ್ಥೆಯ ಮಡಿಕೇರಿ ಶಾಖೆಯಲ್ಲಿ ನೆರವೇರಿತು. ಮುಖ್ಯ ಅತಿಥಿಗಳಾಗಿ ಸುರೇಶ್ ಶೆಣೈ, ವಸಂತ ಕೆ.ಸಿ. ಹಾಗೂ ವಸಂತ ಬಿ.ಎಸ್ ಅವರು ವದ್ಯಾರ್ಥಿ ವೇತನ ವಿತರಿಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹದ ಮಾತುಗಳನ್ನು ಹೇಳಿದರು.