ಸೋಮವಾರಪೇಟೆ, ಜ. ೧೫: ಅಕಾಲಿಕ ಮಳೆಯಿಂದಾಗಿ ಬೆಳೆಗಾರರ ಬದುಕು ದುಸ್ತರವಾಗಿದ್ದು, ಭಾರೀ ನಷ್ಟ ಅನುಭವಿಸುತ್ತಿದ್ದರೂ ಸಹ ಕಾಫಿ ಮಂಡಳಿ ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ಬೆಳೆಗಾರರಿಗೆ ಸಲಹೆ ಸೂಚನೆಗಳನ್ನು ನೀಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಕಾಫಿ ಬೆಳೆಗಾರರ ಸಂಘ, ತಕ್ಷಣ ಅಧಿಕಾರಿಗಳು ಗ್ರಾಮಗಳಿಗೆ ತೆರಳಿ ರೈತರ ಸಂಕಷ್ಟ ಆಲಿಸಬೇಕೆಂದು ಆಗ್ರಹಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಮೋಹನ್ ಬೋಪಣ್ಣ, ಕಳೆದ ಮೂರು ವರ್ಷಗಳಿಂದಲೂ ಜಿಲ್ಲೆಯಲ್ಲಿ ಬೆಳೆಗಾರರು ನಿರಂತರ ನಷ್ಟವನ್ನು ಅನುಭವಿಸಿಕೊಂಡು ಬರುತ್ತಿದ್ದಾರೆ. ಪರಿಹಾರಕ್ಕೆ ಅರ್ಜಿ ಸಲ್ಲಿಸಿದರೆ, ಅಧಿಕಾರಿಗಳು ಪೂರ್ವ ನಿಗದಿಯಂತೆ ಕೆಲವು ಹೋಬಳಿಗಳ ತೋಟಗಳಿಗೆ ಮಾತ್ರ ಭೇಟಿ ನೀಡಿ ಮಾಹಿತಿ ನೀಡುತ್ತಿದ್ದಾರೆ. ಇದರಿಂದಾಗಿ ನಷ್ಟಕ್ಕೊಳಗಾದ ರೈತರು ಪರಿಹಾರ ದಿಂದ ವಂಚಿತರಾಗಬೇಕಾಗಿದೆ ಎಂದು ದೂರಿದರು.

ಪ್ರಸಕ್ತ ಸಾಲಿನಲ್ಲಿ ಕೇವಲ ಶೇ. ೪೦ ರಷ್ಟು ಮಾತ್ರ ಕಾಫಿ ಕುಯ್ಲು ಮಾಡಿದ್ದು, ಉಳಿದ ಕಾಫಿ ಗಿಡದಲ್ಲಿಯೇ ಉಳಿದಿದೆ. ನಿರಂತರ ವಾಗಿ ಮಳೆ ಬೀಳುತ್ತಿರುವುದರಿಂದ ಈಗಾಗಲೇ ಅರೇಬಿಕಾ ಮತ್ತು ರೋಬಸ್ಟಾ ಕಾಫಿಯಲ್ಲಿ ಹೂ ಆಗುತ್ತಿದೆ. ಹಣ್ಣಾಗಿರುವ ಕಾಫಿ ಕೆಳೆಗೆ ಉದುರುತ್ತಿದ್ದು, ನಷ್ಟವಾಗಿದೆ ಎಂದು ಸಮಸ್ಯೆಯನ್ನು ವಿವರಿಸಿದರು.

ಈಗ ಕಾಫಿ ಹೂ ಆದರೂ ಅದನ್ನು ಮುಂದಿನ ಸಾಲಿನಲ್ಲಿ ಪಡೆಯಲು ಕಷ್ಟವಾಗಿದೆ. ಅಧಿಕಾರಿಗಳು ತಕ್ಷಣ ಕಾಫಿ ತೋಟಗಳಿಗೆ ಭೇಟಿ ನೀಡಿ ಬೆಳೆ ನಷ್ಟದ ಪರಿಣಾಮವನ್ನು ಸರ್ಕಾರಕ್ಕೆ ನೀಡುವ ಕೆಲಸ ಮಾಡ ನಷ್ಟಕ್ಕೊಳಗಾದ ರೈತರು ಪರಿಹಾರ ದಿಂದ ವಂಚಿತರಾಗಬೇಕಾಗಿದೆ ಎಂದು ದೂರಿದರು.

ಪ್ರಸಕ್ತ ಸಾಲಿನಲ್ಲಿ ಕೇವಲ ಶೇ. ೪೦ ರಷ್ಟು ಮಾತ್ರ ಕಾಫಿ ಕುಯ್ಲು ಮಾಡಿದ್ದು, ಉಳಿದ ಕಾಫಿ ಗಿಡದಲ್ಲಿಯೇ ಉಳಿದಿದೆ. ನಿರಂತರ ವಾಗಿ ಮಳೆ ಬೀಳುತ್ತಿರುವುದರಿಂದ ಈಗಾಗಲೇ ಅರೇಬಿಕಾ ಮತ್ತು ರೋಬಸ್ಟಾ ಕಾಫಿಯಲ್ಲಿ ಹೂ ಆಗುತ್ತಿದೆ. ಹಣ್ಣಾಗಿರುವ ಕಾಫಿ ಕೆಳೆಗೆ ಉದುರುತ್ತಿದ್ದು, ನಷ್ಟವಾಗಿದೆ ಎಂದು ಸಮಸ್ಯೆಯನ್ನು ವಿವರಿಸಿದರು.

ಈಗ ಕಾಫಿ ಹೂ ಆದರೂ ಅದನ್ನು ಮುಂದಿನ ಸಾಲಿನಲ್ಲಿ ಪಡೆಯಲು ಕಷ್ಟವಾಗಿದೆ. ಅಧಿಕಾರಿಗಳು ತಕ್ಷಣ ಕಾಫಿ ತೋಟಗಳಿಗೆ ಭೇಟಿ ನೀಡಿ ಬೆಳೆ ನಷ್ಟದ ಪರಿಣಾಮವನ್ನು ಸರ್ಕಾರಕ್ಕೆ ನೀಡುವ ಕೆಲಸ ಮಾಡ ಬೆಳೆ ನಷ್ಟದ ವರದಿ ತಯಾರಿಸಿ ಸರ್ಕಾರಕ್ಕೆ ನೀಡುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು. ಉಪಾಧ್ಯಕ್ಷ ಬಿ.ಎಂ. ಲವ ಮಾತನಾಡಿ, ೨೦೧೮ರಲ್ಲಿ ಬೆಳೆ ನಷ್ಟವಾದ ಸಂದರ್ಭ ಬೆಳೆಗಾರರು ಸರ್ಕಾರಕ್ಕೆ ಪರಿಹಾರಕ್ಕಾಗಿ ಮನವಿ ಸಲ್ಲಿಸಿದ್ದರು. ಅಲ್ಲದೆ, ಕಳೆದ ಸಾಲಿನಲ್ಲಿ ಬೆಳೆಗಾರರ ರೂ. ಒಂದು ಲಕ್ಷ ಸಾಲ ಮನ್ನಾ ಮಾಡಿತ್ತು.

ಆದರೆ, ಇದು ಹೆಚ್ಚಿನ ರೈತರಿಗೆ ಸಿಗಲಿಲ್ಲ. ಜಿಲ್ಲಾಧಿಕಾರಿಗಳಿಗೆ ನಷ್ಟಕ್ಕೊಳಗಾದ ರೈತರಿಗೆ ಪರಿಹಾರ ನೀಡುವಂತೆ ಮತ್ತೊಮ್ಮೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಸೋಮಶೇಖರ್, ಪೂವಮ್ಮ ಗುರಪ್ಪ, ಯಶ್ವಂತ್ ಉಪಸ್ಥಿತರಿದ್ದರು.