*ಸಿದ್ದಾಪುರ, ಜ. ೧೫: ಕಾಡು ಬಿಟ್ಟು ಗ್ರಾಮಕ್ಕೆ ಲಗ್ಗೆ ಇಟ್ಟ ಒಂಟಿಸಲಗದ ದಾಳಿಗೆ ಸಿಲುಕಿದ ರೈತರೊಬ್ಬರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಘಟನೆ ಸೋಮವಾರಪೇಟೆ ತಾಲೂಕಿನ ತ್ಯಾಗತ್ತೂರಿನಲ್ಲಿ ನಡೆದಿದೆ.
ಸ್ಥಳೀಯ ಕೃಷಿಕ ನಿಂಗಪ್ಪ ಮಣಿ (೫೭) ಎಂಬವರೇ ಕಾಡಾನೆ ದಾಳಿಗೆ ಸಿಲುಕಿದ ವ್ಯಕ್ತಿಯಾಗಿದ್ದು, ಗಾಯಗೊಂಡಿರುವ ಇವರಿಗೆ ಮಡಿಕೇರಿಯ ಅಶ್ವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಮುಂಡ್ರಮನೆ ಬಾಣೆ ವ್ಯಾಪ್ತಿಯಲ್ಲಿ ಅಳವಡಿಸಿರುವ ರೈಲ್ವೆ ಕಂಬಿಗಳ ತಡೆ ಬೇಲಿ ಸಮೀಪ ತಾ. ೧೪ ರ ಬೆಳಿಗ್ಗೆ ನಡೆದುಕೊಂಡು ಹೋಗುತ್ತಿದ್ದ ನಿಂಗಪ್ಪ ಮಣಿ ಅವರ ಮೇಲೆ ಒಂಟಿಸಲಗ ಏಕಾಏಕಿ ದಾಳಿ ಮಾಡಿದೆ. ಇದನ್ನು ಗಮನಿಸಿದ ಸ್ಥಳೀಯರಾದ ಹರೀಶ್ ಹಾಗೂ ಸುಧಾ ಅವರು ಜೋರಾಗಿ ಕಿರುಚಿಕೊಂಡಿದ್ದರಿAದ ಕಾಡಾನೆ ಅಲ್ಲಿಂದ ಕಾಲ್ಕಿತ್ತಿದೆ. ಅದೃಷ್ಟವಶಾತ್ ನಿಂಗಪ್ಪ ಮಣಿ ಅವರು ಪ್ರಾಣಾಪಾದಿಂದ ಪಾರಾದರಾದರೂ ಎಡಕೈಗೆ ಗಾಯವಾಗಿರುವುದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.