ಮಡಿಕೇರಿ, ಜ. ೧೫: ೨೦೧೯-೨೦ನೇ ಸಾಲಿನ ಕೇಂದ್ರ ಪುರಸ್ಕೃತ ರಾಷ್ಟಿçÃಯ ಜಾನುವಾರು ಮಿಷನ್ (ಎನ್‌ಎಲ್‌ಎಂ) ಯೋಜನೆಯಡಿ ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಗ್ರಾಮೀಣ ಹಿತ್ತಲ ಹಂದಿ ಅಭಿವೃದ್ಧಿ ಯೋಜನೆಯಡಿ ಹಂದಿ ಘಟಕ ಅನುಷ್ಠಾನಗೊಳಿಸಲು (೩ ಹೆಣ್ಣು + ೧ ಗಂಡು) ಮಡಿಕೇರಿ ತಾಲೂಕಿಗೆ ೬೫, ಸೋಮವಾರಪೇಟೆ ತಾಲೂಕಿಗೆ ೬೫, ವೀರಾಜಪೇಟೆ ತಾಲೂಕಿಗೆ ೭೦ ಗುರಿ ನಿಗದಿಪಡಿಸಲಾಗಿದ್ದು, ಘಟಕದ ವೆಚ್ಚ ರೂ. ೨೧ ಸಾವಿರ ಸಹಾಯಧನ ೧೮,೯೦೦ ಫಲಾನುಭವಿಯ ಪಾಲು ರೂ. ೨,೧೦೦ ಆಗಿದೆ. ಜಾನುವಾರುಗಳ ವಿಮಾ ಯೋಜನೆಗೆ ಸಂಬAಧಿಸಿದAತೆ ಸಾಮಾನ್ಯ ವರ್ಗದ ಫಲಾನುಭವಿಗಳ ಜಾನುವಾರುಗಳಿಗೆ ಒಂದು, ಮೂರು ವರ್ಷದ ಅವಧಿಗೆ ಮಾರುಕಟ್ಟೆ ಮೌಲ್ಯದ ಶೇ. ೨, ಶೇ. ೬ ಪ್ರೀಮಿಯಂ ದರದಲ್ಲಿ ಗರಿಷ್ಠ ರೂ. ೭೦ ಸಾವಿರ ಮೂಲ ಬೆಲೆಯವರೆಗೆ ಪ್ರೀಮಿಯಂ ಸಹಾಯಧನ ದರದಂತೆ ಜಾನುವಾರುಗಳಿಗೆ ವಿಮಾ ಸೌಲಭ್ಯ ಒದಗಿಸಲಾಗುವುದು. ಆಸಕ್ತ ಫಲಾನುಭವಿಗಳು ಈ ಯೋಜನೆಗಳ ಪ್ರಯೋಜನ ಪಡೆದುಕೊಳ್ಳುವಂತೆ ಕೋರಿದೆ.

ಹೆಚ್ಚಿನ ಮಾಹಿತಿಗೆ ಹತ್ತಿರದ ಪಶು ವೈದ್ಯಾಧಿಕಾರಿ ಅವರನ್ನು ಸಂಪರ್ಕಿಸಬಹುದು ಎಂದು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ. ಪಿ. ಸುರೇಶ್ ಭಟ್ ತಿಳಿಸಿದ್ದಾರೆ.