ವೀರಾಜಪೇಟೆ, ಜ. ೧೫: ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ನಯನ ಸಭಾಂಗಣದಲ್ಲಿ ಕನ್ನಡ ಸಂಘದ ವತಿಯಿಂದ ನಡೆಸಿದ ರಾಷ್ಟಿçÃಯ ಕನ್ನಡ ರತ್ನ ಪ್ರಶಸ್ತಿ ಕಾರ್ಯಕ್ರಮದಲ್ಲಿ ವೀರಾಜಪೇಟೆಯ ನಾಟ್ಯಮಯೂರಿ ನೃತ್ಯ ಶಾಲೆಯ ಸಂಸ್ಥಾಪಕರಾದ ವಿದುಷಿ ಪ್ರೇಮಾಂಜಲಿ ಆಚಾರ್ಯ ಕನ್ನಡ ರತ್ನ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ನಾಟ್ಯ ಮಯೂರಿ ನೃತ್ಯ ಶಾಲೆಯ ವಿದ್ಯಾರ್ಥಿಗಳಾದ ನೌಶಿದಾ ಎನ್. ಪುಣ್ಯ ಎಂ.ಜೆ., ಶೋಭಿತ, ಸಾನಿಧ್ಯ ಬಿ.ಬಿ. ತೇಜಸ್ವಿನಿ ಬಿ.ವಿ., ವಿಶ್ಮಿತ, ರೀಮಾ ಕೆ.ಎಸ್. ಶ್ರೀದೇವಿ ಎಂ. ಮಿಲನ್ಯ ಶೆಟ್ಟಿ, ಹಾಗೂ ಆದಿತ್ಯ ಎಂ. ಇವರುಗಳು ಕೂಡ ಕನ್ನಡ ರತ್ನ ಪ್ರಶಸ್ತಿಯನ್ನು ಪಡೆದುಕೊಂಡಿದ್ದು ನೃತ್ಯ ಶಾಲೆಗೆ ಕೀರ್ತಿ ತಂದಿದ್ದಾರೆ. ಬೆಂಗಳೂರು ಕಿಡ್ಸ್ ಚಾನೆಲ್ ವತಿಯಿಂದ ಪವರ್ ಅವಾರ್ಡ್ ಎಂಬ ಪ್ರಶಸ್ತಿ ಹಾಗೂ ಬೆಸ್ಟ್ ಕೊರಿಯೋಗ್ರಾಫರ್ ಎಂದು ವಿದುಷಿ ಪ್ರೇಮಾಂಜಲಿ ಆಚಾರ್ಯ ಅವರನ್ನು ಗೌರವಿಸಲಾಗಿದೆ.