*ಗೋಣಿಕೊಪ್ಪಲು, ಜ. ೧೫: ಸೇನಾ ದಿನಾಚರಣೆಯ ಅಂಗವಾಗಿ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಎನ್.ಸಿ.ಸಿ. ವಿದ್ಯಾರ್ಥಿಗÀಳು ಸೇನಾ ದಂಡನಾಯಕರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು.

೧೯೪೯ರಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರು ಭಾರತ ಸೇನೆಯ ಮೊದಲ ಕಮಾಂಡರ್ ಆಗಿ ಅಧಿಕಾರ ಸ್ವೀಕರಿಸಿದರು. ಈ ದಿನವನ್ನು ಸೇನಾ ದಿನವಾಗಿ ಸ್ಮರಿಸಲಾಗುತ್ತಿದೆ. ಭಾರತದ ರಕ್ಷಣೆಗೆ ಸೇನೆಯ ಬಹುದೊಡ್ಡ ಪಾತ್ರವಿದೆ. ಪ್ರತಿಯೊಬ್ಬರೂ ಸೇನೆಗೆ ಗೌರವ ಸಲ್ಲಿಸಿ ದೇಶದ ಋಣವನ್ನು ತೀರಿಸುವಂತಹ ಮಹಾ ಕಾರ್ಯಕ್ಕೆ ಮುಂದಾಗಬೇಕು ಎಂದು ಕಾಲೇಜಿನ ಪ್ರಾಂಶುಪಾಲ ಎಸ್.ಎಸ್. ಮಾದಯ್ಯ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಎನ್.ಸಿ.ಸಿ. ವಿಭಾಗದ ಲೆಫ್ಟಿನೆಂಟ್‌ಗಳಾದ ಅಕ್ರಮ್, ಲೇಪಾಕ್ಷಿ, ಹವಾಲ್ದಾರ್ ಅಮ್ರಿತ್ ತಾಪ, ಡಿ.ಬಿ. ಗುರುಂಗ್, ಕಿಶನ್ ತಾಪ, ಕಾಲೇಜಿನಿ ಉಪನ್ಯಾಸಕರುಗಳಾದ ಭಾರತಿ, ಕಾವೇರಪ್ಪ ಮತ್ತು ವೀರಾಜಪೇಟೆ, ಗೋಣಿಕೊಪ್ಪಲು ಕಾವೇರಿ ಕಾಲೇಜಿನ ೧೯ ಬೆಟಾಲಿಯನ್ ಎನ್.ಸಿ.ಸಿ. ಕೆಡೆಟ್‌ಗಳು ಗೌರವ ಸಮರ್ಪಿಸಿದರು.