ಮಡಿಕೇರಿ, ಜ.೧೫ : ಮಂಗಳಾದೇವಿನಗರದ ಶ್ರೀ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಶ್ರೀ ರಾಜರಾಜೇಶ್ವರಿ, ಮಹಾಗಣಪತಿ ಹಾಗೂ ನಾಗದೇವರುಗಳ ಪುನರ್‌ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಮಹೋತ್ಸವದ ಅಂಗವಾಗಿ ಇಂದು ಧಾರ್ಮಿಕ ಕಾರ್ಯ ಶ್ರದ್ಧಾಭಕ್ತಿಯಿಂದ ನೆರವೇರಿತು.

ಬ್ರಹ್ಮಶ್ರೀ ವೇದಮೂರ್ತಿ ಪೊಳಲಿ ಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ ಪುಣ್ಯಾಹ, ಗಣಪತಿ ಹವನದೊಂದಿಗೆ ಶ್ರೀ ದೇವರುಗಳ ಪ್ರತಿಷ್ಠೆ, ಜೀವಕಲಶಾಭಿಷೇಕ, ಪ್ರತಿಷ್ಠಾ ಪೂಜೆ ನೆರವೇರಿತು. ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ೫ ಗಂಟೆಯಿAದ ದಿಕ್ಪಾಲ ಹೋಮಗಳು, ದಿಕ್ಪಾಲ ಪ್ರತಿಷ್ಠೆ, ದುರ್ಗಾಪೂಜೆ ಮಹಾಬಲಿಪೀಠಾಧಿವಾಸ, ಕವಾಟ ಬಂಧನ ನಡೆಯಿತು.