ಮಡಿಕೇರಿ, ಜ. ೧೫: ಮಡಿಕೇರಿಯ ಶ್ರೀ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ದೇವಾಲಯದಲ್ಲಿ ಮಡಿಕೇರಿಯ ಅಭಿಮನ್ಯು ವಸತಿ ವತಿಯಿಂದ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸುವ ಮೂಲಕ ಅಯೋಧ್ಯೆಯಲ್ಲಿನ ಶ್ರೀ ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ನಿಧಿ ಸಮರ್ಪಣಾ ಅಭಿಯಾನಕ್ಕೆ ವಿಧ್ಯುಕ್ತ ಚಾಲನೆ ನೀಡಲಾಯಿತು.

ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ, ಪ್ರಮುಖರಾದ ಬಿ.ಕೆ. ಅರುಣ್ ಕುಮಾರ್,ಜೀವನ್ , ಅನಿತಾಪೂವಯ್ಯ, ಚಂದ್ರಶೇಖರ್, ಆರ್.ಬಿ.ರವಿ, ನವೀನ್ ಪೂಜಾರಿ, ಶಿವಕುಮಾರ್, ಭಾರತಿ ರಮೇಶ್ , ಪ್ರೇಮಾ, ಶ್ವೇತಾ, ಮೀನಾ ಕುಮಾರಿ, ರುಕ್ಮಿಣಿ, ಭವಾನಿ ಸೇರಿದಂತೆ ಇತರ ಮುಖಂಡರು ಪಾಲ್ಗೊಂಡಿದ್ದರು.

ಜಿಲ್ಲೆಯ ಎಲ್ಲಾ ತಾಲೂಕಿನ, ಎಲ್ಲಾ ಗ್ರಾ.ಪಂ ವ್ಯಾಪ್ತಿಯ ೨೯೪ ಗ್ರಾಮದಲ್ಲಿಯೂ ನಿಧಿ ಸಂಗ್ರಹ ಅಭಿಯಾನ ಆರಂಭಗೊAಡಿದ್ದು, ಕೊಡಗು ಜಿಲ್ಲೆಯಲ್ಲಿ ತಾ. ೨೫ ವರೆಗೆ ನಡೆಯಲಿದೆ. ಇದಕ್ಕಾಗಿ ಜಿಲ್ಲಾ ಸಮಿತಿ, ತಾಲೂಕು ಸಮಿತಿ, ಗ್ರಾ.ಪಂ ಮತ್ತು ಗ್ರಾಮ ಸಮಿತಿಗಳನ್ನು ಮಾಡಲಾಗಿದ್ದು, ಅಭಿಯಾನ ಆರಂಭಗೊAಡಿದೆ.

ಸAಘ ಪರಿವಾರದ ಎಲ್ಲಾ ಸಂಘಟನೆಗಳು ಅಭಿಯಾನದಲ್ಲಿ ಪಾಲ್ಗೊಳ್ಳಲಿವೆ. ಜಿಲ್ಲಾ ಸಂಯೋಜಕರಾಗಿ ವಿಹಿಂಪನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ನರಸಿಂಹ, ಸಹ ಸಂಯೋಜಕರಾಗಿ ಕುಟ್ಟಂಡ ಮಿರನ್ ಕಾವೇರಪ್ಪ, ನಾಪಂಡ ರವಿ ಕಾಳಪ್ಪ, ಬಿ.ಬಿ.ಮಹೇಶ್, ಚೇತನ್, ರೀನಾ ಪ್ರಕಾಶ್ ಇದ್ದಾರೆ.

ಅಭಿಯಾನವನ್ನು ಯಶಸ್ವಿಯಾಗಿ ನಡೆಸಲು ತಾಲೂಕು ಸಮಿತಿ, ಗ್ರಾ.ಪಂ ಸಮಿತಿ, ಗ್ರಾಮ ಸಮಿತಿಗಳು ಕಾರ್ಯ ನಿರ್ವಹಿಸಲಿದೆ.