ಗೋಣಿಕೊಪ್ಪ ವರದಿ, ಜ. ೧೫: ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಿದ್ದ ವೀರಾಜಪೇಟೆ ತಾಲೂಕು ಅಂಗನವಾಡಿ ನೌಕರರ ಸಂಘದ ಆಡಳಿತ ಮಂಡಳಿ ಸಭೆಯಲ್ಲಿ ತಾಲೂಕು ಪ್ರಭಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸೀತಾಲಕ್ಷಿö್ಮ ಅವರ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತವಾಯಿತು.
ಪೌಷ್ಟಿಕ ಆಹಾರ ವಿತರಣೆಯಲ್ಲಿ ಲೋಪ, ಗೌರವ ಧನ ವಿತರಣೆಯಲ್ಲಿ ವಿಳಂಭ ನೀತಿಯಿಂದ ನೌಕರರು ಅನುಭವಿಸುತ್ತಿರುವ ಸಂಕಷ್ಟದ ಬಗ್ಗೆ ನೌಕರರು ನೋವು ಹಂಚಿಕೊAಡರು.
ಶಿಶು ಅಭಿವೃದ್ಧಿ ಕಚೇರಿಗೆ ತೆರಳುವ ನೌಕರರನ್ನು ತುಚ್ಛವಾಗಿ ನಿಂದಿಸುತ್ತಿದ್ದಾರೆ ಎಂದು ನೌಕರರು ಆರೋಪಿಸಿದರು. ಇತ್ತೀಚೆಗೆ ಆಹಾರ ವಿತರಣೆ ಮತ್ತು ಗೌರವ ಧನ ವಿತರಣೆ ಸಂಬAಧ ತೆರಳಿದ್ದ ನೌಕರರನ್ನು ಕಚೇರಿಗೆ ಯಾಕೆ ಬಂದಿದ್ದೀರಿ ಎಂದು ಪ್ರಶ್ನಿಸಿದ್ದರು. ಹೊರ ನಡೆಯುವಂತೆ ಸೂಚಿಸಿ, ನಮ್ಮನ್ನು ನಿಂಧಿಸಿದ್ದಾರೆ ಎಂದು ನೌಕರರು ಆರೋಪಿಸಿದರು. ಇವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಲು ಹಿರಿಯ ಅಧಿಕಾರಿಗಳನ್ನು ಮನವಿ ಮಾಡಿಕೊಳ್ಳಲು ನಿರ್ಧರಿಸಲಾಯಿತು.
೧೨ ತಿಂಗಳು ವಿತರಿಸಬೇಕಾದ ಪೌಷ್ಟಿಕ ಆಹಾರವನ್ನು ವರ್ಷಕ್ಕೆ ೯ ತಿಂಗಳಿಗೆ ಮಾತ್ರ ವಿತರಿಸಲಾಗುತ್ತಿದೆ. ಇದರಿಂದ ಅಪೌಷ್ಟಿಕತೆ ಸಮಸ್ಯೆ ಹೆಚ್ಚಾಗುತ್ತಿದೆ. ಹಣ ಕೂಡ ಪೋಲಾಗುತ್ತಿದೆ. ನಿವೃತ್ತಿಯಾದ ನೌಕರರಿಗೆ ಇಡುಗಂಟು ನೀಡದೆ ಸತಾಯಿಸುತ್ತಿದ್ದಾರೆ. ಇದರಿಂದ ನಿವೃತ್ತಿ ನಂತರವೂ ನೌಕರರು ತೊಂದರೆ ಪಡೆಯುವಂತಾಗಿದೆ. ಪೋಷಣ್ ಅಭಿಯಾನದ ತರಬೇತಿಗೆ ಸರ್ಕಾರ ನಿಗದಿಪಡಿಸಿರುವ ೪ ಸಾವಿರ ಹಣ ಕೂಡ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ತರಬೇತಿಗೆ ಭಾಗವಹಿಸುವ ಸಂಪನ್ಮೂಲ ಇವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಲು ಹಿರಿಯ ಅಧಿಕಾರಿಗಳನ್ನು ಮನವಿ ಮಾಡಿಕೊಳ್ಳಲು ನಿರ್ಧರಿಸಲಾಯಿತು.
೧೨ ತಿಂಗಳು ವಿತರಿಸಬೇಕಾದ ಪೌಷ್ಟಿಕ ಆಹಾರವನ್ನು ವರ್ಷಕ್ಕೆ ೯ ತಿಂಗಳಿಗೆ ಮಾತ್ರ ವಿತರಿಸಲಾಗುತ್ತಿದೆ. ಇದರಿಂದ ಅಪೌಷ್ಟಿಕತೆ ಸಮಸ್ಯೆ ಹೆಚ್ಚಾಗುತ್ತಿದೆ. ಹಣ ಕೂಡ ಪೋಲಾಗುತ್ತಿದೆ. ನಿವೃತ್ತಿಯಾದ ನೌಕರರಿಗೆ ಇಡುಗಂಟು ನೀಡದೆ ಸತಾಯಿಸುತ್ತಿದ್ದಾರೆ. ಇದರಿಂದ ನಿವೃತ್ತಿ ನಂತರವೂ ನೌಕರರು ತೊಂದರೆ ಪಡೆಯುವಂತಾಗಿದೆ. ಪೋಷಣ್ ಅಭಿಯಾನದ ತರಬೇತಿಗೆ ಸರ್ಕಾರ ನಿಗದಿಪಡಿಸಿರುವ ೪ ಸಾವಿರ ಹಣ ಕೂಡ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ತರಬೇತಿಗೆ ಭಾಗವಹಿಸುವ ಸಂಪನ್ಮೂಲ ವ್ಯಕ್ತಿಯನ್ನು ಕಡೆಗಣಿಸಲಾಗುತ್ತಿದೆ. ಸರಿಯಾದ ಆಹಾರ ವ್ಯವಸ್ಥೆ ನೀಡದೆ, ನಿರ್ಲಕ್ಷö್ಯ ಭಾವನೆ ತೋರಿಸುತ್ತಿದ್ದಾರೆ ಎಂದು ಅರೋಪಿಸಲಾಯಿತು.
ಸದಸ್ಯರನ್ನು ಒಗ್ಗೂಡಿಸಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಲು ನಿರ್ಧರಿಸಲಾಯಿತು. ಬಾಳೆಲೆ, ಹುದಿಕೇರಿ, ಗೋಣಿಕೊಪ್ಪ, ತಿತಿಮತಿ, ಕುಟ್ಟಂದಿ, ಬಿರುನಾಣಿ, ಕಾನೂರು, ಶ್ರೀಮಂಗಲ, ಕುಟ್ಟ, ಪಾಲಿಬೆಟ್ಟ, ವೀರಾಜಪೇಟೆ, ಕಾಕೋಟುಪರಂಬು, ಅಮ್ಮತ್ತಿ ವರ್ತುಲಗಳ ನೌಕರರು ಭಾಗವಹಿಸಿದ್ದರು.
ತಾಲೂಕು ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ವಿ.ಎಸ್. ಸುಮಿತ್ರಾ, ಕಾರ್ಯದರ್ಶಿ ನಳಿನಾಕ್ಷಿ, ಖಜಾಂಚಿ ರಾಜೇಶ್ವರಿ, ಜಿಲ್ಲಾಧ್ಯಕ್ಷೆ ಚೇಂದೀರಿ ಕಾವೇರಮ್ಮ ಇತರರಿದ್ದರು.