ಚೆಟ್ಟಳ್ಳಿ ಜ.೧೫: ಚೆಟ್ಟಳ್ಳಿಯಲ್ಲಿ ಇಂದು ಒಂದು ಅಪೂರ್ವ ಸನ್ನಿವೇಶ. ಪಟ್ಟಣದ ಹೃದಯ ಭಾಗದಲ್ಲಿ ಪಶುಪತಿನಾಥ, ನಂದಿ, ಶ್ರೀಕೃಷ್ಣ ಹಾಗೂ ಪುಣ್ಯಕೋಟಿ ಮೂರ್ತಿಗಳ ಲೋಕಾರ್ಪಣೆಯೊಂದಿಗೆ ವಾಣಿಜ್ಯ ಸಂಕೀರ್ಣ ಹಾಗೂ ಅತಿಥಿ ಗೃಹಗಳ ಉದ್ಘಾಟನೆಗಳು ನೆರವೇರಿ ಮಹಿಳೆಯರೂ ಸೇರಿದಂತೆ ಚೆಟ್ಟಳ್ಳಿಯ ನೂರಾರು ಮಂದಿ ನಾಗರಿಕರು ಪಾಲ್ಗೊಂಡು ಸಂತಸ ಪಟ್ಟ ಸಂದರ್ಭ ಒದಗಿತು.
ಚೆಟ್ಟಳ್ಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದಿಂದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಮತ್ತು ನಿರ್ದೇಶಕರ ಶ್ರಮದ ಫಲವಾಗಿ ಈ ಧಾರ್ಮಿಕ ಹಾಗೂ ಸಾಮಾಜಿಕ ಅಬಿವೃದ್ಧಿ ಕಾರ್ಯಗಳು ಸುಸೂತ್ರವಾಗಿ ಜರುಗಿದವು. ಶಾಸಕ ಅಪ್ಪಚ್ಚು ರಂಜನ್ ಹಾಗೂ ಇನ್ನಿತರ ಗಣ್ಯರು ಉದ್ಘಾಟನೆ ನೆರವೇರಿಸಿದರು.
ಈ ಸಹಕಾರ ಸಂಘ ಒಂದು ಮಾದರಿಯಾಗಿದ್ದು ಪಶುಪತಿನಾಥ, ನಂದಿ, ಶ್ರೀಕೃಷ್ಣ, ಪುಣ್ಯಕೋಟಿ ಮೂರ್ತಿಗಳ ಲೋಕಾರ್ಪಣೆ ಇಂದು ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ಕೊಂದು ವೇದಿಕೆಯಾಗಿದೆ. ಈ ಸದ್ಭಾವನೆಗೆ ಎಲ್ಲರೂ ಕೈಜೋಡಿಸ ಬೇಕು. ಸಮಾಜದಲ್ಲಿ ಎಲೆಮರೆಯಂತೆ ಸೇವೆ ಸಲ್ಲಿಸುವವರು ಮಾಧ್ಯಮದ ಮೂಲಕ ತಿಳಿದಾಗ ಮಾತ್ರ ಸೇವೆ ತಿಳಿಯಲು ಸಾಧ್ಯ. ಚೆಟ್ಟಳ್ಳಿಯ ಸಹಕಾರ ಸಂಘದ ಅಭಿವೃದ್ಧಿಯಲ್ಲಿ ಸಂಘದ ಅಧ್ಯಕ್ಷರಾದ ಬಲ್ಲಾರಂಡ ಮಣಿ ಉತ್ತಪ್ಪ ಅವರ ಸೇವೆ ಅವಿಸ್ಮರಣೀಯವೆಂದು ಉದ್ಘಾಟಕರಲ್ಲಿ ಓರ್ವರಾದ ಶಕ್ತಿ ದಿನಪತ್ರಿಕೆಯ ಪ್ರಧಾನ ಸಂಪಾದಕ ಜಿ.ರಾಜೇಂದ್ರ ಅಭಿಪ್ರಾಯ ವ್ಯಕ್ತಪಡಿಸಿದರು. ಹಿರಿಯ ಸಹಕಾರಿ ಗಳಿಗೆ ಗೌರವಿಸಿ ಸನ್ಮಾನಿಸಿರುವುದು ಪುಣ್ಯಕಾರ್ಯವೆಂದು ಶ್ಲಾಘಿಸಿದರು. ಸ್ವಾಮಿ ವಿವೇಕಾನಂದರು ಹೇಳಿದ್ದರು: ‘‘ನನಗೆ ಮುಕ್ತಿ ಸಿಕ್ಕಿದರೆ ಸಾಲದು ನನ್ನ ಸುತ್ತಲಿನವರಿಗೂ ಮುಕ್ತಿ ಸಿಗಬೇಕಾದರೆ ಮತ್ತೊಮ್ಮೆ ಹುಟ್ಟಿಬರಬೇಕು” ಎಂಬ ಮಾತನ್ನು ಈ ಸಂದರ್ಭ ಜ್ಞಾಪಿಸಿದರು. ನಮ್ಮ ಉಳಿಯುವಿಕೆಯೊಂದಿಗೆ ನಮ್ಮಲ್ಲಿರುವ ಶಕ್ತಿಯನ್ನು ಇತರರಿಗೂ ಸದ್ವಿನಿಯೋಗಿಸಬೇಕೆಂದು ಸಲಹೆಯಿತ್ತರು. ಕೊರೊನಾದಂತಹ ಸಾಂಕ್ರಾಮಿಕ ಎಲ್ಲೆಡೆ ವ್ಯಾಪಿಸಿದರೂ ನಿಯಂತ್ರಣಾ ಕ್ರಮವನ್ನು ಪಾಲಿಸು ವುದರ ಜೊತೆಗೆ ಮಾನಸಿಕವಾಗಿ ಸದೃಢರಾಗಿದ್ದರೆ ಇದನ್ನೂ ಎದುರಿಸ ಬಹುದು .ಸಮಸ್ಯೆಯನ್ನು ಎದುರಿಸುವುದೇ ಜೀವನ. ಯುವಕರು ಅಧ್ಯಾತ್ಮಿಕ ಪ್ರವೃತ್ತಿಯ ಹಿನ್ನೆಲೆಯನ್ನು ಉಳಿಸಿಕೊಂಡು ಸಾಮಾಜಿಕ ವಾಗಿಯೂ ಭಾಗಿಯಾಗುವ ಮೂಲಕ ದೇಶವನ್ನು ಮುನ್ನಡೆಸಬೇಕೆಂದರು.
ಚೆಟ್ಟಳ್ಳಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಅವರು ಅಧ್ಯಕ್ಷತೆ ವಹಿಸಿ ಸ್ವಾಗತ ಹಾಗು ಪ್ರಾಸ್ತಾವಿಕವಾಗಿ ಸಂಘದ ಅಭಿವೃದ್ಧಿಯಲ್ಲಿ ಸಂಘದ ಅಧ್ಯಕ್ಷರಾದ ಬಲ್ಲಾರಂಡ ಮಣಿ ಉತ್ತಪ್ಪ ಅವರ ಸೇವೆ ಅವಿಸ್ಮರಣೀಯವೆಂದು ಉದ್ಘಾಟಕರಲ್ಲಿ ಓರ್ವರಾದ ಶಕ್ತಿ ದಿನಪತ್ರಿಕೆಯ ಪ್ರಧಾನ ಸಂಪಾದಕ ಜಿ.ರಾಜೇಂದ್ರ ಅಭಿಪ್ರಾಯ ವ್ಯಕ್ತಪಡಿಸಿದರು. ಹಿರಿಯ ಸಹಕಾರಿ ಗಳಿಗೆ ಗೌರವಿಸಿ ಸನ್ಮಾನಿಸಿರುವುದು ಪುಣ್ಯಕಾರ್ಯವೆಂದು ಶ್ಲಾಘಿಸಿದರು. ಸ್ವಾಮಿ ವಿವೇಕಾನಂದರು ಹೇಳಿದ್ದರು: ‘‘ನನಗೆ ಮುಕ್ತಿ ಸಿಕ್ಕಿದರೆ ಸಾಲದು ನನ್ನ ಸುತ್ತಲಿನವರಿಗೂ ಮುಕ್ತಿ ಸಿಗಬೇಕಾದರೆ ಮತ್ತೊಮ್ಮೆ ಹುಟ್ಟಿಬರಬೇಕು” ಎಂಬ ಮಾತನ್ನು ಈ ಸಂದರ್ಭ ಜ್ಞಾಪಿಸಿದರು. ನಮ್ಮ ಉಳಿಯುವಿಕೆಯೊಂದಿಗೆ ನಮ್ಮಲ್ಲಿರುವ ಶಕ್ತಿಯನ್ನು ಇತರರಿಗೂ ಸದ್ವಿನಿಯೋಗಿಸಬೇಕೆಂದು ಸಲಹೆಯಿತ್ತರು. ಕೊರೊನಾದಂತಹ ಸಾಂಕ್ರಾಮಿಕ ಎಲ್ಲೆಡೆ ವ್ಯಾಪಿಸಿದರೂ ನಿಯಂತ್ರಣಾ ಕ್ರಮವನ್ನು ಪಾಲಿಸು ವುದರ ಜೊತೆಗೆ ಮಾನಸಿಕವಾಗಿ ಸದೃಢರಾಗಿದ್ದರೆ ಇದನ್ನೂ ಎದುರಿಸ ಬಹುದು .ಸಮಸ್ಯೆಯನ್ನು ಎದುರಿಸುವುದೇ ಜೀವನ. ಯುವಕರು ಅಧ್ಯಾತ್ಮಿಕ ಪ್ರವೃತ್ತಿಯ ಹಿನ್ನೆಲೆಯನ್ನು ಉಳಿಸಿಕೊಂಡು ಸಾಮಾಜಿಕ ವಾಗಿಯೂ ಭಾಗಿಯಾಗುವ ಮೂಲಕ ದೇಶವನ್ನು ಮುನ್ನಡೆಸಬೇಕೆಂದರು.
ಚೆಟ್ಟಳ್ಳಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಅವರು ಅಧ್ಯಕ್ಷತೆ ವಹಿಸಿ ಸ್ವಾಗತ ಹಾಗು ಪ್ರಾಸ್ತಾವಿಕವಾಗಿ ಕೇಂದ್ರ ಬ್ಯಾಂಕಿನ ಮಾಜಿ ಅಧ್ಯಕ್ಷ ಹಾಲಿ ನಿರ್ದೇಶಕ ಬಿ.ಡಿ ಮಂಜುನಾಥ್ ಮಾತನಾಡಿ ಹಲವು ವರ್ಷಗಳ ಹಿಂದೆ ಸಣ್ಣಗಿನ ಅಂಚಿನ ಸೂರಿನಡಿಯಿದ್ದ ಚೆಟ್ಟಳ್ಳಿ ಸಹಹಾರ ಸಂಘವನ್ನು ಮುನ್ನಡೆಸಿ ರೂ. ೭೦ ಲಕ್ಷದ ಕಟ್ಟಡ ನಿರ್ಮಿಸಿ ಲೋಕಾರ್ಪಣೆಗೈದಿರುವುದು ಶ್ಲಾಘನೀಯವೆಂದರು. ಮಣಿ ಉತ್ತಪ್ಪ ಅವರ ಸೇವೆಯನ್ನು ರಾಜ್ಯಪ್ರಶಸ್ತಿಗೆ ಗುರುತಿಸುವಂತಾಗಬೇಕೆAದರು. ಜಿಲ್ಲಾ ಸಹಕಾರ ಯೂನಿಯನ್ನ್ನ ಅಧ್ಯಕ್ಷ ಮನು ಮುತ್ತಪ್ಪ ಮಾತನಾಡಿ ವಿಶ್ವ ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರ ಹೆಸರಿನಲ್ಲಿ ರೈತ ಸಹಕಾರ ಭವನವನ್ನು ಬಲ್ಲಾರಂಡ ಮಣಿ ಉತ್ತಪ್ಪ ತಂಡ ನಿರ್ಮಿಸಿರುವದು ಶ್ಲಾಘನೀಯವೆಂದರು.. ಚೆಟ್ಟಳ್ಳಿ ಸಹಕಾರ ಸಂಘದ ಕಟ್ಟಡದಲ್ಲಿ ದೇವರನ್ನು ಪ್ರತಿಷ್ಠಾಪಿಸಿ ಸಹಕಾರ ಸಂಘವನ್ನು ದೇವರ ನೆಲೆಯಂತೆ ಎಲ್ಲರೂ ಭಕ್ತಿಯಿಂದ ವ್ಯವಹರಿಸುವ ವ್ಯವಸ್ಥೆ ಮಾಡಲಾಗಿದೆಯೆಂದರು. ಚೆಟ್ಟಳ್ಳಿ ಪ್ರೌಢಶಾಲೆಯ ಅಧ್ಯಕ್ಷ ಪೇರಿಯನ ಜಯಾನಂದ ಮಾತನಾಡಿ ಹತ್ತನೇ ಮೈಲೆಂದು ಚೆಟ್ಟಳ್ಳಿಯನ್ನು ಕರೆಯುತ್ತಿದ್ದರೂ ಇದೀಗ÷ಮಣಿ ಉತ್ತಪ್ಪ ಅವರ ಶ್ರಮದ ಫಲವಾಗಿ ಚೆಟ್ಟಳ್ಳಿ ಸಹಕಾರ ಸಂಘದ ಅಭಿವೃದ್ಧಿಯಿಂದ ಚೆಟ್ಟಳ್ಳಿ ಹೆಸರು ಗಳಿಸಿದೆಯೆಂದರು.
ಸಭೆಯಲ್ಲಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಉಪಾಧ್ಯಕ್ಷ ಕೇಟೋಳಿರ ಎಸ್ ಹರೀಶ್ ಪೂವಯ್ಯ, ವಕೀಲ ಪಿ.ಕೃಷ್ಣಮೂರ್ತಿ, ಮಡಿಕೇರಿ ಗಣೇಶ್ ಮೆಡಿಕಲ್ಸ್ನ ಮಾಲೀಕ ಡಿ.ಐ, ಪುರುಷೋತ್ತಮ, ಕಾಫಿಬೆಳೆಗಾರರು ಹಾಗು ಉದ್ಯಮಿ ಚೇರಳ ತಮ್ಮಂಡ ಎ. ಮುದ್ದಮಯ್ಯ, ಕಾಫಿ ಬೆಳೆಗಾರರಾದ ಎಂ.ಎಸ್ ಮಹೇಂದ್ರ, ಸುಂಟಿಕೊಪ್ಪ ವಿಜಯ ಪ್ಲಾಂಟೇಷನ್ ಮಾಲೀಕ ಎಸ್.ಜಿ. ಶ್ರೀನಿವಾಸ್, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ನಿರ್ದೇಶಕಿ ಉಷಾತೇಜಸ್ವಿ, ಚೆಟ್ಟಳ್ಳಿ ಚೇರಳ ಗೌಡ ಸಂಘದ ಅಧ್ಯಕ್ಷ ಅಯ್ಯಂಡ್ರ ಎಸ್.ರಾಘವಯ್ಯ, ಚೆಟ್ಟಳ್ಳಿ ಕೊಡವ ಸಮಾಜದ ಅಧ್ಯಕ್ಷ ಮುಳ್ಳಂಡ ರತ್ತು ಚಂಗಪ್ಪ, ಮಾಜಿ ಅಧ್ಯಕ್ಷರುಗಳಾದ ಬಿದ್ದಂಡ ಎ ಅಚ್ಚಯ್ಯ, ಕೊಂಗೇಟಿರ ಎಂ ಅಪ್ಪಣ್ಣ ,ಮಾಜಿ ನಿರ್ದೇಶಕ ಸೋಮೆಯಂಡ ದಿಲೀಪ್ ಅಪ್ಪಚ್ಚು ಹಾಗೂ ಕಾಫಿಬೆಳೆಗಾರರಾದ ಕೊಂಗೇಟಿರ ಕುಸುಮ್ ಪೊನ್ನಪ್ಪ ಹಾಜರಿದ್ದರು.
ಹಿರಿಯ ಸಹಕಾರಿಗಳಿಗೆ, ದಾನಿಗಳಿಗೆ ಹಾಗು ಅತಿಥಿಗಳಿಗೆ ಸನ್ಮಾನ: ಸಭೆಯಲ್ಲಿ ಅತಿಥಿಗಳಿಗೆ, ೭೫ ವಯಸ್ಸಿನ ಮೇಲ್ಪಟ್ಟ ಹಿರಿಯ ಸಹಕಾರಿಗಳಿಗೆ, ಕಟ್ಟಡ ನಿರ್ಮಾಣಕ್ಕೆ ಧನ ಸಹಾಯ ನೀಡಿದ ಸಹಕಾರಿಗಳಿಗೆ, ಕಟ್ಟಡ ನಿರ್ಮಾಣ ಮಾಡಿದವರಿಗೆ, ಆಂತರಿಕ ಲೆಕ್ಕ ಪರಿಶೋಧಕರಿಗೆ, ಸಂಘದ ಅಧ್ಯಕ್ಷರು ಹಾಗೂ ನಿರ್ದೇಶಕರುಗಳಿಗೆ ಸನ್ಮಾನಿಸಲಾಯಿತು.
ಸ್ಥಳೀಯ ಬಿಜೆಪಿ ಸ್ಥಾಯಿ ಸಮಿತಿಯ ಪ್ರಮುಖ್ ಬಲ್ಲಾರಂಡ ಕಂಠಿ ಕಾರ್ಯಪ್ಪ , ಪದಾಧಿಕಾರಿಗಳು ಹಾಗೂ ಸದಸ್ಯರು ಬಲ್ಲಾರಂಡ ಮಣಿ ಉತ್ತಪ್ಪ ಅವರಿಗೆ ಸನ್ಮಾನಿಸಿದರು. ಕಾರ್ಯಕ್ರಮದ ಅಂಗವಾಗಿ ಸಂಘದ ನಿರ್ದೇಶಕಿ ಪುತ್ತರಿರ ಸೀತಮ್ಮ ಮೊಣ್ಣಪ್ಪ ಪ್ರಾರ್ಥಿಸಿ, ಕಣಜಾಲು ಪೂವಯ್ಯ ವಂದಿಸಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಂದಿನಿ ನಿರೂಪಿಸಿದರು.
“ಶ್ರಮಜೀವಿ” ಬಿಡುಗಡೆ
ಬಲ್ಲಾರಂಡ ಮಣಿ ಉತ್ತಪ್ಪ ಅವರ ೬೩ನೇ ಹುಟ್ಟುಹಬ್ಬದ ಅಂಗವಾಗಿ ನಿವೃತ್ತ್ತ ಸೇನಾನಿ ಚೆಟ್ಟಳ್ಳಿ ಸಹಕಾರ ಸಂಘದ ನಿರ್ದೇಶಕ ಕಣಜಾಲು ಪೂವಯ್ಯ ಬರೆದ ಸಾಧನೆಯ ಶ್ರಮಜೀವಿ ಎಂಬ ಕಿರು ಹೊತ್ತಿಗೆಯನ್ನು ಕಾರ್ಯಕ್ರಮದ ಅಂಗವಾಗಿ ಬಿಡುಗಡೆ ಗೊಳಿಸಲಾಯಿತು.
(ವರದಿ: ಪುತ್ತರಿರ ಕರುಣ್ ಕಾಳಯ್ಯ)