ರೈತರು-ಸರ್ಕಾರದ ನಡುವಿನ ೯ನೇ ಸುತ್ತಿನ ಮಾತುಕತೆ ಕೂಡ ವಿಫಲ

ನವದೆಹಲಿ, ಜ. ೧೫: ಕೃಷಿ ತಿದ್ದುಪಡಿ ಕಾಯ್ದೆಗಳ ರದ್ಧತಿ ಕೋರಿ ಪ್ರತಿಭಟನೆ ನಡೆಸುತ್ತಿರುವ ರೈತರು ಮತ್ತು ಸರ್ಕಾರದ ನಡುವಿನ ೯ನೇ ಸುತ್ತಿನ ಮಾತುಕತೆ ಕೂಡ ಯಾವುದೇ ಫಲಿತಾಂಶವಿಲ್ಲದೆ ಶುಕ್ರವಾರ ಅಂತ್ಯಗೊAಡಿದೆ. ಮುಂದಿನ ಸುತ್ತಿನ ಮಾತುಕತೆ ತಾ. ೧೯ ರಂದು ಮಧ್ಯಾಹ್ನ ೧೨ ಗಂಟೆಗೆ ನಿಗದಿಯಾಗಿದೆ. ಇಂದಿನ ಸಭೆಯಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ರೈಲ್ವೆ, ವಾಣಿಜ್ಯ ಮತ್ತು ಆಹಾರ ಸಚಿವ ಪಿಯೂಷ್ ಗೋಯಲ್ ಮತ್ತು ವಾಣಿಜ್ಯ ಸಚಿವ ಸೋಮ್ ಪ್ರಕಾಶ್ ಅವರು ಸುಮಾರು ೪೦ ರೈತ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಭಾಗವಹಿಸಿದ್ದರು. ರೈತರು ಕಾನೂನುಗಳನ್ನು ರದ್ದುಗೊಳಿಸುವ ತಮ್ಮ ಮೂಲ ಬೇಡಿಕೆಗೆ ಪಟ್ಟು ಹಿಡಿದಿದ್ದಾರೆ ಮತ್ತು ತಿದ್ದುಪಡಿಗಳನ್ನು ನೀಡುವ ಸರ್ಕಾರದ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ ಎನ್ನಲಾಗಿದೆ. ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ನರೇಂದ್ರ ಸಿಂಗ್ ತೋಮರ್, ರೈತ ಸಂಘಟನೆಗಳ ಮುಖಂಡರೊAದಿಗೆ ಇಂದು ನಡೆಸಿದ ಮಾತುಕತೆ ನಿರ್ಣಾಯಕವಲ್ಲ. ತಾ. ೧೯ ರಂದು ಮತ್ತೆ ಸಭೆ ಸೇರಿ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳುವ ವಿಶ್ವಾಸವಿದೆ ಎಂದರು.

ಧಾರವಾಡ ಬಳಿ ಅಪಘಾತ:ಮೃತ ೧೦ ಮಹಿಳೆಯರು ಶಾಲಾ ಗೆಳತಿಯರು

ಧಾರವಾಡ, ಜ. ೧೫: ಸಂಕ್ರಾAತಿ ಮಾರನೇ ದಿನವೇ ಧಾರವಾಡ ಬಳಿ ಭೀಕರ ಅಪಘಾತ ಸಂಭವಿಸಿದ್ದು, ದಾವಣಗೆರೆಯ ಕೆಲವು ವೈದ್ಯಕೀಯ ವೃತ್ತಿಪರರ ಕುಟುಂಬಗಳು ತೀವ್ರ ಆಘಾತಕ್ಕೊಳಗಾಗಿವೆ. ಇಂದು ಬೆಳಗ್ಗೆ ಟೆಂಪೋ ಟ್ರಾವೆಲರ್ ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಟೆಂಪೋದಲ್ಲಿ ೧೧ ಮಂದಿ ಮೃತಪಟ್ಟಿರುವ ಘಟನೆ ಧಾರವಾಡ ಹೊರವಲಯದ ಇಟ್ಟಿಗಟ್ಟಿ ಬಳಿ ನಡೆದಿದೆ. ಮೃತರೆಲ್ಲರೂ ದಾವಣಗೆರೆ ಮೂಲದವರಾಗಿದ್ದು, ಬಹುತೇಕರು ವೈದ್ಯಕೀಯ ವೃತ್ತಿಯಲ್ಲಿದ್ದರು ಮತ್ತು ಇವರೆಲ್ಲರೂ ಶಾಲಾ ಸ್ನೇಹಿತರಾಗಿದ್ದು, ದಾವಣಗೆರೆಯಿಂದ ಗೋವಾಕ್ಕೆ ಪ್ರವಾಸ ಹೊರಟ್ಟಿದ್ದರು. ಮೃತ ೧೦ ಮಹಿಳೆಯರ ಪೈಕಿ ನಾಲ್ವರು ವೈದ್ಯರಾಗಿದ್ದರೆ, ಇತರರು ವೈದ್ಯಕೀಯ ಕಾಲೇಜುಗಳು ಮತ್ತು ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿದ್ದರು. ಮೃತರು ಶಾಲಾ ಸ್ನೇಹಿತರಾಗಿದ್ದು, ಗೋವಾಕ್ಕೆ ಒಂದು ದಿನದ ಟ್ರಿಪ್ ಹೊರಟ್ಟಿದ್ದರು. ಟೆಂಪೋ ಟ್ರಾವೆಲರ್ ದಾವಣಗೆರೆಯಿಂದ ಪಣಜಿಗೆ ತೆರಳುತ್ತಿದ್ದು, ಲಾರಿ ಬೆಳಗಾವಿಯಿಂದ ಬರುತ್ತಿದ್ದಾಗ ಮುಖಾಮುಖಿ ಡಿಕ್ಕಿಯಾಗಿದೆ. ಪರಿಣಾಮ ಟೆಂಪೋ ಟ್ರಾವೆಲರ್‌ನಲ್ಲಿದ್ದ ೧೧ ಮಂದಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಎಸ್ಪಿ ಕೃಷ್ಣಕಾಂತ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬAಧಿಸಿ ದಂತೆ ಧಾರವಾಡ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೇನಾ ದಿನ ಪೆರೇಡ್‌ನಲ್ಲಿ ಡ್ರೋಣ್ ಕಾರ್ಯಾಚರಣೆ ಪ್ರದರ್ಶನ

ನವದೆಹಲಿ, ಜ. ೧೫: ಭಾರತೀಯ ಸೇನೆಯ ಡ್ರೋಣ್‌ಗಳು ಅಣಕು ಕಾಮಿಕೇಜ್ ದಾಳಿಗಳು ಹಾಗೂ ಪ್ರಥಮ ಚಿಕಿತ್ಸೆ ಪೂರೈಕೆ ಚಟುವಟಿಕೆಗಳನ್ನು ಮೊದಲ ಬಾರಿಗೆ ನೆರವೇರಿಸಿವೆ. ಸೇನಾ ದಿನದ ಅಂಗವಾಗಿ ನವದೆಹಲಿಯಲ್ಲಿ ನಡೆದ ಅಣಕು ಪ್ರದರ್ಶನದಲ್ಲಿ ಸೇನಾ ಡ್ರೋನ್‌ಗಳು ಈ ಚಟುವಟಿಕೆ ಗಳನ್ನು ಇದೇ ಮೊದಲ ಬಾರಿಗೆ ನಡೆಸಿವೆ. ಸೇನಾ ದಿನದ ಅಂಗವಾಗಿ ಇದೇ ಮೊದಲ ಬಾರಿಗೆ ಡ್ರೋಣ್‌ಗಳು ಭಾಗಿಯಾಗಿದೆ. ಆಂಟಿ ಏರ್‌ಕ್ರಾಫ್ಟ್ ವೆಪನ್ ಸಿಸ್ಟಮ್ ಶಿಲ್ಕಾ, ಬ್ರಹ್ಮೋಸ್ ಮಿಸೈಲ್ ಸಿಸ್ಟಂ, ಇನ್ಫಾಂಟ್ರಿ ಫೈಟಿಂಗ್ ವೆಹಿಕಲ್ ಬಿಎಂಪಿ-೨, ಟಿ-೭೧ ಬ್ರಿಡ್ಜ್ ಲೇಯಿಂಗ್ ಟ್ಯಾಂಕ್‌ಗಳು ಹಾಗೂ ಮಲ್ಟಿ-ರಾಕೆಟ್ ಲಾಂಚರ್ ಸಿಸ್ಟಮ್ ಪಿನಾಕ ತುಕಡಿಗಳನ್ನು ಹೊಂದಿತ್ತು. ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರು ಭಾರತೀಯ ಸೇನೆಯ ಮೊದಲ ಪ್ರಧಾನ ದಂಡನಾಯಕರಾಗಿ ಅಧಿಕಾರ ವಹಿಸಿಕೊಂಡ ಜ. ೧೫ನ್ನು ಸೇನಾ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಈ ಬಾರಿ ಸುಮಾರು ೭೫ ಡ್ರೋನ್‌ಗಳು ಸೇನಾ ದಿನದ ಅಂಗವಾಗಿ ನಡೆದ ಪೆರೇಡ್‌ನಲ್ಲಿ ಭಾಗವಹಿಸಿದ್ದವು.

ಕೋವಿಡ್-೧೯ ಲಸಿಕೆ ವಿಚಾರದಲ್ಲಿ ಮೋಸ ಮಾಡುವ ಜನರಿದ್ದಾರೆ ಎಚ್ಚರಿಕೆ

ಬೆಂಗಳೂರು, ಜ. ೧೫: ಕೋವಿಡ್-೧೯ ಲಸಿಕೆ ನೀಡುವ ನೆಪ ಹೇಳಿಕೊಂಡು ಬ್ಯಾಂಕ್ ಖಾತೆಯ ಮಾಹಿತಿಗಳನ್ನು ಕೇಳಿ ವಂಚನೆ ಮಾಡುವ ವಂಚಕರ ಬಗ್ಗೆ ಜನತೆ ಅದರಲ್ಲೂ ವಯೋವೃದ್ಧರು ಜಾಗ್ರತೆಯಿಂದ ಇರುವಂತೆ ಪೊಲೀಸ್ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಒತ್ತಾಯಿಸಿದ್ದಾರೆ. ತಮಗೆ ಲಸಿಕೆ ನೀಡಲಾಗುತ್ತಿದೆ, ಹೀಗಾಗಿ ವಿವರಣೆ ಬೇಕೆಂದು ಕೇಳಿ ಭಾರತೀಯ ಡ್ರಗ್ ಪ್ರಾಧಿಕಾರದಿಂದ ಸಂದೇಶಗಳು ಬರುತ್ತವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳುತ್ತಾರೆ. ಸಂದೇಶದಲ್ಲಿ ತಮ್ಮ ಆಧಾರ್ ಸಂಖ್ಯೆಯನ್ನು ಖಚಿತಪಡಿಸಿಕೊಳ್ಳಿ ಎಂದು ಹೇಳಿ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆಗೆ ಕೇಳುತ್ತಾರೆ. ಆಗ ಬ್ಯಾಂಕ್‌ನಿAದ ಒಟಿಪಿ ಬರುತ್ತದೆ. ಮೊಬೈಲ್ ಸಂಖ್ಯೆಗೆ ಬರುವ ಒಟಿಪಿಯನ್ನು ಕೇಳುತ್ತಾರೆ. ಇಲ್ಲಿಂದ ವಂಚನೆ ಆರಂಭವಾಗುತ್ತದೆ. ಒಟಿಪಿ ಮೂಲಕ ವಂಚಕರು ಬ್ಯಾಂಕ್ ಖಾತೆಯನ್ನು ಪಡೆದುಕೊಳ್ಳುತ್ತಾರೆ ಎಂದು ಅಧಿಕಾರಿ ವಿವರಿಸುತ್ತಾರೆ. ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಸಹ ಇಂತಹ ವಂಚಕರ ಬಗ್ಗೆ ಜಾಗರೂಕತೆಯಿಂದ ಇರುವಂತೆ ಜನತೆಗೆ ಎಚ್ಚರಿಕೆ ನೀಡಿದ್ದಾರೆ. ಗೂಗಲ್ ಪ್ಲೇ ಸ್ಟೋರ್ ಮತ್ತು ಇತರ ಪ್ಲಾಟ್ ಫಾರ್ಮ್ಗಳಲ್ಲಿ ಸರ್ಕಾರ ಒಡೆತನದ ಕೊವಿನ್ ಆಪ್ ಎಂದು ಹೇಳಿಕೊಂಡು ನಕಲಿ ಆಪ್‌ಗಳು ಹರಿದಾಡುತ್ತಿವೆ. ಅಂತಹ ಯಾವುದೇ ಆಪ್‌ಗಳಿರುವುದಿಲ್ಲ, ಸರ್ಕಾರದಿಂದ ಕೋವಿಡ್‌ಗೆ ಸಂಬAಧಪಟ್ಟAತೆ ಜನರಲ್ಲಿ ಬ್ಯಾಂಕ್ ಖಾತೆ ವಿವರ ಕೇಳುವುದಿಲ್ಲ. ಕೇಂದ್ರ ಸಚಿವಾಲಯ ಅಗತ್ಯವಿದ್ದಾಗ ಮಾಹಿತಿ ಪಡೆಯುತ್ತದೆ ಎಂದರು. ಜನರು ತಮ್ಮ ಮೊಬೈಲ್‌ಗೆ ಇಂತಹ ನಕಲಿ ಸಂದೇಶಗಳು ಬಂದರೆ ಅದನ್ನು ನಂಬಿ ಮೋಸ ಹೋಗಬಾರದು ಎಂದು ಹೇಳಿದರು.

ಮಂಗಳೂರು ವಿಮಾನ ನಿಲ್ದಾಣದಲ್ಲಿ ೨.೧೫ ಕೆ.ಜಿ. ಚಿನ್ನ ವಶ

ಮಂಗಳೂರು, ಜ. ೧೫: ಅಂತರರಾಷ್ಟಿçÃಯ ವಿಮಾನ ನಿಲ್ದಾಣದ ಎಂಐಎ ಕಸ್ಟಮ್ಸ್ ಅಧಿಕಾರಿಗಳು ಶುಕ್ರವಾರ ಇಬ್ಬರನ್ನು ಬಂಧಿಸಿ, ಅವರಿಂದ ಸುಮಾರು ರೂ. ೧.೦೯ ಕೋಟಿ ಮೌಲ್ಯದ ೨.೧೫ ಕೆ.ಜಿ. ಚಿನ್ನ ವಶಪಡಿಸಿಕೊಂಡಿದ್ದಾರೆ. ಪ್ರಯಾಣಿಕರ ಗುಪ್ತಚರ ಮತ್ತು ಪ್ರೊಫೈಲಿಂಗ್ ಆಧರಿಸಿ, ಕೇರಳದ ಕಾಸರಗೋಡು ಮೂಲದ ಫೈಜಲ್ ತೊಟ್ಟಿ ಮೆಲ್ಪಾರಂಬಾ (೩೭) ಮತ್ತು ಮೊಹಮ್ಮದ್ ಶುಹೈಬ್ ಮುಗು (೩೧) ಎಂದು ಗುರುತಿಸಲಾದ ಇಬ್ಬರು ವ್ಯಕ್ತಿಗಳನ್ನು ಕಸ್ಟಮ್ಸ್ ಅಧಿಕಾರಿಗಳು ಸೆರೆ ಹಿಡಿಯುವ ಮೂಲಕ ಕಳ್ಳತನವನ್ನು ತಡೆಹಿಡಿದಿದೆ. ಬಂಧಿತರಿಬ್ಬರ ಶೋಧ ನಡೆಸಿದಾಗ ತಮ್ಮ ಒಳ ಉಡುಪುಗಳಲ್ಲಿ ಚಿನ್ನವನ್ನು ಪೇಸ್ಟ್ ರೂಪದಲ್ಲಿ ಮರೆಮಾಚಿ ಇಟ್ಟುಕೊಂಡಿರುವುದು ಪತ್ತೆಯಾಗಿದ್ದು, ರೂ. ೧.೦೯ ಕೋಟಿ ಮೌಲ್ಯದ ೨೪ ಕೆ ಶುದ್ಧತೆಯ ಒಟ್ಟು ೨.೧೫ ಕೆ.ಜಿ.ಯಷ್ಟು ಚಿನ್ನ ವಶಪಡಿಸಿಕೊಳ್ಳಲಾಗಿದೆ.

೧೦ನೇ ತರಗತಿ ಮಕ್ಕಳ ಪಠ್ಯ ಕಡಿತ

ಬೆಂಗಳೂರು, ಜ. ೧೫: ಕೋವಿಡ್ ಕಾರಣದಿಂದ ತಿಂಗಳುಗಟ್ಟಲೇ ಶಾಲೆಯಿಂದ ದೂರ ಉಳಿದಿದ್ದ ಎಸ್‌ಎಸ್‌ಎಲ್‌ಸಿ ಮಕ್ಕಳ ಪರೀಕ್ಷಾ ಭಾರವನ್ನು ಶಿಕ್ಷಣ ಇಲಾಖೆ ಕಡಿಮೆ ಮಾಡಿದೆ. ಎಸ್‌ಎಸ್‌ಎಲ್‌ಸಿ ಮಕ್ಕಳ ಪಠ್ಯಕ್ರಮ ಕಡಿಮೆ ಮಾಡುವ ಬಗ್ಗೆ ಈ ವರೆಗೂ ಮೂಡಿದ್ದ ಗೊಂದಲಕ್ಕೆ ಶಿಕ್ಷಣ ಇಲಾಖೆ ತೆರೆ ಎಳೆದಿದೆ. ಸಾಮಾನ್ಯವಾಗಿ ಪ್ರತಿ ವರ್ಷ ಏಪ್ರಿಲ್‌ನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯುತ್ತಿತ್ತು. ಕೋವಿಡ್ ಕಾರಣದಿಂದ ಈ ಬಾರಿಯ ಪರೀಕ್ಷೆಯನ್ನು ಜೂನ್‌ನಲ್ಲಿ ಮಾಡುವುದಾಗಿ ಶಿಕ್ಷಣ ಇಲಾಖೆ ಈಗಾಗಲೇ ಪ್ರಕಟಿಸಿದೆ. ಇರುವ ಕಡಿಮೆ ಕಾಲಾವಕಾಶದಲ್ಲಿ ಮಕ್ಕಳ ಪಠ್ಯ ಕ್ರಮವನ್ನು ಸಹ ಕಡಿಮೆ ಮಾಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ೨೦೨೦-೨೧ನೇ ಸಾಲಿನ ರಾಜ್ಯ ಪಠ್ಯ ಕ್ರಮ ಶಾಲೆಗಳ ಹತ್ತನೇ ತರಗತಿ ವಿದ್ಯಾರ್ಥಿಗಳ ಬೋಧನೆ- ಕಲಿಕೆ ಹಾಗೂ ಮೌಲ್ಯ ಮಾಪನಕ್ಕೆ ವಿಷಯವಾರು ಕೆಲವು ಅಧ್ಯಾಯಗಳನ್ನು ಕಡಿತಗೊಳಿಸಲಾಗಿದೆ. ವಿಷಯವಾರು ಕಡಿತಗೊಂಡಿರುವ ಪಠ್ಯದ ವಿವರ ಎಲ್ಲಾ ಶಾಲೆಗಳಿಗೆ ತಿಳಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕರು (ಪ್ರೌಢ ಶಿಕ್ಷಣ) ಸುತ್ತೋಲೆ ಹೊರಡಿಸಿದ್ದಾರೆ.