ಕುಶಾಲನಗರ, ಜ. ೧೫: ಬಸವನಹಳ್ಳಿಯಲ್ಲಿರುವ ಸೋಮವಾರಪೇಟೆ ತಾಲೂಕು ಗಿರಿಜನ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘ ವತಿಯಿಂದ ನಿರ್ಮಾಣಗೊಂಡಿರುವ ಅಂಗಡಿ ಮಳಿಗೆಗಳ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಸಹಕಾರ ಇಲಾಖೆಯ ರೂ. ೨೧.೦೪ ಲಕ್ಷ ಅನುದಾನದಲ್ಲಿ ನಿರ್ಮಿಸಲಾದ ೪ ನೂತನ ಅಂಗಡಿ ಮಳಿಗೆಗಳ ಕಟ್ಟಡವನ್ನು ಲ್ಯಾಂಪ್ಸ್ ಸಹಕಾರ ಸಂಘದ ಅಧ್ಯಕ್ಷ ಆರ್.ಕೆ. ಚಂದ್ರ ಲೋಕಾರ್ಪಣೆಗೊಳಿಸಿದರು. ಅಂಗಡಿ ಮಳಿಗೆಗಳ ಬಳಕೆಗೆ ಸಂಘದ ಸದಸ್ಯರಿಗೆ ಪ್ರಥಮ ಆದ್ಯತೆ ನೀಡ ಲಾಗುವುದು ಎಂದು ತಿಳಿಸಿದ ಆರ್.ಕೆ. ಚಂದ್ರ, ಅಂಗಡಿ ಮಳಿಗೆಗಳ ಮೂಲಕ ಸಂಘದ ಉತ್ಪನ್ನಗಳ ಮಾರಾಟಕ್ಕೆ ಸಹಕಾರಿಯಾಗಲಿದೆ.

ಶಾಸಕ ಅಪ್ಪಚ್ಚು ರಂಜನ್ ಅವರು ಸಂಘದ ಅಭಿವೃದ್ಧಿಗೆ ಹೆಚ್ಚಿನ ಸಹಕಾರ ನೀಡುತ್ತಾ ಬಂದಿದ್ದು ಮುಂದಿನ ದಿನಗಳಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ರೂ. ೫೦ ಲಕ್ಷ ಅನುದಾನ ಒದಗಿಸುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭ ತಾ.ಪಂ. ಸದಸ್ಯೆ ಪುಷ್ಪಾ ಜನಾರ್ಧನ್, ಸಹಕಾರ ಸಂಘಗಳ ಸಹಾಯಕ ನಿಬಂಧಕ ಹೆಚ್.ಡಿ. ರವಿಕುಮಾರ್, ಯೋಜನಾ ಸಮನ್ವಯಾಧಿಕಾರಿ ಸಿ. ಶಿವಕುಮಾರ್, ಸಹಕಾರ ಅಭಿವೃದ್ಧಿ ಅಧಿಕಾರಿ ಎಂ.ಇ. ಮೋಹನ್, ಲ್ಯಾಂಪ್ಸ್ ಸಂಘದ ಉಪಾಧ್ಯಕ್ಷ ಬಿ.ಎನ್. ಮನು, ನಿರ್ದೇಶಕರುಗಳಾದ ಸಿ.ಕೆ. ಉದಯ ಕುಮಾರ್, ಬಿ.ಎಂ. ಯಶೋಧ, ಬಿ.ಆರ್. ಸುರೇಶ್, ಅಣ್ಣಯ್ಯ, ಕಾವೇರಿ, ಬಿ.ಬಿ. ಮಹೇಶ್, ಮಾಜಿ ನಿರ್ದೇಶಕ ಬಿ.ಕೆ. ಮೋಹನ್, ಗುಡ್ಡೆ ಹೊಸೂರು ಗ್ರಾ.ಪಂ. ಸದಸ್ಯರಾದ ಮಾದಪ್ಪ, ಸೌಮ್ಯ, ಸುಶೀಲ, ಪ್ರದೀಪ್, ನಂದಿನಿ, ಉಮಾ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಜಿ. ಹನಿಕುಮಾರ್, ಅರಣ್ಯ ರಕ್ಷಕ ದೇವಯ್ಯ, ಉಣ್ಣೆ ಮತ್ತು ಕುರಿ ಮಂಡಳಿ ತಾಲೂಕು ಅಧ್ಯಕ್ಷ ಪ್ರಭಾಕರ್, ಕಾರ್ಯದರ್ಶಿ ಜಗದೀಶ್ ಮತ್ತಿತರರು ಇದ್ದರು.