ಮಡಿಕೇರಿ, ಜ. ೧೩: ಜಿಲ್ಲೆಯಲ್ಲಿ ತಾ. ೧೩ ರಂದು ಹೊಸದಾಗಿ ೫ ಕೊರೊನಾ ಪ್ರಕರಣಗಳು ವರದಿ ಯಾಗಿವೆ. ಜಿಲ್ಲೆಯಲ್ಲಿ ಇದುವರೆಗೆ ೧,೩೨,೦೬೧ ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷಿಸಿದ್ದು, ೫,೮೯೪ ಮಂದಿಗೆ ಸೋಂಕು ತಗುಲಿದೆ. ಈ ಪೈಕಿ ೫,೭೪೮ ಮಂದಿ ಗುಣಮುಖರಾಗಿ ದ್ದಾರೆ. ಒಟ್ಟು ೮೧ ಮಂದಿ ಸಾವನ್ನಪ್ಪಿದ್ದು ೬೫ ಪ್ರಕರಣಗಳು ಸಕ್ರಿಯವಾಗಿವೆ. ಸೋಂಕಿತರ ಪೈಕಿ ೧೫ ಮಂದಿ ಕೋವಿಡ್ ಆಸ್ಪತ್ರೆಯಲ್ಲಿ, ೫೦ ಮಂದಿ ಹೋಮ್ ಐಸೋಲೇಷನ್‌ನಲ್ಲಿ ದಾಖಲಾಗಿದ್ದಾರೆ. ಜಿಲ್ಲೆಯಾದ್ಯಂತ ೫೦ ನಿಯಂತ್ರಿತ ವಲಯಗಳಿವೆ.