ಕುಶಾಲನಗರ, ಜ. ೧೩: ಕುಶಾಲನಗರ ದಂಡಿನಪೇಟೆಯಲ್ಲಿ ಅಂಗನವಾಡಿ ಕೇಂದ್ರಕ್ಕೆ ನೂತನ ಕಟ್ಟಡ ನಿರ್ಮಿಸುವಂತೆ ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ. ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೂಲಕ ಶಿಶು ಅಭಿವೃದ್ಧಿ ಯೋಜನೆಯಡಿಯಲ್ಲಿ ದಂಡಿನಪೇಟೆಯಲ್ಲಿ ಕಳೆದ ಎರಡು ದಶಕಗಳ ಹಿಂದೆ ನಿರ್ಮಾಣವಾಗಿರುವ ಅಂಗನವಾಡಿ ಕೇಂದ್ರ ಕಟ್ಟಡ ಶಿಥಿಲಗೊಂಡಿದ್ದು ಕೂಡಲೇ ನೂತನ ಕಟ್ಟಡ ನಿರ್ಮಾಣ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಕಳೆದ ಮೂರು ವರ್ಷಗಳ ಕಾಲ ಪ್ರವಾಹದ ಹಿನ್ನೆಲೆ ಕಟ್ಟಡ ಶಿಥಿಲಗೊಂಡಿದ್ದು, ಪರ್ಯಾಯವಾಗಿ ಸಮೀಪದ ಖಾಸಗಿ ಕಟ್ಟಡವೊಂದರಲ್ಲಿ ಅಂಗನವಾಡಿ ಚಟುವಟಿಕೆ ನಡೆಯುತ್ತಿದೆ. ೨೦ ರಿಂದ ೩೦ ಮಕ್ಕಳು ಅಂಗನವಾಡಿಗೆ ಬರುತ್ತಿದ್ದು ಇದರೊಂದಿಗೆ ಈ ಭಾಗದ ಬಾಣಂತಿಯರಿಗೆ ನೀಡಬೇಕಾದ ಅಗತ್ಯ ವಸ್ತುಗಳನ್ನು ಸಂರಕ್ಷಣೆ ಮಾಡಲು ಕೂಡ ತೊಂದರೆಯುAಟಾಗುತ್ತಿದೆ ಎಂದು ಸ್ಥಳೀಯರಾದ ಶಬ್ಬೀರ್ ಮಾಹಿತಿ ನೀಡಿದ್ದು ಕೂಡಲೇ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.