ವೀರಾಜಪೇಟೆ, ಜ. ೧೩: ಬೊಳ್ಳುಮಾಡು ಕಡೆಯಿಂದ ಪಿಕ್‌ಅಪ್ ಜೀಪಿನಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದುದನ್ನು ಪತ್ತೆಹಚ್ಚಿದ ಇಲ್ಲಿನ ಗ್ರಾಮಾಂತರ ಪೊಲೀಸರು ಜೀಪಿನ ಚಾಲಕ ಶಿಯಾಬುದ್ದೀನ್ ಹಾಗೂ ಜೀಪಿನಲ್ಲಿದ್ದ ಅಸ್ಲಾಂ ಎಂಬಿಬ್ಬರನ್ನು ಬಂಧಿಸಿ ಪ್ರಿನ್ಸಿಫಲ್ ಮುನ್ಸಿಫ್ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದಾರೆ.
ಈ ಸಂಬAಧ ಪೊಲೀಸರು (ಕೆ.ಎ.೧೯-೭೮೫೬) ಜೀಪನ್ನು ಮರಳು ಸಮೇತ ವಶಪಡಿಸಿಕೊಂಡಿದ್ದಾರೆ. ಪೊಲೀಸರು ಇಂದು ಬೆಳಗಿನ ಜಾವ ಇಲ್ಲಿಗೆ ಸಮೀಪದ ಕದನೂರು ಜಂಕ್ಷನ್‌ನಲ್ಲಿ ಕರ್ತವ್ಯದಲ್ಲಿದ್ದಾಗ ಈ ಅಕ್ರಮ ಮರಳು ಸಾಗಾಟ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.