ಸೋಮವಾರಪೇಟೆ, ಜ. ೧೨: ಸಮಾಜದ ಸುಧಾರಣೆಯಲ್ಲಿ ಮಾಧ್ಯಮಗಳ ಪಾತ್ರ ಹಿರಿದಾಗಿದ್ದು, ಅದನ್ನು ಇನ್ನಷ್ಟು ಜವಾಬ್ದಾರಿ ಯುತವಾಗಿ ನಿರ್ವಹಿಸಲು ಪತ್ರಕರ್ತರು ಶ್ರಮಿಸಬೇಕೆಂದು ಸೋಮ ವಾರಪೇಟೆ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಬಿ. ಸಂಜೀವ ತಿಳಿಸಿದರು.

ಸೋಮವಾರಪೇಟೆ ತಾಲೂಕು ಪತ್ರಕರ್ತರ ಸಂಘದಿAದ ಪಟ್ಟಣದ ಪತ್ರಿಕಾಭವನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪತ್ರಕರ್ತರು ಹಾಗೂ ಕುಟುಂಬ ಸದಸ್ಯರ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ, ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

ಸಮಾಜವನ್ನು ಸರಿ ದಾರಿಗೆ ಕೊಂಡೊಯ್ಯುತ್ತಾ, ಸಾಮಾಜಿಕವಾಗಿ ಸುಧಾರಣೆ ತರುವ ನಿಟ್ಟಿನಲ್ಲಿ ಜವಾಬ್ದಾರಿ ವಹಿಸಿಕೊಂಡಿರುವ ಮಾಧ್ಯಮಗಳು ಸಮಾಜದ ಕೈಗನ್ನಡಿಯಾಗಿವೆ. ವರದಿಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸುವ ಮನಸ್ಥಿತಿ ಸಮಾಜಕ್ಕೆ ಬೇಕಾಗಿದೆ. ತಪ್ಪನ್ನು ಮಾಧ್ಯಮಗಳು ಎತ್ತಿ ತೋರಿಸಿದ ಸಂದರ್ಭ ದ್ವೇಷ ಬೆಳೆಸಿಕೊಳ್ಳದೇ, ಆಗಿರುವ ಲೋಪವನ್ನು ಸರಿಪಡಿಸಿ ಸಮಾಜವನ್ನು ಸರಿ ದಾರಿಗೆ ಕೊಂಡೊಯ್ಯುತ್ತಾ, ಸಾಮಾಜಿಕವಾಗಿ ಸುಧಾರಣೆ ತರುವ ನಿಟ್ಟಿನಲ್ಲಿ ಜವಾಬ್ದಾರಿ ವಹಿಸಿಕೊಂಡಿರುವ ಮಾಧ್ಯಮಗಳು ಸಮಾಜದ ಕೈಗನ್ನಡಿಯಾಗಿವೆ. ವರದಿಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸುವ ಮನಸ್ಥಿತಿ ಸಮಾಜಕ್ಕೆ ಬೇಕಾಗಿದೆ. ತಪ್ಪನ್ನು ಮಾಧ್ಯಮಗಳು ಎತ್ತಿ ತೋರಿಸಿದ ಸಂದರ್ಭ ದ್ವೇಷ ಬೆಳೆಸಿಕೊಳ್ಳದೇ, ಆಗಿರುವ ಲೋಪವನ್ನು ಸರಿಪಡಿಸಿ ಮುರಳೀಧರ್, ನಗರ ಪತ್ರಕರ್ತರ ಸಂಘದ ಅಧ್ಯಕ್ಷ ಡಿ.ಪಿ. ಲೋಕೇಶ್ ಉಪಸ್ಥಿತರಿದ್ದರು. ಪತ್ರಕರ್ತ ದಿನೇಶ್ ಮಾಲಂಬಿ, ಕವನ್ ಕಾರ್ಯಪ್ಪ, ಬಿ.ಎ. ಭಾಸ್ಕರ್ ಅವರುಗಳು ಕಾರ್ಯಕ್ರಮ ನಿರ್ವಹಿಸಿದರು.

ವಿಜೇತರ ವಿವರ: ಪತ್ರಕರ್ತರ ಸಂಘದ ಸದಸ್ಯರಿಗೆ ಆಯೋಜಿಸ ಲಾಗಿದ್ದ ಕೇರಂ ಸಿಂಗಲ್ಸ್ ವಿಭಾಗದಲ್ಲಿ ಕುಶಾಲನಗರದ ಶಿವರಾಜ್ ಪ್ರಥಮ, ಶನಿವಾರಸಂತೆಯ ಹರೀಶ್‌ಕುಮಾರ್ ದ್ವಿತೀಯ, ಕೇರಂ ಡಬಲ್ಸ್ನಲ್ಲಿ ಶಿವರಾಜ್ ಮತ್ತು ಶಂಷುದ್ದೀನ್ ಪ್ರಥಮ, ಸೋಮವಾರಪೇಟೆಯ ಮುರುಳೀಧರ್ ಮತ್ತು ಡಿ.ಪಿ. ಲೋಕೇಶ್ ದ್ವಿತೀಯ, ಮೈಂಡ್ ಗೇಮ್‌ನಲ್ಲಿ ಕೊಡ್ಲಿಪೇಟೆಯ ಅಶ್ವಥ್‌ಕುಮಾರ್ ಪ್ರಥಮ, ವಿಶ್ವ ಕುಂಬೂರು ದ್ವಿತೀಯ, ಚೆಸ್ ಪಂದ್ಯದಲ್ಲಿ ಡಿ.ಪಿ. ಲೋಕೇಶ್ ಪ್ರಥಮ, ಅಶ್ವಥ್‌ಕುಮಾರ್ ದ್ವಿತೀಯ ಸ್ಥಾನ ಗಳಿಸಿದರು.ಪತ್ರಕರ್ತರ ಕುಟುಂಬ ಸದಸ್ಯರ ಮಕ್ಕಳಿಗೆ ಆಯೋಜಿಸಿದ್ದ ಕಾಳುಹೆಕ್ಕುವ ಸ್ಪರ್ಧೆಯಲ್ಲಿ ಭುವಿತ್ ಸುನಿಲ್ ಪ್ರಥಮ, ನಿಶಾನ್ ವಿಶ್ವ ದ್ವಿತೀಯ, ೧೫ ವರ್ಷ ಮೇಲ್ಪಟ್ಟ ಮಕ್ಕಳಿಗೆ ಬಿಸ್ಕೆಟ್ ತಿನ್ನುವ ಸ್ಪರ್ಧೆಯಲ್ಲಿ ಕೌಶಿಕ್ ಹರೀಶ್ ಪ್ರಥಮ ಹಾಗೂ ಕಿರಣ್ ಹರೀಶ್ ದ್ವಿತೀಯ, ಮಹಿಳೆ ಯರಿಗೆ ಆಯೋಜಿಸಿದ್ದ ಪಿರಮಿಡ್ ರಚನೆ ಸ್ಪರ್ಧೆಯಲ್ಲಿ ಸರಿತಾ ಮುರಳೀಧರ್ ಪ್ರಥಮ, ಶಾಲಿನಿ ವಿಶ್ವ ದ್ವಿತೀಯ, ಬೆಲೂನು ಒಡೆಯುವ ಸ್ಪರ್ಧೆಯಲ್ಲಿ ತಾನ್ಯ ಮುರುಳೀಧರ್ ಪ್ರಥಮ, ಶಾಲಿನಿ ವಿಶ್ವ ದ್ವಿತೀಯ ಸ್ಥಾನ ಗಳಿಸಿದರು.