ಮಡಿಕೇರಿ, ಜ. ೧೨: ಮೊದಲೇ ಹೊಂಡಾ ಗುಂಡಿಗಳ ರಸ್ತೆಗಳಿಂದ ತುಂಬಿರುವ ಕೇರಿ ಈ ಮಡಿಕೇರಿ.., ಅದರ ಜೊತೆಗೆ ಯಾವಾಗ ಒಳಚರಂಡಿ ಎಂಬ ಮಾಯೆ ಮಡಿಕೇರಿಗೆ ನುಗ್ಗಿತೋ ಅಲ್ಲಿಂದ ಇದ್ದ ರಸ್ತೆಗಳು ಕೂಡ ಲಗಾಡಿಯೆದ್ದವು.., ವಾಹನ ಸಂಚಾರ ಹೋಗಲೀ ನಡೆಯಲಾರದಷ್ಟು ಕೂಡ ರಸ್ತೆಗಳು ಹದಗೆಟ್ಟವು. ಒಳಚರಂಡಿಗೆ ಪೈಪ್ ಅಳವಡಿಸಲು ಗುಂಡಿ ತೆಗೆದ ಕಡೆಗಳೆಲ್ಲ ತೇಪೆ ಹಾಕಲಾಯಿತಾದರೂ ಯಾವದೂ ಉಳಿಯಲಿಲ್ಲ. ನಿಯಾಮಾನುಸಾರ ಹಾಳುಗೆಡಹಿದ ರಸ್ತೆಗಳನ್ನು ಒಳಚರಂಡಿ ಮಂಡಳಿಯೇ ಸರಿಪಡಿಸಿಕೊಡಬೇಕೆಂದಿದ್ದರೂ ಅದು ಆಗುತ್ತಿಲ್ಲ. ರಸ್ತೆ ತೀರಾ ಹಾಳಾದ ಮೇಲೆ ಜನತೆಯ ಆಕ್ರೋಶದಿಂದಾಗಿ ವಿಧಿಯಿಲ್ಲದೆ ನಗರಸಭೆಯಿಂದಲೇ ರಸ್ತೆ ದುರಸ್ತಿಪಡಿಸುವ ಪರಿಸ್ಥಿತಿ ಬಂದೊದಗಿದೆ..!ನಗರದ ಬಹುತೇಕ ರಸ್ತೆಗಳು ದುರಸ್ತಿ ಭಾಗ್ಯ ಕಂಡಿವೆಯಾದರೂ ಇನ್ನೂ ಅನೇಕ ರಸ್ತೆಗಳು ಹೊಂಡ ಗುಂಡಿಗಳಾಗಿಯೇ ಉಳಿದಿವೆ. ಇದೀಗ ಆಗಾಗ್ಗೆ ಜೋರಾಗಿ ಮಳೆ ಸುರಿಯುತ್ತಿದ್ದು, ಹೊಂಡಗಳಾಗಿರುವ ರಸ್ತೆಗಳ ಮೇಲೆ ನೀರು ಹರಿದು ಅಳಿದುಳಿದ ಡಾಂಬರು, ಜಲ್ಲಿಕಲ್ಲುಗಳು ಕೂಡಾ ಕೊಚ್ಚಿಹೋಗಿ ನಡೆದಾಡಲೂ ಕೂಡಾ ಕಷ್ಟಕರವಾದ ಪರಿಸ್ಥಿತಿ ಉಂಟಾಗಿದೆ. ದ್ವಿಚಕ್ರ ವಾಹನ ಸವಾರರು ಜಾರಿ ಬಿದ್ದು ಪೆಟ್ಟು ಮಾಡಿಕೊಳ್ಳುತ್ತಿರುವದು ಸಾಮಾನ್ಯವಾಗಿದೆ.

ಇಲ್ಲಿನ ಕಾನ್ವೆಂಟ್ ಶಾಲಾ ಬಳಿ ಪೈಪ್‌ಲೈನ್ ಅಳವಡಿಸಿ ಸರಿಯಾದ ರೀತಿಯಲ್ಲಿ ಮುಚ್ಚದ ಕಾರಣ ರಸ್ತೆ ಬದಿಯಲ್ಲಿ ಕೆಸರುಮಯವಾಗುತ್ತಿದ್ದು ಮಕ್ಕಳಿಗೆ ನಡೆದಾಡಲು ಕಷ್ಟವಾಗುತ್ತಿದೆ.ಅಲ್ಲದೆ, ರಸ್ತೆಗೆ ಹಾಕಿದ ಡಾಂಬರು ಕಿತ್ತುಬರುತ್ತಿದೆ. ಕಾನ್ವೆಂಟ್ ಬಳಿಯ ಮೈದಾನದ ಕೆಳಗಿನ ರಸ್ತೆಯಲ್ಲಿ ಒಳಚರಂಡಿಯ ‘ಮ್ಯಾನ್ ಹೋಲ್’ಗೆ ಹಾಕಿದ ಮುಚ್ಚಳ ಕಿತ್ತು ಬಂದಿದ್ದು, ಅಪಾಯವನ್ನು ಆಹ್ವಾನಿಸುತ್ತಿದೆ. ಅದನ್ನು ಸರಿಪಡಿಸುವ ಬದಲಿಗೆ ಸುತ್ತಲೂ ಕಡ್ಡಿಗಳನ್ನು ನೆಟ್ಟು ರಿಬ್ಬನ್ ಕಟ್ಟಲಾಗಿದೆ. ಅಲ್ಲಿಂದ ಕೆಳಗಡೆ ಕಾವೇರಿ ಬಡಾವಣೆಗೆ ಬಂದರAತೂ ಇರುವ ಪ್ರಾಣ ಉಳಿಯುವದೋ ಎಂಬ ಆತಂಕ ಮೂಡುವದಂತೂ ಖಂಡಿತಾ..! ರಸ್ತೆ ಮಧ್ಯದಲ್ಲೇ

ನಗರದ ಬಹುತೇಕ ರಸ್ತೆಗಳು ದುರಸ್ತಿ ಭಾಗ್ಯ ಕಂಡಿವೆಯಾದರೂ ಇನ್ನೂ ಅನೇಕ ರಸ್ತೆಗಳು ಹೊಂಡ ಗುಂಡಿಗಳಾಗಿಯೇ ಉಳಿದಿವೆ. ಇದೀಗ ಆಗಾಗ್ಗೆ ಜೋರಾಗಿ ಮಳೆ ಸುರಿಯುತ್ತಿದ್ದು, ಹೊಂಡಗಳಾಗಿರುವ ರಸ್ತೆಗಳ ಮೇಲೆ ನೀರು ಹರಿದು ಅಳಿದುಳಿದ ಡಾಂಬರು, ಜಲ್ಲಿಕಲ್ಲುಗಳು ಕೂಡಾ ಕೊಚ್ಚಿಹೋಗಿ ನಡೆದಾಡಲೂ ಕೂಡಾ ಕಷ್ಟಕರವಾದ ಪರಿಸ್ಥಿತಿ ಉಂಟಾಗಿದೆ. ದ್ವಿಚಕ್ರ ವಾಹನ ಸವಾರರು ಜಾರಿ ಬಿದ್ದು ಪೆಟ್ಟು ಮಾಡಿಕೊಳ್ಳುತ್ತಿರುವದು ಸಾಮಾನ್ಯವಾಗಿದೆ.

ಇಲ್ಲಿನ ಕಾನ್ವೆಂಟ್ ಶಾಲಾ ಬಳಿ ಪೈಪ್‌ಲೈನ್ ಅಳವಡಿಸಿ ಸರಿಯಾದ ರೀತಿಯಲ್ಲಿ ಮುಚ್ಚದ ಕಾರಣ ರಸ್ತೆ ಬದಿಯಲ್ಲಿ ಕೆಸರುಮಯವಾಗುತ್ತಿದ್ದು ಮಕ್ಕಳಿಗೆ ನಡೆದಾಡಲು ಕಷ್ಟವಾಗುತ್ತಿದೆ.ಅಲ್ಲದೆ, ರಸ್ತೆಗೆ ಹಾಕಿದ ಡಾಂಬರು ಕಿತ್ತುಬರುತ್ತಿದೆ. ಕಾನ್ವೆಂಟ್ ಬಳಿಯ ಮೈದಾನದ ಕೆಳಗಿನ ರಸ್ತೆಯಲ್ಲಿ ಒಳಚರಂಡಿಯ ‘ಮ್ಯಾನ್ ಹೋಲ್’ಗೆ ಹಾಕಿದ ಮುಚ್ಚಳ ಕಿತ್ತು ಬಂದಿದ್ದು, ಅಪಾಯವನ್ನು ಆಹ್ವಾನಿಸುತ್ತಿದೆ. ಅದನ್ನು ಸರಿಪಡಿಸುವ ಬದಲಿಗೆ ಸುತ್ತಲೂ ಕಡ್ಡಿಗಳನ್ನು ನೆಟ್ಟು ರಿಬ್ಬನ್ ಕಟ್ಟಲಾಗಿದೆ. ಅಲ್ಲಿಂದ ಕೆಳಗಡೆ ಕಾವೇರಿ ಬಡಾವಣೆಗೆ ಬಂದರAತೂ ಇರುವ ಪ್ರಾಣ ಉಳಿಯುವದೋ ಎಂಬ ಆತಂಕ ಮೂಡುವದಂತೂ ಖಂಡಿತಾ..! ರಸ್ತೆ ಮಧ್ಯದಲ್ಲೇ

ಹೋಗಿ ಈಗ ಮತ್ತೆ ಹೊಸ ರೂಪ ಪಡೆಯುತ್ತಿವೆ. ಇದೀಗ ಸರಿಪಡಿಸಲಾದ ರಸ್ತೆಗಳು ಮತ್ತೆ ಅಗೆತಕ್ಕೆ ಬಲಿಯಾಗುತ್ತಿವೆ. ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಮತ್ತೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲು ರಸ್ತೆಯನ್ನು ಅಗೆಯಲಾಗುತ್ತಿದೆ.

ಒಂದೆಡೆ ನಗರಸಭೆಯಿಂದ ರಸ್ತೆ, ತಡೆಗೋಡೆ ನಿರ್ಮಿಸಲಾಗುತ್ತಿದ್ದರೆ ಮತ್ತೊಂದೆಡೆ ಮಂಡಳಿ ವತಿಯಿಂದ ರಸ್ತೆಯನ್ನು ಅಗೆಯಲಾಗುತ್ತಿದೆ. ಸ್ಟೊನ್ ಹಿಲ್ ಬಳಿಯಿಂದ ರಸ್ತೆಯನ್ನು ಅಗೆದು ಪೈಪ್ ಅಳವಡಿಸಲಾಗುತ್ತಿದೆ. ರಾಜಾಸೀಟ್ ರಸ್ತೆಗಾಗಿ ಮುತ್ತಣ್ಣ ವೃತ್ತದವರೆಗೆ ಸುಮಾರು ಅರ್ಧ ಭಾಗದಷ್ಟು ರಸ್ತೆ ಅಗೆಯಲು ಗುರುತು ಮಾಡಲಾಗಿದೆ. ಗುರುತು ಮಾಡಿದ ಜಾಗವನ್ನು ಅಗೆದು ಪೈಪ್‌ಗಳನ್ನು ಅಳವಡಿಸಲಾಗುತ್ತಿದೆ.

ಅಭಿವೃದ್ಧಿ ಕಾರ್ಯ

ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಸುವ ಕಾರ್ಯ ನಡೆಯುತ್ತಿದ್ದು, ಅಭಿವೃದ್ಧಿ ಕಾರ್ಯಕ್ಕಾಗಿ ಅನುಮತಿ ನೀಡಲಾಗಿದೆ. ಅಗೆಯಲಾದ ರಸ್ತೆಯ ಭಾಗವನ್ನು ಸರಿಪಡಿಸಿಕೊಡುವಂತೆ ಒಳಚರಂಡಿ ಮಂಡಳಿಯವರಿಗೆ ಸೂಚಿಸಿದ್ದು, ಸರಿಪಡಿಸಿಕೊಡುವದಾಗಿ ಹೇಳಿದ್ದಾರೆ ಎಂದು ನಗರಸಭಾ ಆಯುಕ್ತ ರಾಮದಾಸ್ ತಿಳಿಸಿದ್ದಾರೆ. ಅಭಿವೃದ್ಧಿ ಕಾಂiÀiðಗಳಿಗೆ ಯಾರದೂ ಅಡ್ಡಿ ಆತಂಕಗಳಿರುವದಿಲ್ಲ, ಆದರೆ, ಅಭಿವೃದ್ಧಿ ಹೆಸರಿನಲ್ಲಿ ಜನತೆಗೆ ತೊಂದರೆಯಾಗಬಾರದು ಎಂಬದು ನಾಗರಿಕರ ಅಭಿಲಾಷೆಯಷ್ಟೆ.

-ಸಂತೋಷ್