*ಗೋಣಿಕೊಪ್ಪಲು, ಜ. ೧೨: ಜಿಲ್ಲಾ ಪಂಚಾಯಿತಿಯ ೨.೫ ಲಕ್ಷ ವೆಚ್ಚದ ಅನುದಾನದಲ್ಲಿ ನಿರ್ಮಾಣ ವಾಗುತ್ತಿರುವ ಅಡುಗೆ ಕೊಠಡಿಗೆ ಜಿಲ್ಲಾ ಪಂಚಾಯಿತಿ ಸದಸ್ಯೆ ಶ್ರೀಜಾ ಸಾಜಿ ಭೂಮಿಪೂಜೆ ನೆರವೇರಿಸಿದರು.

ಪೊನ್ನಂಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶ್ರೀ ಕನ್ನಂಬಾಡಿ ಅಮ್ಮ ದೇವಸ್ಥಾನದ ಸಮುದಾಯ ಭವನದ ಅಡುಗೆ ಕೊಠಡಿಗೆ ಪೂಜೆ ನೆರವೇರಿಸಲಾಯಿತು.

ಈ ಸಂದರ್ಭ ತಾ.ಪಂ. ಸದಸ್ಯೆ ಆಶಾ ಪೂಣಚ್ಚ, ಗ್ರಾ.ಪಂ. ಅಧ್ಯಕ್ಷೆ ಸುಮಿತಾ ಗಣೇಶ್, ಗ್ರಾ.ಪಂ. ಸದಸ್ಯರುಗಳಾದ ಆಲೀರ ರಶೀದ್, ಯಶೋಧÀ, ಪ್ರಮುಖರಾದ ಮತ್ರಂಡ ದಿಲ್ಲು, ಸಾಜಿ ಅಚ್ಚುತನ್, ಕೋಳೆರ ಭಾರತಿ ಮತ್ತು ಗುತ್ತಿಗೆದಾರ ಸ್ವಾಮಿ ಹಾಜರಿದ್ದರು.