ಕುಶಾಲನಗರ, ಜ. ೧೨: ಇಲ್ಲಿನ ದಂಡಿನಪೇಟೆಯಲ್ಲಿ ಕಾವೇರಿ ನದಿಗೆ ಸೋಪಾನಕಟ್ಟೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಅಂದಾಜು ರೂ. ೬ ಲಕ್ಷ ವೆಚ್ಚದಲ್ಲಿ ಪಟ್ಟಣ ಪಂಚಾಯಿತಿ ವತಿಯಿಂದ ನಡೆಯುತ್ತಿರುವ ಕಾಮಗಾರಿ ಸದ್ಯದಲ್ಲಿಯೇ ಪೂರ್ಣಗೊಳ್ಳಲಿದೆ ಎಂದು ಪ.ಪಂ. ಉಪಾಧ್ಯಕ್ಷೆ ಸುರಯ್ಯಭಾನು ತಿಳಿಸಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಈ ವ್ಯಾಪ್ತಿಯಲ್ಲಿ ಭಾರೀ ಪ್ರಮಾಣದ ತ್ಯಾಜ್ಯಗಳು ತುಂಬಿ ನದಿಗೆ ಸೇರುವ ಮೂಲಕ ಕಲುಷಿತಗೊಳ್ಳಲು ಕಾರಣವಾಗುತ್ತಿತ್ತು. ತ್ಯಾಜ್ಯಗಳನ್ನು ತೆರವುಗೊಳಿಸಿ ಈ ಭಾಗದ ನಿವಾಸಿಗಳಿಗೆ ನದಿಗೆ ತೆರಳಲು ಇದರಿಂದ ಸಹಕಾರಿಯಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಸಮೀಪದ ಸಿಂಗಾರಮ್ಮ ಬಡಾವಣೆ ಬಳಿ ನೂತನ ಸೋಪಾನಕಟ್ಟೆ ನಿರ್ಮಾಣಕ್ಕೆ ಪಂಚಾಯ್ತಿ ಚಿಂತನೆ ಹರಿಸಿದೆ ಎಂದು ಅವರು ತಿಳಿಸಿದ್ದಾರೆ.

ಬಡಾವಣೆ ವ್ಯಾಪ್ತಿಯಿಂದ ನೇರವಾಗಿ ನದಿಗೆ ಹರಿಯುವ ಕಲುಷಿತ ನೀರನ್ನು ಶುದ್ದೀಕರಣಗೊಳಿಸಿ ನಂತರ ನದಿಗೆ ಹರಿಸುವಂತಾಗಬೇಕೆAದು ಸ್ಥಳೀಯ ನಿವಾಸಿ ಶಬೀರ್ ಸ್ಥಳಕ್ಕೆ ತೆರಳಿದ ಸುದ್ದಿಗಾರರ ಮೂಲಕ ಪಪಂಗೆ ಮನವಿ ಮಾಡಿದ್ದಾರೆ. ಬಡಾವಣೆ ನಿವಾಸಿಗಳು ತಮ್ಮ ಮನೆಯ ತ್ಯಾಜ್ಯಗಳನ್ನು ನದಿ ತಟದಲ್ಲಿ ಸುರಿಯದೆ ಪ.ಪಂ. ಕಸ ಸರಬರಾಜು ವಾಹನಗಳು ಬರುವ ಸಂದರ್ಭ ವಿಲೇವಾರಿ ಮಾಡುವಂತೆ ಅವರು ಕೋರಿದ್ದಾರೆ.