ಸೊಮವಾರಪೇಟೆ, ಜ. ೧೨: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜನ್ಮದಿನಾಚರಣೆಯ ಪ್ರಯುಕ್ತ, ಇಂದಿರಾಗಾAಧಿ ಅಭಿಮಾನಿಗಳ ಸಂಘದ ವತಿಯಿಂದ ೩೪ನೇ ವರ್ಷದ ರಾಜ್ಯಮಟ್ಟದ ಬೆಳ್ಳಿ ಬಟ್ಟಲಿನ ಕಬಡ್ಡಿ ಪಂದ್ಯಾಟ ಇಲ್ಲಿನ ಸಾಕಮ್ಮನ ಬಂಗಲೆ ಎದುರಿನ ಮೈದಾನದಲ್ಲಿ ನಡೆಯಿತು.

ಪಂದ್ಯಾಟಕ್ಕೆ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ನಳಿನಿ ಗಣೇಶ್ ಚಾಲನೆ ನೀಡಿ

ಮಾತನಾಡಿ, ಕ್ರೀಡೆಗಳು ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗಿವೆ. ಎಲ್ಲರೂ ಕ್ರೀಡಾ ಮನೊಭಾವದಿಂದ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು ಎಂದರು.

ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಹೆಚ್.ಎ. ನಾಗರಾಜು ವಹಿಸಿದ್ದರು. ವೇದಿಕೆಯಲ್ಲಿ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಮಾಜೀ ಅಧ್ಯಕ್ಷ ಹಾಲೆಬೇಲೂರು ನಿರ್ವಾಣಿಶೆಟ್ಟಿ, ಪತ್ರಕರ್ತ ಎಸ್.ಆರ್ ವಸಂತ, ಸಂಘದ ಪದಾಧಿಕಾರಿಗಳಾದ ಎಚ್.ಬಿ. ರಾಜಪ್ಪ, ಅಜೇಯ, ಗಿರೀಶ್, ಪ್ರಸನ್ನ ಸೇರಿದಂತೆ ಇತರರು ಪಾಲ್ಗೊಂಡಿದ್ದರು. ೧೯ ವರ್ಷದೊಳಗಿನ ವಿದ್ಯಾರ್ಥಿಗಳು ಹಾಗೂ ಹಿರಿಯರ ವಿಭಾಗದಲ್ಲಿ ಪಂದ್ಯಾಟಗಳು ನಡೆದವು.