ಕುಶಾಲನಗರ, ಜ. ೧೨: ಕುಶಾಲನಗರ ಪಟ್ಟಣ ಯೋಜನಾ ಪ್ರಾಧಿಕಾರಕ್ಕೆ ನೂತನ ಸದಸ್ಯ ಕಾರ್ಯದರ್ಶಿಯಾಗಿ ಎ.ಎನ್. ಪ್ರವೀಣ್ ಅವರನ್ನು ನೇಮಕ ಮಾಡಲಾಗಿದೆ. ಮಂಗಳೂರಿನಲ್ಲಿ ನಗರ ಗ್ರಾಮಾಂತರ ಯೋಜನೆಯ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದ ಪ್ರವೀಣ್ ಜಿಲ್ಲೆಯ ಮೂರ್ನಾಡು ನಿವಾಸಿಯಾಗಿದ್ದು ಕುಶಾಲನಗರ ಟೌನ್ ಯೋಜನಾ ಪ್ರಾಧಿಕಾರದ ಅಧಿಕಾರಿಯಾಗಿ ತಾ. ೯ ರಂದು ಅಧಿಕಾರ ಸ್ವೀಕರಿಸಿದರು.

ಈ ಸಂದರ್ಭ ಶಕ್ತಿಯೊಂದಿಗೆ ಮಾತನಾಡಿ, ನೂತನ ಸದಸ್ಯ ಕಾರ್ಯದರ್ಶಿ ಪ್ರವೀಣ್, ಕುಶಾಲನಗರ ಯೋಜನಾ ಪ್ರಾಧಿಕಾರ ವ್ಯಾಪ್ತಿಯಲ್ಲಿ ನೂತನ ಬಡಾವಣೆಗಳ ನಿರ್ಮಾಣ ಸಂದರ್ಭ ಸಮರ್ಪಕ ದಾಖಲೆಗಳನ್ನು ನೀಡುವುದು ಕಡ್ಡಾಯವಾಗಿದ್ದು ಅನಧಿಕೃತ ಬಡಾವಣೆಗಳಿಂದ ನಾಗರಿಕರಿಗೆ ಅನಾನುಕೂಲ ಆಗುವ ಸಾಧ್ಯತೆಯಿದೆ. ಯಾವುದೇ ಸಂದರ್ಭ ಕುಶಾಲನಗರದ ಪ್ರಾಧಿಕಾರ ಕಚೇರಿಗೆ ಬಂದು ಮಾಹಿತಿ ಪಡೆಯಬಹುದು ಎಂದು ತಿಳಿಸಿದ್ದಾರೆ.