ಕಣಿವೆ, ಜ. ೧೨: ಹಾರಂಗಿ ಜಲಾಶಯದ ಆರಂಭದಿAದ ೧೧.೨ ಕಿ.ಮೀ.ವರೆಗಿನ ಮುಖ್ಯ ಕಾಲುವೆ ಹಾಗೂ ಸಂಬAಧಿಸಿದ ಉಪಕಾಲುವೆಗಳನ್ನು ಕೂಡಲೇ ಸರಿಪಡಿಸಿ ಸರಾಗವಾದ ನೀರಿನ ಹರಿವಿಗೆ ಮುಂದಾಗಬೇಕೆAದು ಅಲ್ಲಿನ ಅಚ್ಚುಕಟ್ಟು ವ್ಯಾಪ್ತಿಯ ರೈತರು ಗ್ರಾಮ ಪಂಚಾಯಿತಿ ಸದಸ್ಯ ಕಾರಳ್ಳಿ ರವಿ, ರತ್ನಮ್ಮ ಹಾಗೂ ರೈತ ಮುಖಂಡ ಐಮುಡಿಯಂಡ ಗಣೇಶ್ ನೇತೃತ್ವದಲ್ಲಿ ಹಾರಂಗಿಯ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಈ ಸಂದರ್ಭ ಮಾತನಾಡಿದ ರವಿ ಹಾಗೂ ಗಣೇಶ್, ಹಾರಂಗಿ ಜಲಾಶಯದ ನಿರ್ಮಾಣದ ಅವಧಿಯಿಂದ ಇಲ್ಲಿಯವರೆಗೂ ಇಲ್ಲಿನ ಕೃಷಿಕರ ಸಮಸ್ಯೆಗಳಿಗೆ ನೀರಾವರಿ ಇಲಾಖೆಯ ಅಧಿಕಾರಿಗಳು ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ. ಜಲಾಶಯದ ನಿರ್ಮಾಣದ ಬಳಿಕ ಅಚ್ಚುಕಟ್ಟು ಪ್ರದೇಶ ವಿಸ್ತೀರ್ಣವಾಗಿರುವುದರಿಂದ ಮುಖ್ಯ ನಾಲೆಯಲ್ಲಿ ಹೆಚ್ಚು ನೀರು ಹರಿಸುತ್ತಿರುವ ಇಲಾಖೆಯ ಅಧಿಕಾರಿಗಳು ಆ ಮುಖ್ಯ ಕಾಲುವೆಯನ್ನು ಸರಿಯಾಗಿ ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ.
ಮುಖ್ಯ ಕಾಲುವೆಯ ಆರಂಭದ ಐದು ಕಿ.ಮೀ. ವರೆಗೂ ಮರಗಳು ಬೆಳೆದು ಅವುಗಳ ಬೇರುಗಳು ನಾಲೆಗಳ ಒಳಗೆ ವಿಸ್ತರಿಸಿ ನಾಲೆಯ ಕಾಂಕ್ರಿಟ್ ಲೈನ್ ಕಿತ್ತು ಹೋಗಿ ಹಾನಿಯಾಗಿದೆ.
ಅಲ್ಲದೇ ರಸ್ತೆಯೂ ಸಂಚಾರಕ್ಕೆ ಸೂಕ್ತವಾಗಿಲ್ಲ. ಅಲ್ಲದೇ ಉಪ ಕಾಲುವೆಗಳು ಕೂಡ ಹಾಳಾಗಿವೆ. ಉಪಕಾಲುವೆಗಳ ರಸ್ತೆಗಳಂತೂ ಹೇಳ ತೀರದಾಗಿವೆ.
ಮುಖ್ಯ ಕಾಲುವೆಯಂಚಿನ ಕಾಳಿದೇವನ ಹೊಸೂರು, ಮಾವಿನಹಳ್ಳ, ಹುದುಗೂರು ಗ್ರಾಮಗಳ ಕೃಷಿಕರಾದ ನಾವುಗಳು ಇಲ್ಲಿನ ಕಾಲುವೆಗಳು ಹಾಗೂ ರಸ್ತೆಗಳ ದುರಸ್ತಿಗೆ ಕಳೆದ ಅನೇಕ ವರ್ಷಗಳಿಂದ ವ್ಯಕ್ತಪಡಿಸಿದರು.
ಮುಖ್ಯ ಕಾಲುವೆಯ ಆಸುಪಾಸಿನಲ್ಲಿ ಸಾಮಾಜಿಕ ಅರಣ್ಯದವರು ನೆಟ್ಟು ಬೆಳೆಸಿರುವ ವಿವಿಧ ಮರ-ಗಿಡಗಳಿಂದ ನಮಗೆ ಹೆಚ್ಚು ಅನಾನುಕೂಲವಾಗುತ್ತಿದೆ. ಈ ಬಗ್ಗೆ ಅರಣ್ಯ ಇಲಾಖೆಯ ಗಮನಕ್ಕೆ ತಂದು ಕಾಲುವೆಗಳ ಆಸುಪಾಸಿನ ಗಿಡ-ಮರಗಳನ್ನು ತೆರವುಗೊಳಿಸಲು ಒತ್ತಾಯಿಸಿದರೆ ಯಾವುದೇ ಪ್ರಯೋಜನವಾಗಿಲ್ಲ. ನೀರಾವರಿ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳಿಂದ ಇಲ್ಲಿನ ರೈತರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಗಣೇಶ್ ಆಪಾದಿಸಿದರಲ್ಲದೇ ಈ ಬಗ್ಗೆ ಒಂದು ವಾರದಲ್ಲಿ ಗಿಡ-ಮರಗಳನ್ನು ತೆರವು ಗೊಳಿಸದಿದ್ದಲ್ಲಿ ನೀರಾವರಿ ಕಚೇರಿ ಮುಂದೆ ಧರಣಿ ನಡೆಸುವ ಎಚ್ಚರಿಕೆ ನೀಡಿದರು.
ರೈತರ ಸಮಸ್ಯೆಗಳನ್ನು ಆಲಿಸಿದ ಎಇಇ ಮಹೇಂದ್ರಕುಮಾರ್ ಮಾತನಾಡಿ, ಹಾರಂಗಿಯ ಆರಂಭದ ೧೫ ಕಿ.ಮೀ.ವರೆಗಿನ ಮುಖ್ಯ ಕಾಲುವೆಯನ್ನು ಮುಂದಿನ ಹಂಗಾಮಿನೊಳಗೆ ಅಭಿವೃದ್ಧಿಪಡಿಸಲು ಕ್ರಿಯಾ ಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಕೂಡಲೇ ಈ ಬಗ್ಗೆ ಆಡಳಿತಾತ್ಮಕ ಅನುಮೋದನೆ ಸಿಗಲಿದೆ. ಹಾಗೆಯೇ ಮುಖ್ಯ ಕಾಲುವೆಯ ಅಂಚಿನಲ್ಲಿ ಬೆಳೆದಿರುವ ಅಪಾಯಕಾರಿ ಮರ-ಗಿಡಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆಗೆ ಪತ್ರ ವ್ಯವಹಾರ ನಡೆಸಲಾಗಿದೆ. ಈ ಸಮಸ್ಯೆಯನ್ನು ಕೂಡಲೇ ಬಗೆಹರಿಸಲಾಗುವುದು.
ಉಪಕಾಲುವೆಗಳು ಹಾಗೂ ರಸ್ತೆಗಳ ದುರಸ್ತಿ ಕಾರ್ಯ ಈಗಾಗಲೇ ಪ್ರಗತಿಯಲ್ಲಿದೆ. ಕಾಲುವೆಗಳಲ್ಲಿ ನೀರು ಹರಿಯುತ್ತಿದ್ದ ಕಾರಣ ಬೆಳೆಯೂ ಇದ್ದ ಕಾರಣ ರೈತರ ಕೋರಿಕೆಯ ಮೇರೆಗೆ ಕಾಮಗಾರಿ ಸ್ಥಗಿತವಾಗಿತ್ತು. ಈಗಾಗಲೇ ಕಾಲುವೆಯಲ್ಲಿ ನೀರು ಸ್ಥಗಿತಗೊಳಿಸಿರುವುದರಿಂದ ಕಾಮಗಾರಿಯನ್ನು ಮುಂದುವರೆಸಲು ಹಾಗೂ ರೈತರಿಗೆ ಅನುಕೂಲವಾಗುವಂತೆ ನಿರ್ವಹಿಸಲು ಗುತ್ತಿಗೆದಾರರಿಗೆ ಸೂಚಿಸಲಾಗುವುದು ಎಂದರು.
ಈ ಸಂದರ್ಭ ಅಚ್ಚುಕಟ್ಟು ರೈತರಾದ ಕೋಳಿಬೈಲು ನಾಣಯ್ಯ, ಪ್ರಕಾಶ್, ಮುತ್ತಪ್ಪ, ದೇವರಾಜು, ಚೇತನ್, ಮಲ್ಲಪ್ಪ, ಖಾದರ್, ರವೀಂದ್ರ ಮೊದಲಾದವರಿದ್ದರು.